ಬ್ರಿಸ್ಬೇನ್: ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟಿವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಮತ್ತೆ ಹಳದಿ ಜರ್ಸಿ ತೊಟ್ಟು ಮಿಂಚಿದ್ದಾರೆ.
ಇಂದು ನಡೆದ ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ವಾರ್ನರ್ 39 ರನ್ಗಳಿಸಿದರೆ, ಸ್ಟಿವ್ ಸ್ಮಿತ್ 22 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿದ್ದ ಈ ಇಬ್ಬರು ಆಟಗಾರರು ಇಂದು ತಮ್ಮ ದೇಶದ ಜರ್ಸಿ ತೊಟ್ಟು ಆಡಿ ಗಮನ ಸೆಳೆದರು. ನ್ಯೂಜಿಲ್ಯಾಂಡ್ ಇಲೆವೆನ್ ನೀಡಿದ 219 ರನ್ಗಳ ಗುರಿಯನ್ನು 9 ವಿಕೆಟ್ ಕಳೆದುಕೊಂಡು ಬೆನ್ನತ್ತಿದ ಆಸೀಸ್ ಇನ್ನು 10 ಎಸೆತಗಳು ಉಳಿದಿರುವಂತೆ 1 ವಿಕೆಟ್ ರೋಚಕ ಜಯ ಸಾಧಿಸಿತು.
-
Warner seeing them very well at AB Field pic.twitter.com/RnKf42L5av
— cricket.com.au (@cricketcomau) May 6, 2019 " class="align-text-top noRightClick twitterSection" data="
">Warner seeing them very well at AB Field pic.twitter.com/RnKf42L5av
— cricket.com.au (@cricketcomau) May 6, 2019Warner seeing them very well at AB Field pic.twitter.com/RnKf42L5av
— cricket.com.au (@cricketcomau) May 6, 2019
ವಾರ್ನರ್ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಮೊದಲು ಒತ್ತಡದಲ್ಲಿ ಬ್ಯಾಟಿಂಗ್ ನಡೆಸಿದರು ನಂತರ ಉತ್ತಮವಾಗಿ ಬ್ಯಾಟ್ಬೀಸಿ 43 ಎಸೆತಗಳಲಗಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 39 ರನ್ಗಳಿಸಿದರು. 4 ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 43 ಎಸೆತಗಳಲ್ಲಿ 22 ರನ್ಗಳಿಸಿ ಔಟ್ ಆದರು.
-
WHAT A CATCH! Steve Smith has still got it! pic.twitter.com/WWM280MEiy
— cricket.com.au (@cricketcomau) May 6, 2019 " class="align-text-top noRightClick twitterSection" data="
">WHAT A CATCH! Steve Smith has still got it! pic.twitter.com/WWM280MEiy
— cricket.com.au (@cricketcomau) May 6, 2019WHAT A CATCH! Steve Smith has still got it! pic.twitter.com/WWM280MEiy
— cricket.com.au (@cricketcomau) May 6, 2019
ಆದರೆ ನಾಥನ್ ಕೌಲ್ಟರ್ ನೈಲ್ 34 ಹಾಗೂ ಅ್ಯಡಂ ಜಂಪಾ ಔಟಾಗದೆ 11 ರನ್ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ 1 ವಿಕೆಟ್ ರೋಚಕ ಜಯ ತಂದಿತ್ತರು.
ಒಂದು ವರ್ಷದಿಂದ ಹೊರಗಿದ್ದ ಸ್ಮಿತ್ ಹಾಗೂ ವಾರ್ನರ್ ಮೈದಾನ ಪ್ರವೇಶಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಅಭಿಮಾನಿಗಳು ಚಪ್ಪಾಳೆ ಮೂಲಕ ಇಬ್ಬರನ್ನು ಸ್ವಾಗತಿಸಿದರು.