ETV Bharat / business

ವರ್ಷಾಂತ್ಯಕ್ಕೆ ಕಬ್ಬು ಕೃಷಿಕರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ: 3,500 ಕೋಟಿ ರೂ. ಸಬ್ಸಿಡಿ - ಮೂಲಸೌಕರ್ಯ ಸುಧಾರಣೆಗೆ ಸಚಿವ ಸಂಪುಟ ಅನುಮೋದನೆ

60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು 3,500 ಕೋಟಿ ರೂ. ಸಹಾಯಧನವನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದಿಸಿದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರಿಗೆ ನೀಡಲಾಗುವುದು ಎಂದು ಜಾವಡೇಕರ್ ತಿಳಿಸಿದ್ದಾರೆ.

Prakash Javedkar
ಪ್ರಕಾಶ್ ಜಾವಡೇಕರ್
author img

By

Published : Dec 16, 2020, 4:30 PM IST

ನವದೆಹಲಿ: ಮುಂದಿನ ಸುತ್ತಿನ ಸ್ಪೆಕ್ಟ್ರಮ್(ತರಂಗಾಂತರ) ಹರಾಜಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕಬ್ಬು ಬೆಳೆಗಾರರಿಗೆ ಪರಿಹಾರ, ಈಶಾನ್ಯ ರಾಜ್ಯಗಳಲ್ಲಿ ವಿದ್ಯುತ್ ಮೂಲಸೌಕರ್ಯ ಸುಧಾರಣೆ ಮತ್ತು ಸ್ಪೆಕ್ಟ್ರಮ್ ಹರಾಜಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಟೆಲಿಕಾಂ ಇಲಾಖೆಯ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್ ಮೇ ತಿಂಗಳಲ್ಲಿ ಕ್ಯಾಬಿನೆಟ್ ಅನುಮೋದನೆಗೆ ಒಳಪಟ್ಟು ಸ್ಪೆಕ್ಟ್ರಮ್ ಹರಾಜು ಯೋಜನೆಯನ್ನು ಅನುಮೋದಿಸಿತು. ಮುಂದಿನ ಸುತ್ತಿನ ಹರಾಜಿನಲ್ಲಿ 5.22 ಲಕ್ಷ ಕೋಟಿ ರೂ. ಮೌಲ್ಯದ ತರಂಗಾಂತರಗಳನ್ನು ಮಾರಾಟ ಮಾಡಲು ಡಿಒಟಿ ಇನ್ನೂ ಯಾವುದೇ ಅಧಿಸೂಚನೆಯೊಂದಿಗೆ ಹೊರಬಂದಿಲ್ಲ.

ಜಿಯೋ ಪ್ರಕಾರ, 3.92 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಮ್ ಹರಾಜಿನಲ್ಲಿ ಡಿಒಟಿಯೊಂದಿಗೆ ಬಳಕೆಯಾಗದೆ ಬಿದ್ದಿದೆ.

ಟೆಲಿಕಾಂ ಸಚಿವಾಲಯವು ಟೆಲಿಕಾಂ ಆಪರೇಟರ್‌ಗಳಿಂದ ಸ್ಪೆಕ್ಟ್ರಮ್ ಬಳಕೆಯ ಶುಲ್ಕವಾಗಿ ಸರಾಸರಿ 5 ಪ್ರತಿಶತದಷ್ಟು ಆದಾಯ ಪಡೆಯುತ್ತಿದೆ. ಇದನ್ನು ಸ್ಪೆಕ್ಟ್ರಮ್ ಸ್ವಾಮ್ಯದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಸಂವಹನ ಸೇವೆಗಳ ಮಾರಾಟದಿಂದ ಗಳಿಸಿದ ಆದಾಯದ ಶೇ 8ರಷ್ಟು ಪರವಾನಗಿ ಶುಲ್ಕ ಪಡೆಯಲಾಗುತ್ತದೆ.

ಓದಿ: ಕಚ್ಚಾ ತೈಲ ಬೇಡಿಕೆ ಜಿಗಿತ: ಪ್ರತಿ ಬ್ಯಾರೆಲ್​ ಮೇಲೆ 22 ರೂ. ಏರಿಕೆ

2020-21ರ ಮಾರುಕಟ್ಟೆ ವರ್ಷದಲ್ಲಿ 60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಸಕ್ಕರೆ ಕಾರ್ಖಾನೆಗಳಿಗೆ 3,500 ಕೋಟಿ ರೂ. ಸಬ್ಸಿಡಿಯನ್ನು ಸರ್ಕಾರ ಅಂಗೀಕರಿಸಿದೆ.

60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು 3,500 ಕೋಟಿ ರೂ. ಸಹಾಯಧನವನ್ನು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಅನುಮೋದಿಸಿದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರಿಗೆ ನೀಡಲಾಗುವುದು ಎಂದು ಜಾವಡೇಕರ್ ತಿಳಿಸಿದ್ದಾರೆ.

ವಾರ್ಷಿಕ 260 ಲಕ್ಷ ಟನ್‌ಗಳ ಬೇಡಿಕೆಗೆ ಹೋಲಿಸಿದರೆ 310 ಲಕ್ಷ ಟನ್‌ಗಳಷ್ಟು ಹೆಚ್ಚಿನ ದೇಶೀಯ ಉತ್ಪಾದನೆಯಿಂದಾಗಿ ಸಕ್ಕರೆ ಉದ್ಯಮ ಮತ್ತು ಕಬ್ಬು ಬೆಳೆಗಾರರು ಬಿಕ್ಕಟ್ಟಿನಲ್ಲಿದ್ದಾರೆ. ಈ ನಿರ್ಧಾರವು 5 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.