ETV Bharat / business

ಸಾಲದ ಸುಳಿಯಲ್ಲಿರುವ SAILಗೆ ಮೊದಲ ಮಹಿಳೆ ಸಾರಥಿ!: ಮೊಂಡಾಲ್‌ ಆಗುವರೇ 'ಉಕ್ಕಿ'ನ ಮಹಿಳೆ?

author img

By

Published : Jan 1, 2021, 6:15 PM IST

ಕಂಪನಿಯನ್ನು ಈಗಿನ ಸುಮಾರು 50,000 ಕೋಟಿ ರೂ. ಸಾಲದಿಂದ ಮುಕ್ತಗೊಳಿಸುವುದು, ಆಪರೇಟಿಂಗ್ ಮಾರ್ಜಿನ್ ಮತ್ತು ಉದ್ಯೋಗಿಗಳ ಉತ್ಪಾದಕತೆ ಸುಧಾರಿಸುವುದು, 10 ವರ್ಷಗಳಲ್ಲಿ ಉದ್ದೇಶಿತ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು, ವಾರ್ಷಿಕ 50 ಮಿಲಿಯನ್ ಟನ್ ಉಕ್ಕು ತಯಾರಿಕೆ ನಿಗದಿಪಡಿಸುವುದು ನೂತನ ಅಧ್ಯಕ್ಷೆ ಸೋಮ ಮೊಂಡಾಲ್ ಅವರ ಮುಂದಿರುವ ಸವಾಲುಗಳಾಗಿವೆ.

Soma Mondal
ಸೋಮ ಮೊಂಡಾಲ್

ನವದೆಹಲಿ: ಸಾರ್ವಜನಿಕ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ (SAIL​) ಮೊದಲ ಮಹಿಳಾ ಅಧ್ಯಕ್ಷರಾಗಿ ಸೋಮ ಮೊಂಡಾಲ್ ಅಧಿಕಾರ ವಹಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಅವರು ಸೈಲ್​​ನ ವಾಣಿಜ್ಯ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಈಗ ಉಕ್ಕು ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ ಎಂದು ದೇಶದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿ ಹೇಳಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್​ಕೆಲಾದಿಂದ 1984ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರೆಯಾದ ಮೊಂಡಾಲ್, ನ್ಯಾಲ್ಕೊದಲ್ಲಿ ಪದವೀಧರ ಎಂಜಿನಿಯರ್ ತರಬೇತುದಾರರಾಗಿ ವೃತ್ತಿಜೀವನ ಪ್ರಾರಂಭಿಸಿದರು. ನ್ಯಾಲ್ಕೊದಲ್ಲಿ ವಾಣಿಜ್ಯ ವಿಭಾಗದ ನಿರ್ದೇಶಕಿ ಹುದ್ದೆಗೂ ಏರಿದ್ದರು.

ವಾಣಿಜ್ಯ ವಿಭಾಗದಲ್ಲಿ ನಿರ್ದೇಶಕರಾಗಿ 2017ರಲ್ಲಿ ಸೈಲ್‌ಗೆ ಸೇರಿದರು. ಜೂನಿಯರ್ ಮ್ಯಾನೇಜರ್ ಮತ್ತು ಡೈರೆಕ್ಟರ್ (ಫೈನಾನ್ಸ್) ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕಂಪನಿಗೆ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಅನಿಲ್ ಕುಮಾರ್ ಚೌಧರಿ ಅವರಿಂದ ತೆರವಾದ ಹುದ್ದೆ ಅಲಂಕರಿಸಿದ್ದಾರೆ.

ನಮ್ಮ ಟಾಪ್​ಲೈನ್​ (ಆದಾಯ) ಮತ್ತು ಬಾಟಮ್​ ಲೈನ್ ​​(ಲಾಭ) ಅನ್ನು ಸುಧಾರಿಸುವುದು ನಮ್ಮ ತಕ್ಷಣದ ಗಮನವಾಗಿದೆ. ನಮ್ಮ ಎಲ್ಲಾ ಮಧ್ಯಸ್ಥಗಾರರಿಗೆ ಮೌಲ್ಯವನ್ನು ಸುಧಾರಿಸಲು ಮತ್ತು ಅದನ್ನು ರಚನಾತ್ಮಕವಾಗಿ ಬಲಪಡಿಸಲು ನಾವು ಎಲ್ಲಾ ತಂತ್ರಗಳನ್ನು ರೂಪಿಸುತ್ತಿದ್ದೇವೆ ಎಂದು ಮೊಂಡಾಲ್ ಹೇಳಿದರು.

ಓದಿ: ವರ್ಷದ ಮೊದಲ ದಿನ ಚಿನ್ನ, ಬೆಳ್ಳಿ ಓಟಕ್ಕೆ ಬ್ರೇಕ್​: ಇಂದಿನ ದರ ಹೀಗಿದೆ..

ಎಸ್‌ಐಎಲ್ ತನ್ನ ಉದ್ಯೋಗಿಗಳು ಮತ್ತು ನಾಯಕತ್ವದಿಂದಾಗಿ ದಶಕಗಳಿಂದ ಅಪಾರ ಕೊಡುಗೆ ನೀಡಿಕೊಂಡು ಬರುವಂತಹ ಶ್ರೀಮಂತ ಪರಂಪರೆ ಹೊಂದಿದೆ ಎಂದು ಹೇಳಿದರು.

ಕಂಪನಿಯ ಈಗಿನ ಸುಮಾರು 50,000 ಕೋಟಿ ರೂ. ಸಾಲದಿಂದ ಮುಕ್ತವಾಗಿಸುವುದು. ಆಪರೇಟಿಂಗ್ ಮಾರ್ಜಿನ್ ಮತ್ತು ಉದ್ಯೋಗಿಗಳ ಉತ್ಪಾದಕತೆ ಸುಧಾರಿಸುವುದು, 10 ವರ್ಷಗಳಲ್ಲಿ ಉದ್ದೇಶಿತ ದ್ವಿಗುಣಗೊಳಿಸುವ ಸಾಮರ್ಥ್ಯಕ್ಕೆ ವಾರ್ಷಿಕ 50 ಮಿಲಿಯನ್ ಟನ್ (ಎಂಟಿಪಿಎ) ತಯಾರಿಕೆ ನಿಗದಿಪಡಿಸುವುದು ಅವರ ಮುಂದಿರುವ ಸವಾಲುಗಳಾಗಿವೆ.

ಉಕ್ಕಿನ ಬೆಲೆಯಲ್ಲಿನ ತೀವ್ರ ಏರಿಕೆ, ಹೆಚ್ಚಿನ ಬೇಡಿಕೆ ಹಾಗೂ ಕಬ್ಬಿಣದ ಅದಿರು ಪೂರೈಕೆ ಕೊರತೆಯು ಕಂಪನಿಯ ಬೆಳವಣಿಗೆ ಹಿಡಿದಿಡುವ ಸಾಧ್ಯತೆಯಿದೆ. ಸೇಲ್ ತನ್ನ ಎಲ್ಲಾ ಕಬ್ಬಿಣದ ಅದಿರಿನ ಅವಶ್ಯಕತೆಗಳನ್ನು ಹಳೆಯ ಮೂಲಗಳಿಂದ ಪೂರೈಸಿಕೊಳ್ಳುವುದರಿಂದ ಮಾರಾಟ ಹಾಗೂ ಆಮದಿನ ಎರಡೂ ಮೂಲಗಳಿಂದ ಲಾಭ ಪಡೆಯುತ್ತದೆ.

12 ವರ್ಷಗಳ ಸುದೀರ್ಘ ಕಾಲ ಉಕ್ಕಿನ ಮಾರುಕಟ್ಟೆಯಲ್ಲಿರುವ ಸೇಲ್‌ನ ಷೇರುಗಳು ಈಗ ಬಿಎಸ್‌ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟದಲ್ಲಿ ಸುಳಿದಾಡುತ್ತಿವೆ. ಕಲ್ಲಿದ್ದಲು ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಉಕ್ಕಿನ ಉದ್ಯಮಕ್ಕೆ ಇದುವರೆಗೂ ಹಾನಿಕರವಾಗಿಲ್ಲ. ಒಂದು ವೇಳೆ ಆಮದು ಮೇಲೆ ಬ್ಯಾಂಕ್​ಗಳು ಹೆಚ್ಚು ಪರಿಣಾಮ ಬೀರಿದರೇ ಇದನ್ನು ಹಾಳುಗೆಡವಬಹುದು.

ಕಂಪನಿಯ ದೀರ್ಘಕಾಲದ ವೇತನ ಪರಿಷ್ಕರಣೆ ಮತ್ತೊಂದು ದೊಡ್ಡ ಚಿಂತೆಯಾಗಿದೆ. ಕಂಪನಿಯ ಕಾರ್ಯನಿರ್ವಾಹಕರಲ್ಲದವರು ಬಹುಮತ ಹೊಂದಿರುವವರು ಈಗ ಐದು ವರ್ಷಗಳಿಂದ ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಕಾರ್ಯನಿರ್ವಾಹಕರು ಸಹ 2017ರಿಂದ ಪರಿಷ್ಕರಣೆಗಾಗಿ ಎದುರು ನೋಡುತ್ತಿದ್ದಾರೆ.

ಸೈಲ್​ನ ನೌಕರರ ಒಕ್ಕೂಟದ ಒಂದು ಭಾಗವು ಈಗಾಗಲೇ ಈ ವಿಷಯದ ಬಗ್ಗೆ ತಮ್ಮ ಅಸಮಾಧಾನವನ್ನು ಮೊಂಡಾಲ್‌ಗೆ ತಿಳಿಸಿದ್ದಾರೆ. ಆದರೆ ಕಂಪನಿಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ಹೊಸ ಅಧ್ಯಕ್ಷರಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಸ್ವಲ್ಪ ಅಧಿಕಾರ ವಹಿಸಿಕೊಂಡ ಬಳಿಕ ಡಿಸೆಂಬರ್ 31ರಂದು ನಿವೃತ್ತಿ ಆಗುತ್ತಿರುವ ಅನಿಲ್ ಕುಮಾರ್ ಚೌಧರಿ, ನೌಕರರಿಗೆ ವಿಶ್ರಾಂತಿ ರಜೆ ನೀಡುವುದು ಸೇರಿದಂತೆ ಕೆಲವು ಕೆಚ್ಚೆದೆಯ ಕ್ರಮಗಳನ್ನು ತೆಗೆದುಕೊಂಡ ಕಂಪನಿಯ ಭವಿಷ್ಯವನ್ನು ತಿರುಗಿಸುವ ಕೆಲಸ ಶ್ಲಾಘನೀಯವಾಗಿದೆ. 2016ರಿಂದ ಪ್ರಾರಂಭವಾಗುವ ಹಿಂದಿನ ಮೂರು ವರ್ಷಗಳಲ್ಲಿ ಸೈಲ್​ ನಷ್ಟವನ್ನು ಅನುಭವಿಸುತ್ತಿದ್ದರೂ ಸಹ ಕಂಪನಿಯನ್ನು ಮುನ್ನಡೆಸಿದ್ದಾರೆ. ಅನಿಲ್​ ಅವರು ಇದುವರೆಗೂ ಹೊತ್ತ ಸೈಲ್​ನ ಭಾರವನ್ನು ಮೊಂಡಾಲ್ ಹೆಗಲಿಗೆ ಹೊರಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.