ETV Bharat / business

ನ.5ರೊಳಗೆ ಚಕ್ರ ಬಡ್ಡಿ ಮನ್ನಾ ಮಾಡುವಂತೆ ಬ್ಯಾಂಕ್​ಗಳಿಗೆ RBI ಸೂಚನೆ: ಇದರಿಂದ ಯಾರಿಗೆಲ್ಲ ಲಾಭ? - ಚಕ್ರ ಬಡ್ಡಿ ಮನ್ನಾದ ಇತ್ತೀಚಿನ ಸುದ್ದಿ

ಚಕ್ರ ಬಡ್ಡಿ ಮನ್ನಾ ಯೋಜನೆ ಅನುಷ್ಠಾನ ಯೋಜನೆ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿಯನ್ನು 2020ರ ಮಾರ್ಚ್ 1ರಿಂದ 2020ರ ಆಗಸ್ಟ್ 31ರ ನಡುವೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯೋಜಿತ ಬಡ್ಡಿ ನಡುವಿನ ವ್ಯತ್ಯಾಸ ಜಮಾ ಮಾಡುವ ಮೂಲಕ ಕಡ್ಡಾಯಗೊಳಿಸುತ್ತದೆ.

RBI
ಆರ್​​ಬಿಐ
author img

By

Published : Oct 27, 2020, 3:56 PM IST

ಮುಂಬೈ: 2020ರ ಮಾರ್ಚ್ 1ರಿಂದ ಪ್ರಾರಂಭವಾಗುವ ಆರು ತಿಂಗಳ ನಿಷೇಧದ ಅವಧಿಗೆ 2 ಕೋಟಿ ರೂ. ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿ ಮನ್ನಾ ಜಾರಿಗೆ ತರಲು ಬ್ಯಾಂಕೇತರ ಹಣಕಾಸು ಕಂಪನಿಗಳು ಸೇರಿದಂತೆ ಎಲ್ಲ ಸಾಲ ನೀಡುವ ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚಿಸಿದೆ.

ನಿಗದಿತ ಸಾಲ ಖಾತೆಗಳಲ್ಲಿ ಸಾಲಗಾರರಿಗೆ ಆರು ತಿಂಗಳ ಕಾಲ ಸಂಯೋಜಿತ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಷಿಯಾ ಪಾವತಿ ನೀಡುವ ಯೋಜನೆಯನ್ನು ಅಕ್ಟೋಬರ್ 23ರಂದು ಸರ್ಕಾರ ಘೋಷಿಸಿತ್ತು.

ಈ ಯೋಜನೆಯು ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿಯನ್ನು 2020ರ ಮಾರ್ಚ್ 1ರಿಂದ 2020ರ ಆಗಸ್ಟ್ 31ರ ನಡುವೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯೋಜಿತ ಬಡ್ಡಿ ನಡುವಿನ ವ್ಯತ್ಯಾಸ ಜಮಾ ಮಾಡುವ ಮೂಲಕ ಕಡ್ಡಾಯಗೊಳಿಸುತ್ತದೆ.

ಮೊತ್ತವನ್ನು ಸಾಲಗಾರರ ಖಾತೆಗಳಲ್ಲಿ ಜಮಾ ಮಾಡುವ ಪ್ರಕ್ರಿಯೆ ನವೆಂಬರ್ 5ರೊಳಗೆ ಪೂರ್ಣಗೊಳಿಸಲು ಸರ್ಕಾರ ಸಾಲ ನೀಡುವ ಸಂಸ್ಥೆಗಳಿಗೆ ಸೂಚಿಸಿತ್ತು.

ಎಲ್ಲ ಸಾಲ ನೀಡುವ ಸಂಸ್ಥೆಗಳಿಗೆ ಯೋಜನೆಯ ನಿಬಂಧನೆಗಳಿಂದ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗುತ್ತದೆ. ನಿಗದಿತ ಸಮಯದೊಳಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ.

ಬಡ್ಡಿ ಮನ್ನಾ ಯೋಜನೆ ಜಾರಿಗೆ ತರಲು ಸುಪ್ರೀಂಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯವು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆರ್‌ಬಿಐನ ನಿಷೇಧಾಜ್ಞೆಯ ಯೋಜನೆಯಡಿ 2 ಕೋಟಿ ರೂ.ವರೆಗಿನ ಸಾಲಕ್ಕೆ 'ಸಾಧ್ಯವಾದಷ್ಟು ಬೇಗ' ಬಡ್ಡಿ ಮನ್ನಾ ಜಾರಿಗೆ ತರಲು ಅಕ್ಟೋಬರ್ 14ರಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ವಸತಿ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ಎಂಎಸ್‌ಎಂಇ ಸಾಲ, ಗ್ರಾಹಕ ಬಾಳಿಕೆ ವಸ್ತುಗಳ ಸಾಲ ಮತ್ತು ಅನುತ್ಪಾದಕ ಸಾಲಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.