ಲಖನೌ: ಭಾರತೀಯ ಸೇನೆಯ ಜನರಲ್ ಡ್ಯೂಟಿ (ಜಿಡಿ) ಪಡೆಯಲ್ಲಿ ಪ್ರಥಮ ಬಾರಿಗೆ ನಾರಿಯರ ನೇಮಕ ಪ್ರಕ್ರಿಯೆಯು ಲಖನೌದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 12ರಿಂದ ಆರಂಭವಾಗಿ ಸೆಪ್ಟೆಂಬರ್ 20ರಂದು ಮುಕ್ತಾಯವಾಗುವ ಇಂಡಿಯನ್ ಆರ್ಮಿಯ ನೇಮಕಾತಿ ಸಮಾವೇಶದಲ್ಲಿ ಜನರಲ್ ಡ್ಯೂಟಿ (ಜಿಡಿ) ವಿಭಾಗಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ.
ವಿವಿಧ ವಿಭಾಗದ ಆರ್ಮಿ ಹುದ್ದೆಗಳಿಗೆ ಸುಮಾರು 2 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಇದರಲ್ಲಿ ನೂರು ಮಹಿಳೆಯರನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಲಿದ್ದೇವೆ. ಬಹುತೇಕರಿಗೆ ನೇಮಕಾತಿಯು ಯಾವ ರೀತಿ ನಡೆಯುತ್ತದೆ ಎಂಬುದು ತಿಳಿದಿಲ್ಲ. ಬಹಳಷ್ಟು ಜನರು ಸೇನೆಗೆ ಸೇರ್ಪಡೆ ಆಗಬೇಕು ಎಂಬ ಹಂಬಲ ಹೊಂದಿದ್ದಾರೆ. ಆದರೆ, ಆಯ್ಕೆಯ ಮಿತಿ ಕಡಿಮೆಯಾಗಿದ್ದು, ನೋಂದಣಿ ಮಾಡಿಕೊಂಡವರನ್ನು ಮಾತ್ರವೇ ಪರೀಕ್ಷೆಯ ಮೂಲಕ ನೇಮಿಸಿಕೊಳ್ಳುತ್ತೇವೆ ಎಂದು ಕರ್ನಲ್ ಅಶುತೋಷ್ ಮೆಹ್ತಾ ಹೇಳಿದ್ದಾರೆ.