ETV Bharat / briefs

ಕ್ರಿಕೆಟ್​ಗೆ ಯುವರಾಜ್​ ಸಿಂಗ್ ಬೈ ಬೈ..! ವಿಶ್ವಕಪ್​ ಹೀರೋಗೆ ಸಿಗಲಿಲ್ಲ ಬಯಸಿದ ನಿವೃತ್ತಿ!   ​

2011ರ ವಿಶ್ವಕಪ್​​ನಲ್ಲಿ ಭಾರತಕ್ಕೆ ಕಪ್ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನ್ನು ಕಾಣಿಸಿಕೊಳ್ಳವುದಿಲ್ಲ.

ಯುವರಾಜ್​ ಸಿಂಗ್
author img

By

Published : Jun 10, 2019, 1:57 PM IST

Updated : Jun 10, 2019, 2:25 PM IST

ಮುಂಬೈ: ಮೈದಾನದಲ್ಲಿ ಸಿಕ್ಸರ್​ಗಳ ಮೂಲಕ ಅಬ್ಬರಿಸಿದ್ದ ಹಾಗೂ ಎರಡೂ ಮಾದರಿಯ ವಿಶ್ವಕಪ್​ನ ರಿಯಲ್​ ಹೀರೋ ಟೀಮ್ ಇಂಡಿಯಾದ ಆಲ್​ರೌಂಡರ್​ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ದಕ್ಷಿಣ ಮುಂಬೈನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಿ ನಿವೃತ್ತಿ ಘೋಷಣೆ ಮಾಡಿದ್ದು ಈ ಮೂಲಕ ಸಿಕ್ಸರ್​ಗಳ ಸರದಾರ 22 ಯಾರ್ಡ್​ಗಳ ನಂಟನ್ನು ಕೊನೆಗೊಳಿಸಿದ್ದಾರೆ.

ಕಳೆದ 25 ವರ್ಷದಿಂದ ಕ್ರಿಕೆಟ್​ ಆಡುತ್ತಾ ಬಂದಿದ್ದೇನೆ. 22 ಯಾರ್ಡ್​ನಲ್ಲಿ ಸುಮಾರು 17 ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ. ಸದ್ಯ ಜೀವನದಲ್ಲಿ ಮುಂದುವರೆಯಲು ನಿರ್ಧರಿಸಿದ್ದೇನೆ. ಈ ಆಟ ನನ್ನಲ್ಲಿ ಹೋರಾಟವನ್ನು ಕಲಿಸಿದೆ, ಸೋಲನ್ನೂ ಕಲಿಸಿದೆ ಹಾಗೂ ಮೇಲೆದ್ದು ಮುಂದುವರೆಯುವ ಛಲವನ್ನೂ ಇದೇ ಆಟದಿಂದ ಕಲಿತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಭಾವನಾತ್ಮಕವಾಗಿ ಹೇಳಿದ್ದಾರೆ.

  • Yuvraj Singh: After 25 years in and around the 22 yards and almost 17 years of international cricket on and off, I have decided to move on. This game taught me how to fight, how to fall, to dust off, to get up again and move forward pic.twitter.com/NI2hO08NfM

    — ANI (@ANI) June 10, 2019 " class="align-text-top noRightClick twitterSection" data=" ">

37 ವರ್ಷದ ಯುವರಾಜ್ ಸಿಂಗ್ ಭಾರತದ ಪರವಾಗಿ 40 ಟೆಸ್ಟ್​​, 304 ಏಕದಿನ ಹಾಗೂ 58 ಟಿ-20 ಪಂದ್ಯಗಳನ್ನಾಡಿದ್ದಾರೆ. 2007 ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

Intro:Body:

ಮುಂಬೈ:

Conclusion:
Last Updated : Jun 10, 2019, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.