ETV Bharat / business

ಪ್ರಯಾಣಿಕರಿಗೆ ಶಾಕ್ : ದೇಶೀಯ ವಿಮಾನಗಳ ಪ್ರಯಾಣ ದರ ಶೇ.12.5ರಷ್ಟು ಹೆಚ್ಚಳ - ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ.ಕೆ. ಡಿಂಗ್

ಮೇ ತಿಂಗಳಲ್ಲಿ ಸರ್ಕಾರವು ಕನಿಷ್ಠ ದರಗಳ ಮೇಲಿನ ಮಿತಿಯನ್ನು ಶೇ.15ರಷ್ಟು ಹೆಚ್ಚಿಸಿತ್ತು. ಫೆಬ್ರವರಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ಬೆಲೆಯ ಮೇಲಿನ ಮಿತಿಯನ್ನು ಕ್ರಮವಾಗಿ ಶೇ.10 ಮತ್ತು ಶೇ.30ರಷ್ಟು ಹೆಚ್ಚಿಸಿತು. ಇತ್ತೀಚಿನ ಆದೇಶದ ಪ್ರಕಾರ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸೀಟಿಂಗ್ ಸಾಮರ್ಥ್ಯದ ಶೇ.72.5ರಷ್ಟು ಹಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು..

domestic airfare
domestic airfare
author img

By

Published : Aug 13, 2021, 5:01 PM IST

ನವದೆಹಲಿ : ಶೇ.12.5ರಷ್ಟು ದರ ಏರಿಸುವ ಮೂಲಕ ವಿಮಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯವು ಶಾಕ್ ನೀಡಿದೆ. ಗುರುವಾರ ತಡರಾತ್ರಿ ಸರ್ಕಾರವು ವಿಮಾನ ದರಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ಶೇ.12.5ರಷ್ಟು ಹೆಚ್ಚಿಸಿದೆ.

ಮೇ 2020ರಿಂದ ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನಯಾನ ದರಗಳನ್ನು ಮಿತಿಗೊಳಿಸಿತ್ತು. ಸೀಮಿತ ಸಂಖ್ಯೆಯ ವಿಮಾನಗಳ ಹಾರಾಟ ಕಾರಣದಿಂದ ಟಿಕೆಟ್​ ದರಗಳನ್ನು ನಿಯಂತ್ರಣದಲ್ಲಿಡಲು ಬೆಲೆ ಮಿತಿ ಹಾಕಲಾಗಿತ್ತು.

ಈವರೆಗೆ ದೇಶೀಯ ವಿಮಾನಗಳ ಕನಿಷ್ಠ ವಿಮಾನದ ದರ 2,600 ರಿಂದ ರೂ .7,800 ಮತ್ತು ಗರಿಷ್ಠ ರೂ. 8,700 ರಿಂದ ರೂ. 24,200ವರೆಗೆ ಇತ್ತು. ಇದೀಗ ಮೂಲ ಬೆಲೆಯು ರೂ 2,925 ರಿಂದ ರೂ 8,775ವರೆಗೆ ಇರುತ್ತದೆ.

ಉದಾಹರಣೆಗೆ, ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ಕನಿಷ್ಠ ದರವನ್ನು ರೂ. 5287.5ಕ್ಕೆ ನಿಗದಿಪಡಿಸಲಾಗುತ್ತದೆ. ಇದು ಈವರೆಗೆ ಅನ್ವಯವಾಗುತ್ತಿದ್ದ ರೂ 4,700 ರೂ.ಗಿಂತ ಗಣನೀಯ ಏರಿಕೆಯಾಗಿದೆ.

ಮೇ ತಿಂಗಳಲ್ಲಿ ಸರ್ಕಾರವು ಕನಿಷ್ಠ ದರಗಳ ಮೇಲಿನ ಮಿತಿಯನ್ನು ಶೇ.15ರಷ್ಟು ಹೆಚ್ಚಿಸಿತ್ತು. ಫೆಬ್ರವರಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ಬೆಲೆಯ ಮೇಲಿನ ಮಿತಿಯನ್ನು ಕ್ರಮವಾಗಿ ಶೇ.10 ಮತ್ತು ಶೇ.30ರಷ್ಟು ಹೆಚ್ಚಿಸಿತು. ಇತ್ತೀಚಿನ ಆದೇಶದ ಪ್ರಕಾರ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಸೀಟಿಂಗ್ ಸಾಮರ್ಥ್ಯದ ಶೇ.72.5ರಷ್ಟು ಹಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು.

ಇದನ್ನೂ ಓದಿ: ಆಗಸ್ಟ್ 16 ರಿಂದ INDIA-UK ನಡುವಿನ ವಿಮಾನಗಳ ಹಾರಾಟ ದುಪ್ಪಟ್ಟು..!

ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ ಕೆ ಡಿಂಗ್, ಜುಲೈ 22ರಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಸರ್ಕಾರವು ವಿಮಾನ ದರಗಳನ್ನು ನಿಯಂತ್ರಿಸುವುದಿಲ್ಲ ಎಂದು ಹೇಳಿದ್ದರು. ಆದರೂ, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ದೇಶೀಯ ವಿಮಾನಯಾನ ಸಂಸ್ಥೆಗಳ ಶುಲ್ಕ ಬ್ಯಾಂಡ್‌ಗಳನ್ನು ಸರ್ಕಾರ ವಿವರಿಸಿದೆ.

ಏವಿಯೇಷನ್ ​​ಟರ್ಬೈನ್ ಇಂಧನದ (ATF) ಬೆಲೆ ಹೆಚ್ಚಳದಿಂದಾಗಿ ವಿಮಾನಯಾನ ಸಂಸ್ಥೆಗಳನ್ನು ಸರಿದೂಗಿಸಲು ಶುಲ್ಕದ ಬ್ಯಾಂಡ್‌ಗಳನ್ನು ಮೂರು ಸಂದರ್ಭಗಳಲ್ಲಿ ಪರಿಷ್ಕರಿಸಲಾಗಿದೆ. ಎಟಿಎಫ್ ವೆಚ್ಚದ ಹೆಚ್ಚಳವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.