ನವದೆಹಲಿ: ವಿತ್ತೀಯ ವ್ಯವಹಾರಗಳು ಮತ್ತು ಕಂಪನಿಗಳ ಚಟುವಟಿಕೆಗಳು ಪುನಾರಂಭಗೊಂಡು ಚುರುಕುಗೊಂಡಿದ್ದರಿಂದ ಸೆಪ್ಟೆಂಬರ್ ವೇಳೆ ಭಾರತದಲ್ಲಿ ನೇಮಕಾತಿ ಶೇ 18ರಷ್ಟು ಸುಧಾರಿಸಿ ಶೇ 30ರಷ್ಟು ಏರಿಕೆಯಾಗಿದೆ ( ಕಳೆದ ವರ್ಷಕ್ಕೆ ಹೋಲಿಸಿದರೆ) ಎಂದು ಜಾಗತಿಕ ವೃತ್ತಿಪರ ಸೇವೆಗಳ ಪ್ಲಾಟ್ಫಾರ್ಮ್ ಲಿಂಕ್ಡ್‌ಇನ್ ತಿಳಿಸಿದೆ.
ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಾರಂಭಿಸಿದ ಮೊದಲು ವರ್ಷದ ಆರಂಭದಲ್ಲಿ ನೇಮಕಾತಿ ಕುಸಿತವು ಏಪ್ರಿಲ್‌ನಲ್ಲಿ ವರ್ಷಕ್ಕೆ ಶೇ ಮೈನಸ್ 50ಕ್ಕಿಂತ ಕಡಿಮೆ ಮಟ್ಟ ತಲುಪಿತು. ಜುಲೈ ಅಂತ್ಯದಲ್ಲಿ ಇದು ಶೇ 0ರ ಗಡಿ ದಾಟಿ, ಹೆಚ್ಚುತ್ತಲೇ ಸಾಗಿತ್ತು. ಆಗಸ್ಟ್‌ನಲ್ಲಿ ಶೇ 12 ಮತ್ತು ಸೆಪ್ಟೆಂಬರ್ ಅಂತ್ಯದಲ್ಲಿ ಶೇ 30ಕ್ಕೆ ತಲುಪಿದೆ.
ಬಂಗಾರ ಪ್ರಿಯರಿಗೆ ಸಿಹಿ ಸಮಾಚಾರ: ಅರ್ಧ ಲಕ್ಷದಿಂದ ಕೇಳಗಿಳಿದ ಚಿನ್ನದ ದರ!
ಉದ್ಯೋಗಗಳ ಸ್ಪರ್ಧೆಯು ಹಲವು ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಕಡಿಮೆಯಾಗಿದೆ. ಆದರೆ, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಇನ್ನೂ ಶೇ 30ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
2020ರ ಮಧ್ಯಂತರ ಅವಧಿಯಲ್ಲಿ ಸುಮಾರು ಪ್ರಮಾಣದಷ್ಟು ದ್ವಿಗುಣಗೊಂಡ ನಂತರ ಪ್ರತಿ ಉದ್ಯೋಗದ ಅರ್ಜಿಗಳು ಆಗಸ್ಟ್‌ನಲ್ಲಿ 1.3 ಪ್ರಮಾಣದಷ್ಟು ಇಳಿದವು. ಸೆಪ್ಟೆಂಬರ್‌ನಲ್ಲಿ ಕೂಡ ಯಥಾವತ್ತಾಗಿ ಉಳಿದವು.