ನವದೆಹಲಿ: ಕೊರೊನಾ ಪ್ರೇರೇಪಿತ ಜಾಗತಿಕ ಲಾಕ್ಡೌನ್ನಿಂದಾಗಿ ಸಾಗರೋತ್ತರ ರಾಷ್ಟ್ರಗಳಲ್ಲಿ ಸಿಲುಕಿದ್ದ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿ 17.22 ಲಕ್ಷ ಜನರನ್ನು ತವರಿಗೆ ಕರೆ ತರಲಾಗಿದೆ.
ಈ ಮಿಷನ್ಗಾಗಿ ವಾಯುಯಾನ, ರಸ್ತೆ ಸಾರಿಗೆ ಹಾಗೂ ನೌಕಯಾನ ಬಳಸಿಕೊಳ್ಳಲಾಗಿದೆ. ಪ್ರಪಂಚದಾದ್ಯಂತದ ಭಾರತೀಯ ಮಿಷನ್ ಮತ್ತು ಪೋಸ್ಟ್‌ಗಳು ಕೈಗೊಂಡ 24x7 ಬೃಹತ್ ಸಮನ್ವಯ ಕಾರ್ಯದಿಂದಾಗಿ ಇದೆಲ್ಲವೂ ಸಾಧ್ಯವಾಯಿತು. 2020ರ ಅಕ್ಟೋಬರ್ 9ಕ್ಕೆ 74 ವರ್ಷ ತುಂಬಿದ ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್), ವಿದೇಶಗಳಲ್ಲಿ ಸಂಕಟದಲ್ಲಿ ಸಿಲುಕಿದವರು ರಕ್ಷಣೆಗೆ ಮುಂಚೂಣಿಯಲ್ಲಿದೆ.
ಎದುರಾದ ವ್ಯವಸ್ಥಾಪಕ ಸವಾಲುಗಳನ್ನು ಮೆಟ್ಟಿ ಕೇಂದ್ರದ ಅನೇಕ ಸಚಿವಾಲಯಗಳು, ರಾಜ್ಯ ಸಂಸ್ಥೆಗಳು, ಐಎಫ್‌ಎಸ್ ಅಧಿಕಾರಿಗಳ ತಂಡಗಳು 150ಕ್ಕೂ ಹೆಚ್ಚು ದೇಶಗಳಿಗೆ ಔಷಧ ಮತ್ತು ಕೋವಿಡ್ -19 ರಕ್ಷಣಾ ಸಾಮಗ್ರಿಗಳನ್ನು ಒದಗಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದವು.
ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಭಾರತೀಯ ಫಾರ್ಮಾ ಉದ್ಯಮವು ದೇಶಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಒಂದು ಆಸ್ತಿಯಾಗಿ ಹೊರಹೊಮ್ಮಿತು.
ಅಕ್ಟೋಬರ್ 7ರಂದು ವಿಬಿಎಂನ ವಿವಿಧ ವಿಧಾನಗಳ ಮೂಲಕ ಸುಮಾರು 17.22 ಲಕ್ಷ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಇವುಗಳಲ್ಲಿ ಏರ್ ಇಂಡಿಯಾ ವಿಮಾನಗಳು, ಭಾರತೀಯ ನೌಕಾ ಹಡಗುಗಳು, ಚಾರ್ಟರ್ ವಿಮಾನಗಳು, ಖಾಸಗಿ ಮತ್ತು ವಿದೇಶಿ ವಾಹಕಗಳು ಮತ್ತು ಭೂ ಪಡೆಗಳು ಸೇರಿವೆ.
ಅಕ್ಟೋಬರ್ 7 ರಿಂದ 6ನೇ ಹಂತದ ವಿಬಿಎಂ ಪ್ರಾರಂಭವಾದಾಗ 25 ದೇಶಗಳಿಂದ ಸುಮಾರು 873 ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿಗದಿಪಡಿಸಲಾಗಿದೆ. ಈ ವಿಮಾನಗಳು ಇಡೀ ತಿಂಗಳಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳಲ್ಲಿ 14 ದೇಶಗಳ ವಿಮಾನಗಳು ಸೇರಿವೆ.
ಈ ವಿಮಾನಗಳು ದೇಶಾದ್ಯಂತ 24 ವಿಮಾನ ನಿಲ್ದಾಣಗಳನ್ನು ತಲುಪುವ ನಿರೀಕ್ಷೆಯಿದೆ. ಅಂದಾಜು 1.7 ಲಕ್ಷ ಜನರನ್ನು ವಾಪಸ್ ಕರೆ ತರಲಿವೆ. ಅಕ್ಟೋಬರ್ 7ರವರೆಗೆ 873 ಅಂತಾರಾಷ್ಟ್ರೀಯ ವಿಮಾನಗಳಲ್ಲಿ 210 ವಿಮಾನಗಳು ಈಗಾಗಲೇ 18 ದೇಶಗಳಲ್ಲಿ ಕಾರ್ಯನಿರ್ವಹಿಸಿವೆ.