ಲಂಡನ್: ಭಾರತ ಹಾಗೂ ಪಾಕಿಸ್ತಾನದ ನಡುವಿನ ದಶಕಗಳ ವಿವಾದಿತ ಹಣಕಾಸು ಸಂಬಂಧಿತ ವ್ಯಾಜ್ಯಯೊಂದು ನಿರ್ಣಾಕ ಘಟ್ಟದತ್ತ ಬಂದು ತಲುಪಿದೆ.
ಹೈದರಾಬಾದ್ ನಿಜಾಮರ ಸುಮಾರು ₹ 308.20 ಕೋಟಿ (35 ದಶಲಕ್ಷ ಪೌಂಡ್) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿದೆ.
ಲಂಡನ್‌ನ ನ್ಯಾಯಾಲಯದಲ್ಲಿ 2 ವಾರಗಳ ಕಾಲ ನಡೆದ ವಿಚಾರಣೆ ಪೂರ್ಣಗೊಂಡಿದ್ದು, ಇನ್ನು 6 ವಾರದೊಳಗಾಗಿ ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿಜಾಮರ ವಂಶಸ್ಥರಾದ ಪ್ರಿನ್ಸ್ ಮುಕರ್ರಮ್ ಝಾ ಹಾಗೂ ಅವರ ಕಿರಿಯ ಸಹೋದರ ಮುಫ‌್ಫಖಾಮ್ ಝಾ ಈ ಕಾನೂನು ಸಮರದಲ್ಲಿ ಭಾರತದ ಜೊತೆ ಕೈ ಜೋಡಿಸಿದ್ದಾರೆ. ನಿಜಾಮರಿಗೆ ಸೇರಿದ್ದ ₹ 308.20 ಕೋಟಿ ಪ್ರಸ್ತುತ ಲಂಡನ್‌ನ ನ್ಯಾಟ್ವೆಸ್ಟ್ ಬ್ಯಾಂಕ್ನಲ್ಲಿದೆ.