ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿರ್ದೇಶನದ ನಂತರ, ಹೊಸ ಇ-ಫೈಲಿಂಗ್ ಆದಾಯ ತೆರಿಗೆ ವೇದಿಕೆ ಪ್ರಾರಂಭಿಸಿದ ಮೊದಲ ದಿನದಂದು ಗಮನಿಸಿದ ಸಮಸ್ಯೆಗಳನ್ನು ಪರಿಹರಿಸಲು, ತಾವು ಮತ್ತು ತಮ್ಮ ತಂಡ ಕಾರ್ಯನಿರತವಾಗಿದೆ' ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದ್ದಾರೆ.
ಹೊಸ ಇ-ಫೈಲಿಂಗ್ ಪೋರ್ಟಲ್ ಫೈಲಿಂಗ್ ಪ್ರಕ್ರಿಯೆ ಸರಾಗಗೊಳ್ಳುತ್ತಿದೆ ಮತ್ತು ಅಂತಿಮ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ನಾವು ಮೊದಲ ದಿನದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ ಮತ್ತು ಅವುಗಳನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಇನ್ಫೋಸಿಸ್ ಈ ಆರಂಭಿಕ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸುತ್ತದೆ. ವಾರದಲ್ಲಿ ವ್ಯವಸ್ಥೆಯನ್ನು ಸ್ಥಿರಗೊಳಿಸುವ ನಿರೀಕ್ಷೆಯಿದೆ ಎಂದು ನಿಲೇಕಣಿ ಟ್ವೀಟ್ ಮಾಡಿದ್ದಾರೆ.
-
The new e-filing portal will ease the filing process and enhance end user experience. @nsitharaman ji, we have observed some technical issues on day one, and are working to resolve them. @Infosys regrets these initial glitches and expects the system to stabilise during the week. https://t.co/LocRBPCzpP
— Nandan Nilekani (@NandanNilekani) June 8, 2021 " class="align-text-top noRightClick twitterSection" data="
">The new e-filing portal will ease the filing process and enhance end user experience. @nsitharaman ji, we have observed some technical issues on day one, and are working to resolve them. @Infosys regrets these initial glitches and expects the system to stabilise during the week. https://t.co/LocRBPCzpP
— Nandan Nilekani (@NandanNilekani) June 8, 2021The new e-filing portal will ease the filing process and enhance end user experience. @nsitharaman ji, we have observed some technical issues on day one, and are working to resolve them. @Infosys regrets these initial glitches and expects the system to stabilise during the week. https://t.co/LocRBPCzpP
— Nandan Nilekani (@NandanNilekani) June 8, 2021
ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಅವರು ಈ ಹಿಂದೆ ಇನ್ಫೋಸಿಸ್ ಮತ್ತು ನಿಲೇಕಣಿಯನ್ನು ಕೇಳಿದ್ದರು.
ಹೊಸ ಆದಾಯ ತೆರಿಗೆ ಸಲ್ಲಿಸುವ ಪೋರ್ಟಲ್ ಇ-ಫೈಲಿಂಗ್ ಪೋರ್ಟಲ್ 2.0 ಅನ್ನು ಸೋಮವಾರ ಪ್ರಾರಂಭಿಸಲಾಯಿತು. ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಸಂಬಂಧಿಸಿದಂತೆ ತಾನು ಕುಂದುಕೊರತೆ ಮತ್ತು ತೊಂದರೆಗಳನ್ನು ಸ್ವೀಕರಿಸುತ್ತಿದ್ದೇನೆ. ತೆರಿಗೆ ಪಾವತಿದಾರರಿಗೆ ಅನುಸರಣೆಯಲ್ಲಿ ಸುಲಭವಾಗುವುದು ಕೇಂದ್ರಕ್ಕೆ ಮೊದಲ ಆದ್ಯತೆಯಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದರು.
ಇದನ್ನೂ ಓದಿ: GDP ವೃದ್ಧಿ ಅಂದಾಜು ಶೇ 8.3ಕ್ಕೆ ಇಳಿಕೆ: ಆದ್ರೂ 80 ವರ್ಷಗಳ ಆರ್ಥಿಕ ಹಿಂಜರಿತದಲ್ಲಿ ವೇಗದ ಬೆಳವಣಿಗೆ
ಬಹುನಿರೀಕ್ಷಿತ ಇ-ಫೈಲಿಂಗ್ ಪೋರ್ಟಲ್ 2.0 ಕಳೆದ ರಾತ್ರಿ 20: 45 ಗಂಟೆಗೆ ಪ್ರಾರಂಭಿಸಲಾಯಿತು. ಟಿಎಲ್ ಕುಂದುಕೊರತೆ ಮತ್ತು ತೊಂದರೆಗಳನ್ನು ನಾನು ಕಂಡಿದ್ದೇನೆ. ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ನಮ್ಮ ತೆರಿಗೆದಾರರನ್ನು ಸೇವೆಯ ಗುಣಮಟ್ಟದಲ್ಲಿ ನಿರಾಸೆ ಮಾಡುವುದಿಲ್ಲ ಎಂಬ ಭರವಸೆಯಿದೆ. ತೆರಿಗೆ ಪಾವತಿದಾರರಿಗೆ ಸುಲಭವಾಗಿ ಅನುಸರಣೆ ಮಾಡುವುದು ನಮ್ಮ ಆದ್ಯತೆಯಾಗಿರಬೇಕು ಎಂದು ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು.
ಕೆಲವು ಬಳಕೆದಾರರು ಹೊಸ ಪೋರ್ಟಲ್‌ನಲ್ಲಿ ಲೋಡಿಂಗ್ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತಗುಲಿದೆ ಎಂದು ಕೆಲವು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ. ಆದಾಗ್ಯೂ, ಕೆಲವರು ಹೊಸ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ.