ಮೈಸೂರು: ಮನೆಯಲ್ಲಿ ಶವವಾಗಿ ಬಿದ್ದಿರುವ ಪತಿ.. ಕುಟುಂಬದ ಆಧಾರಸ್ತಂಭವೇ ಕಳಿಚಿತಲ್ಲ ಎಂಬ ನೋವಲ್ಲಿ ಪತ್ನಿ.. ಮತ್ತೊಂದೆಡೆ ಮಹಾಮಾರಿ ಕೊರೊನಾ ಭಯದಿಂದ ಯಾರೊಬ್ಬರು ಮೃತದೇಹದ ಬಳಿ ಸುಳಿಯದಿರುವುದರಿಂದ ಮಹಿಳೆಗೆ ಅನಾಥಪ್ರಜ್ಞೆ ಕಾಡುತ್ತಿದೆ.
ಹೌದು, ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಕೊಡಗಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಂಡುಬಂದಿರುವ ಈ ದೃಶ್ಯ ಕಲ್ಲು ಹೃದಯದವರಲ್ಲೂ ಕಣ್ಣೀರು ತರಿಸುವಂತಿದೆ. ಅನಾರೋಗ್ಯದಿಂದ ಮೃತಪಟ್ಟಿರುವ ತಿ. ನರಸೀಪುರ ತಾಲೂಕಿನ ಕೊಡಗನಹಳ್ಳಿಯ ನಿವಾಸಿ ಮಹಾದೇವಪ್ಪ ಎಂಬುವರ ಮೃತದೇಹವನ್ನು ಯಾರೊಬ್ಬರು ಮುಟ್ಟುತ್ತಿಲ್ಲ.
ಬನ್ನೂರು ಹೋಬಳಿಯ ಕೊಡಗಹಳ್ಳಿ ಗ್ರಾಮ ಮಹಾದೇವಪ್ಪ ಮೃತಪಟ್ಟಿದ್ದು, ಸಂಬಂಧಿಕರಿಲ್ಲದೆ ಮನೆಯಲ್ಲಿ ಅನಾಥವಾಗಿ ಶವ ಬಿದ್ದಿದೆ. ಪತಿ ಮೃತದೇಹದ ಮುಂದೆ ಪತ್ನಿ ಮಂಗಳಮ್ಮ ಕಣ್ಣೀರು ಹಾಕುತ್ತಿದ್ದಾರೆ.
ಮಕ್ಕಳು ಹಾಗೂ ಯಾರೂ ಸಂಬಂಧಿಕರಿಲ್ಲದೆ ಅನಾಥವಾಗಿರುವ ಅವರ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದೆ ಬಂದಿಲ್ಲ. ಶವ ಸಂಸ್ಕಾರ ಮಾಡುವಂತೆ, ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲವಂತೆ.