ETV Bharat / business

ಪೈಲಟ್​​ ಮೇಲೆ ಬೆಕ್ಕಿನ ದಾಳಿಗೆ ವಿಮಾನ ತುರ್ತು ಭೂಸ್ಪರ್ಶ: ಕಾಕ್​ಪಿಟ್​ಗೆ ಎಂಟ್ರಿಯಾಗಿದ್ದೇಗೆ? - ಸುಡಾನ್​ನಲ್ಲಿ ವಿಮಾನ ತುರ್ತು ಭೂಸ್ಪರ್ಶ

ಟಾರ್ಕೊ ಏವಿಯೇಷನ್ ​​ವಿಮಾನವು ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಿಂದ ಕತಾರ್‌ಗೆ ಹೊರಟಿತ್ತು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ, ಕಾಕ್‌ಪಿಟ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಪೈಲಟ್‌ ಮೇಲೆ ದಾಳಿ ನಡೆಸಿತು. ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದು, ಬೆಕ್ಕು ವಿಮಾನಕ್ಕೆ ಹೇಗೆ ಬಂತು ಎಂಬುದು ಸ್ಪಷ್ಟವಾಗಿಲ್ಲ.

Emergency Landing
Emergency Landing
author img

By

Published : Mar 5, 2021, 8:12 AM IST

ಖಾರ್ಟೂಮ್‌: ಕಾಕ್​ಪಿಟ್​​ನಲ್ಲಿ ಬೆಕ್ಕೊಂದು ಆಶ್ಚರ್ಯಕರವಾಗಿ ಕಾಣಿಸಿಕೊಂಡು ಪೈಲಟ್ ಮೇಲೆ ದಾಳಿ ನಡೆಸಿದ್ದರಿಂದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ಕಾಕ್‌ಪಿಟ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಪೈಲಟ್ ಮತ್ತು ಸಿಬ್ಬಂದಿಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ನಂತರ ಕತಾರ್‌ನಿಂದ ಹೊರಟ ವಿಮಾನವು ಸುಡಾನ್‌ನ ರಾಜಧಾನಿ ಖಾರ್ಟೂಮ್‌ಗೆ ಮರಳಿ ತುರ್ತು ಭೂಸ್ಪರ್ಶ ಮಾಡಿತು.

ಟಾರ್ಕೊ ಏವಿಯೇಷನ್ ​​ವಿಮಾನವು ಸುಡಾನ್‌ನ ರಾಜಧಾನಿಯಾದ ಖಾರ್ಟೂಮ್‌ನಿಂದ ಕತಾರ್‌ಗೆ ಹೊರಟಿತ್ತು. ಟೇಕ್‌ಆಫ್ ಆದ ಸ್ವಲ್ಪ ಸಮಯದ ನಂತರ, ಕಾಕ್‌ಪಿಟ್‌ನಲ್ಲಿ ಬೆಕ್ಕು ಕಾಣಿಸಿಕೊಂಡು ಪೈಲಟ್‌ನ ಮೇಲೆ ದಾಳಿ ನಡೆಸಿತು. ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಿದ್ದು, ಬೆಕ್ಕು ವಿಮಾನಕ್ಕೆ ಹೇಗೆ ಸಿಕ್ಕಿತು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಏರಿಕೆ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್​ ಕೊಟ್ಟ ಒಪೆಕ್​!

ವಿಮಾನ ನಿಲ್ದಾಣದಲ್ಲಿ ರಾತ್ರಿಯ ವೇಳೆ ಬೆಕ್ಕು ಅಲ್ಲಿಗೆ ಬಂದಿರಬಹುದು. ರಾತ್ರಿಯಲ್ಲಿ ವಿಮಾನವನ್ನು ಸ್ವಚ್ಛಗೊಳಿಸುವಾಗ ಬೆಕ್ಕು ವಿಮಾನ ಒಳಹೊಕ್ಕಿರಬಹುದು ಎನ್ನಲಾಗುತ್ತಿದೆ.

ಟೊರ್ಕೊ ಏವಿಯೇಷನ್ ​​ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಮಾನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.