ನವದೆಹಲಿ: ಕೋವಿಡ್ ಲಸಿಕೆ ವಿತರಣೆಯಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಐಟಿ ಕಂಪನಿ ಮತ್ತು ಸ್ಟಾರ್ಟ್ಅಪ್ಗಳಿಗೆ ಕೆಂದ್ರ ಸರ್ಕಾರ ಆಹ್ವಾನ ನೀಡಿದೆ.
ಬುಧವಾರದಿಂದ ಕೋವಿಡ್ ಲಸಿಕೆ ಸಂಬಂಧಿತ 'ಕೋವಿನ್' ತಂತ್ರಜ್ಞಾನ ಸ್ಪರ್ಧೆಯನ್ನು ಕೇಂದ್ರ ಪ್ರಾರಂಭಿಸಿದ್ದು. ಇದನ್ನು ದೇಶಾದ್ಯಂತ ಲಸಿಕೆ ವಿತರಣೆ ಹೆಚ್ಚಿಸಲು ಬಳಸಿಕೊಳ್ಳಲಿದೆ.
ಕೋವಿಡ್-19 ಲಸಿಕೆ ವಿತರಣೆ ಮತ್ತು ಟ್ರ್ಯಾಕಿಂಗ್ ಅಗತ್ಯತೆಗಳನ್ನು ಪರಿಹರಿಸಲು ದೇಶದ ಎಲ್ಲಾ ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಲಸಿಕೆ ದಾಸ್ತಾನು ಮತ್ತು ಶೇಖರಣಾ ತಾಪಮಾನದ ಬಗ್ಗೆ ರಿಯಲ್ ಟೈಮ್ ಮಾಹಿತಿ ಒದಗಿಸುವ ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (ಇವಿನ್) ವ್ಯವಸ್ಥೆಯ ಬಳಕೆಯನ್ನು ಸರ್ಕಾರ ಬಲಪಡಿಸುತ್ತಿದೆ.
ಈ ಸ್ಪರ್ಧೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಜಂಟಿಯಾಗಿ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರೋಗ ನಿರೋಧಕೀಕರಣದ ಬಳಕೆಯ ಯಾವುದೇ ಪ್ರತಿಕೂಲ ಘಟನೆಗಳಿಗೆ ಪೋರ್ಟಬಿಲಿಟಿ, ಸಾರಿಗೆ, ಕ್ಯೂ (ಸರದಿ ಸಾಲು) ನಿರ್ವಹಣೆ, ವರದಿ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನದಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಂತ್ರಿಕ ನೆರವನ್ನು ಆರೋಗ್ಯ ಸಚಿವಾಲಯ ಹುಡುಕುತ್ತಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತ ಬಜೆಟ್ ಮಂಡನೆಗೆ ಸೀತಾರಾಮನ್ರ ಸರಣಿ ಸಭೆ ಅಂತ್ಯ: ಚರ್ಚಿಸಿದ ವಿಷಯಗಳಿವು!
ಸಾಂಕ್ರಾಮಿಕ ರೋಗದ ವಿರುದ್ಧ ಸಾಮೂಹಿಕ ಇನಾಕ್ಯುಲೇಷನ್ಗೆ ಮೊಬೈಲ್ ತಂತ್ರಜ್ಞಾನ ಬಳಸಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದ ನಾವೀನ್ಯತೆಯನ್ನು ನಿರ್ಣಾಯಕ ಪಾತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಭಾರತದಾದ್ಯಂತ ಕೋವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮದಿಂದ ಹೊರಬರಲು ಕೋವಿನ್ ಪ್ಲಾಟ್‌ಫಾರ್ಮ್ ಬಲಪಡಿಸುವಂತಹ ಅತಿ ದೊಡ್ಡ ಸವಾಲಿಗೆ ನಾನು ಪರಿಣಿತರಿಗೆ ಮತ್ತು ಸ್ಟಾರ್ಟ್ಅಪ್ಗಳಿಗೆ ಆಹ್ವಾನಿಸುತ್ತೇನೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.