ETV Bharat / briefs

ಟೀಂ ಇಂಡಿಯಾ ವಿರುದ್ಧ ಸೋಲುವ ಭೀತಿ: ಪಾಕ್​​ ಆಟಗಾರರಿಗೆ ಸರ್ಫರಾಜ್ ಎಚ್ಚರಿಕೆ

author img

By

Published : Jun 13, 2019, 8:35 PM IST

ಜೂನ್​ 16ರಂದು ಬಲಿಷ್ಠ ಭಾರತ ತಂಡದ ವಿರುದ್ಧ ಪಾಕ್​ ಸೆಣಸಾಟ ನಡೆಸಲಿದ್ದು, ಅದಕ್ಕೂ ಮುನ್ನ ಪಾಕ್​ ಕ್ಯಾಪ್ಟನ್​ ತಮ್ಮ ತಂಡದ ಆಟಗಾರರಿಗೆ ವಾರ್ನ್​ ಮಾಡಿದ್ದಾರೆ.

ಪಾಕ್​ ಕ್ಯಾಪ್ಟನ್​​

ಲಂಡನ್​: ಜೂನ್​ 16ರಂದು ವಿಶ್ವಕಪ್​​ನ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಂದ್ಯ ಆರಂಭಕ್ಕೂ ಮೊದಲೇ ಪಾಕ್​ ನಾಯಕನಿಗೆ ಸೋಲಿನ ಭೀತಿ ಎದುರಾಗಿದೆ.

ಪಾಕಿಸ್ತಾನ ತಾನಾಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡಲ್ಲಿ ಸೋತು, ಮತ್ತೊಂದು ಪಂದ್ಯ ಮಳೆಗಾಹುತಿಯಾಗಿರುವ ಕಾರಣ ಕೇವಲ 3 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಸೆಮಿಫೈನಲ್​ಗೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ತಂಡಕ್ಕಿದೆ. ಹಾಗಾಗಿ ತಂಡದ ಕ್ಯಾಪ್ಟನ್ ಸರ್ಫರಾಜ್​ ಅಹ್ಮದ್​ ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಪಾಕ್​ ಜೂನ್​ 16ರಂದು ಬಲಿಷ್ಠ ಭಾರತದ ವಿರುದ್ಧ ಸೆಣಸಾಟ ನಡೆಸಲಿರುವ ಕಾರಣ, ಕ್ಷೇತ್ರ ರಕ್ಷಣೆ ಸೇರಿದಂತೆ ಬ್ಯಾಟಿಂಗ್​ ಹಾಗೂ ಬೌಲಿಂಗ್​​ವಿಭಾಗದ ಗುಣಮಟ್ಟ ಸುಧಾರಿಸಿಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.

ಟೀಂ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಬಲಾಢ್ಯವಾಗಿರುವ ಕಾರಣ, ಈಗಾಗಲೇ ತಾನು ಆಡಿರುವ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧ 41ರನ್​ಗಳ ಸೋಲು ಕಂಡಿರುವ ಪಾಕಿಸ್ತಾನ, ಈಗಾಗಲೇ ಒತ್ತಡಕ್ಕೆ ಸಿಲುಕಿದ್ದು ಗೆಲುವಿನ ಲಯಕ್ಕೆ ಮರಳಲು ಹರಸಾಹಸ ಪಡಬೇಕಾಗಿದೆ.

Intro:Body:

ಕೊಹ್ಲಿ ಸೇನೆ ವಿರುದ್ಧ ಸೋಲಿನ ಭೀತಿ... ಪಾಕ್​​ ಪ್ಲೇಯರ್ಸ್​ಗೆ ಎಚ್ಚರಿಕೆ ನೀಡಿದ ಕ್ಯಾಪ್ಟನ್​ ಸರ್ಫರಾಜ್​​! 

ಲಂಡನ್​: ಜೂನ್​ 16ರಂದು ವಿಶ್ವಕಪ್​​ನ ಹೈವೋಲ್ಟೇಜ್​ ಪಂದ್ಯ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿ ತಂಡ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಂದ್ಯ  ಆರಂಭಕ್ಕೂ ಮೊದಲೇ ಪಾಕ್​ ನಾಯಕನಿಗೆ ಸೋಲಿನ ಭೀತಿ ಎದುರಾಗಿರುವ ಹಾಗೇ ಕಾಣಿಸುತ್ತಿದೆ. 

ಈಗಾಗಲೇ ಪಾಕಿಸ್ತಾನ ತಾನಾಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡಲ್ಲಿ ಸೋತು, ಮತ್ತೊಂದು ಪಂದ್ಯ ಮಳೆಗಾಹುತಿಯಾಗಿರುವ ಕಾರಣ ಕೇವಲ 3 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಸೆಮಿಫೈನಲ್​ಗೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಬೇಕಾದ ಅನಿವಾರ್ಯತೆ ತಂಡಕ್ಕೆ ಉದ್ಭವವಾಗಿರುವ ಕಾರಣ, ತಂಡದ ಕ್ಯಾಪ್ಟನ್ ಸರ್ಫರಾಜ್​ ಅಹ್ಮದ್​ ಸಹ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಪಾಕ್​ ಜೂನ್​ 16ರಂದು ಬಲಿಷ್ಠ ಭಾರತದ ವಿರುದ್ಧ ಸೆಣಸಾಟ ನಡೆಸಲಿರುವ ಕಾರಣ, ಕ್ಷೇತ್ರ ರಕ್ಷಣೆ ಸೇರಿದಂಥೆ ಬ್ಯಾಟಿಂಗ್​ ಹಾಗೂ ಬೌಲಿಂಗ್​​ನಲ್ಲಿನ ಗುಣಮಟ್ಟ ಸುಧಾರಣೆ ಮಾಡಿಕೊಳ್ಳುವಂತೆ ವಾರ್ನ್​ ಮಾಡಿದ್ದಾರೆ. 

ಟೀಂ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಕಾರಣ, ಈಗಾಗಲೇ ತಾನು ಆಡಿರುವ ಪ್ರಬಲ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿದೆ. ಇದರ ಮಧ್ಯೆ ಆಸ್ಟ್ರೇಲಿಯಾ ವಿರುದ್ಧ 41ರನ್​ಗಳ ಸೋಲು ಕಂಡಿರುವ ಪಾಕಿಸ್ತಾನ, ಈಗಾಗಲೇ ಒತ್ತಡಕ್ಕೆ ಸಿಲುಕಿಕೊಂಡಿದ್ದು ಗೆಲುವಿನ ಲಯಕ್ಕೆ ಮರಳಲು ಹರಸಾಹಸ ಪಡಬೇಕಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.