ನವದೆಹಲಿ: ನ್ಯಾಯಾಲಯದ ಹಿಂದಿನ ಆದೇಶಗಳಿಗೆ ಅನುಸಾರವಾಗಿ 62,602.90 ಕೋಟಿ ರೂ. ಪಾವತಿಗೆ ಎರಡು ಸಹಾರಾ ಸಂಸ್ಥೆಗಳಿಗೆ ನಿರ್ದೇಶನ ಕೋರಿ ಮಾರುಕಟ್ಟೆ ನಿಯಂತ್ರಕ ಸೆಬಿ ಸುಪ್ರೀಂಕೋರ್ಟ್ ಕದ ತಟ್ಟಿದ್ದು, ಹಣ ನೀಡಲು ವಿಫಲವಾದ ಗುಂಪಿನ ಮುಖ್ಯಸ್ಥ ಸುಬ್ರತಾ ರಾಯ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ರಾಯ್ ಮತ್ತು ಅವರ ಎರಡು ಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ ( ಎಸ್ಐಆರ್ಇಸಿಎಲ್) ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಎಚ್ಐಸಿಎಲ್) ಸಂಪೂರ್ಣ ಠೇವಣಿಗೆ ಸಂಬಂಧ ನ್ಯಾಯಾಲಯವು ಜಾರಿಗೊಳಿಸಿದ ನಾನಾ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿವೆ ಎಂದು ಸೆಬಿ ನ್ಯಾಯಾಲಯಕ್ಕೆ ತಿಳಿಸಿದೆ.
ಉನ್ನತ ನ್ಯಾಯಾಲಯವು ರಾಯ್ ಮತ್ತು ಅವರ ಸಂಸ್ಥೆಗಳಿಗೆ ವಿವಿಧ ಪರಿಹಾರ ನೀಡಿತ್ತು. ನ್ಯಾಯಾಲಯವು ಜಾರಿಗೊಳಿಸಿದ ವಿವಿಧ ಆದೇಶಗಳನ್ನು ನಿರ್ಲಕ್ಷಿಸಿ ಪಾವತಿಗೆ ವಿಫಲರಾಗಿದ್ದಾರೆ ಎಂದು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (ಸೆಬಿ) ಹೇಳಿದೆ.
ನವೆಂಬರ್ 18ರಂದು ಸಲ್ಲಿಸಿದ ತನ್ನ ಹಸ್ತಕ್ಷೇಪ ಅರ್ಜಿಯಲ್ಲಿ ಸೆಬಿ, ನ್ಯಾಯಾಲಯವು ಅವರಿಗೆ ದೀರ್ಘ ವಿನಾಯತಿ ನೀಡಿದ್ದರೂ ಸಹ ಅವರು ತಾವು ನೀಡಿದ ಆದೇಶಗಳನ್ನು ಪಾಲಿಸುತ್ತಿಲ್ಲ. ಅವರ ಹೊಣೆಗಾರಿಕೆ ಪ್ರತಿದಿನ ಹೆಚ್ಚುತ್ತಿದೆ ಎಂದು ಹೇಳಿದೆ.
ನ್ಯಾಯಾಲಯವು ಅಂಗೀಕರಿಸಿದ ಆದೇಶಗಳನ್ನು ಅನುಸರಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಕಾಲಕಾಲಕ್ಕೆ ಮತ್ತಷ್ಟು ಅವಕಾಶ ನೀಡಲಾಗಿದೆ. ಈ ವರ್ಷದ ಸೆಪ್ಟೆಂಬರ್ 30ರ ವೇಳೆಗೆ 62,602.90 ಕೋಟಿ ರೂ. ಬಾಕಿ ಮೊತ್ತ ಸೆಬಿ-ಸಹಾರಾ ಖಾತೆಗೆ ಪಾವತಿ ಮಾಡುವಂತೆ ಸಹಾರಾಗಳಿಗೆ ನಿರ್ದೇಶನ ನೀಡುವ ನ್ಯಾಯಾಲಯವು ಆದೇಶ ನ್ಯಾಯಸಮ್ಮತ ಎಂದು ಎಂದು ಮಾರುಕಟ್ಟೆ ನಿಯಂತ್ರಕ ಹೇಳಿದೆ.