ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟ (ಇಯು) ಪ್ರಥಮ ಉನ್ನತ ಮಟ್ಟದ ಸಂವಾದ (ಎಚ್‌ಎಲ್‌ಡಿ) ನಡೆಸಿ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಗಳನ್ನು ಉತ್ತೇಜಿಸುವ ಮಾರ್ಗಗಳ ಬಗ್ಗೆ ಚರ್ಚಿಸಿವೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಯುರೋಪಿಯನ್ ಯೂನಿಯನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವಾಣಿಜ್ಯ ಆಯುಕ್ತ ವಾಲ್ಡಿಸ್ ಡೊಂಬ್ರೊವ್ಸ್ಕಿಸ್ ಸಹ ಅಧ್ಯಕ್ಷತೆ ವಹಿಸಿದ್ದರು.
ಚರ್ಚೆಯ ಸಮಯದಲ್ಲಿ ಮಂತ್ರಿಗಳು ನಿಯಮಿತ ಹೊಂದಾಣಿಕೆ ಮೂಲಕ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಇನ್ನಷ್ಟು ವೃದ್ಧಿಗೊಳಿಸಲು ಪ್ರಯತ್ನಿಸಲಿದ್ದಾರೆ. ಈ ಕಠಿಣ ಕಾಲದಲ್ಲಿ ವ್ಯವಹಾರಗಳಿಗೆ ತ್ವರಿತವಾಗಿ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ದ್ವಿಪಕ್ಷೀಯ ನಿಯಂತ್ರಣ ಸಂವಾದ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಹಕಾರ ವಿಷಯಗಳ ಕುರಿತು ಒಮ್ಮತ ತಲುಪುವ ಉದ್ದೇಶದಿಂದ ಮುಂದಿನ ಮೂರು ತಿಂಗಳಲ್ಲಿ ಸಭೆ ನಡೆಸಲು ಸಚಿವರು ಒಪ್ಪಿದರು.
ಇದನ್ನೂ ಓದಿ: ಸತತ ಎರಡು ದಿನಗಳ ದರ ಏರಿಕೆ ಬಳಿಕ ಯಥಾಸ್ಥಿತಿ.. ಇಂದಿನ ಪೆಟ್ರೋಲ್ ರೇಟ್ ಹೀಗಿದೆ..