ETV Bharat / business

ಅರ್ಹ ಸಾಲಗಾರರ ಚಕ್ರ ಬಡ್ಡಿ ಪಾವತಿಸುವಂತೆ ಬ್ಯಾಂಕ್​ಗಳಿಗೆ ಸೂಚನೆ: ಸುಪ್ರೀಂಗೆ ಕೇಂದ್ರ ಅಫಿಡವಿಟ್​ - ಚಕ್ರ ಬಡ್ಡಿ ಪಾವತಿಯ ಇತ್ತೀಚಿನ ಸುದ್ದಿ

ಕೋವಿಡ್​ -19ರ ನಂತರ ಘೋಷಿಸಲಾದ 6 ತಿಂಗಳ ಸಾಲ ನಿಷೇಧದ ಅವಧಿಗೆ ಸಾಲ ಪಡೆದವರ ಖಾತೆಗಳಿಗೆ ಸಾಲ ನೀಡುವ ಸಂಸ್ಥೆಗಳು ಈ ಮೊತ್ತವನ್ನು ಪಾವತಿಸಲಿವೆ. ಸಚಿವಾಲಯವು ಇದಕ್ಕಾಗಿ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ ಎಂದು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

borrowers
ಸಾಲ
author img

By

Published : Oct 27, 2020, 10:39 PM IST

ನವದೆಹಲಿ: ಅರ್ಹ ಸಾಲಗಾರರ ಖಾತೆಗಳಿಗೆ ಆರ್‌ಬಿಐನ ಸಾಲ ನಿಷೇಧ ಯೋಜನೆಯ ಸಂದರ್ಭದಲ್ಲಿ ಚಕ್ರ ಬಡ್ಡಿ ಮತ್ತು 2 ಕೋಟಿ ರೂ. ಸಾಲದ ಮೇಲೆ ಸಂಗ್ರಹಿಸಿದ ಸರಳ ಬಡ್ಡಿ ಅನ್ನು ನವೆಂಬರ್ 5ರ ಒಳಗೆ ಪಾವತಿಸುವಂತೆ ಎಲ್ಲಾ ಸಾಂಸ್ಥಿಕ ಸಾಲದಾತರಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಈ ಮೊತ್ತವನ್ನು ಜಮಾ ಮಾಡಿದ ನಂತರ ಸಾಲ ನೀಡುವ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯುತ್ತವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಕೋವಿಡ್​ -19ರ ನಂತರ ಘೋಷಿಸಲಾದ 6 ತಿಂಗಳ ಸಾಲ ನಿಷೇಧದ ಅವಧಿಗೆ ಸಾಲ ಪಡೆದವರ ಖಾತೆಗಳಿಗೆ ಸಾಲ ನೀಡುವ ಸಂಸ್ಥೆಗಳು ಈ ಮೊತ್ತವನ್ನು ಪಾವತಿಸಲಿವೆ. ಸಚಿವಾಲಯವು ಇದಕ್ಕಾಗಿ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ ಎಂದು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಈ ಯೋಜನೆಯಡಿಯಲ್ಲಿ ಎಲ್ಲಾ ಸಾಲ ನೀಡುವ ಸಂಸ್ಥೆಗಳು (ಯೋಜನೆಯ ಷರತ್ತು 3ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ) 2020ರ ಮಾರ್ಚ್ 1ರಿಂದ 2020ರ ಆಗಸ್ಟ್ 31ರ ನಡುವಿನ ಅವಧಿಗೆ ಅರ್ಹ ಸಾಲಗಾರರ ಆಯಾ ಖಾತೆಗಳಲ್ಲಿನ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಕ್ರೆಡಿಟ್ ಮಾಡಲಾಗುವುದು ಹೇಳಿದೆ.

3ನೇ ಷರತ್ತಿನಲ್ಲಿ ವಿವರಿಸಿರುವಂತೆ ಎಲ್ಲಾ ಸಾಲ ನೀಡುವ ಸಂಸ್ಥೆಗಳು ಯೋಜನಾ ಜಾರಿಗೆ ತರಲಿವೆ. 2020ರ ನವೆಂಬರ್ 5 ರೊಳಗೆ ಸಾಲಗಾರರ ಆಯಾ ಖಾತೆಗಳಲ್ಲಿ ಯೋಜನೆಯ ಪ್ರಕಾರ ಲೆಕ್ಕ ಹಾಕಿದ ಮೊತ್ತ ಜಮಾ ಮಾಡಬೇಕೆಂದು ಕೇಂದ್ರ ಸರ್ಕಾರ ನಿರ್ದೇಶಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.