ಹೈದರಾಬಾದ್: ಕಳೆದ ಡಿಸೆಂಬರ್ನಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನೀರಸ ಪ್ರದರ್ಶನ ನೀಡಿರುವ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಹತ್ತಕ್ಕೂ ಅಧಿಕ ಶಾಸಕರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
ಕಾಂಗ್ರೆಸ್ನ 18 ಶಾಸಕರ ಪೈಕಿ 12 ಮಂದಿ ಸ್ಪೀಕರ್ ಪೂಚರಾಮ್ ಶ್ರೀನಿವಾಸ್ರನ್ನು ಭೇಟಿಯಾಗಿ ಪ್ರಾದೇಶಿಕ ಪಕ್ಷದೊಂದಿಗೆ ತಮ್ಮನ್ನು ವಿಲೀನಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.
ನಿಯಮದ ಪ್ರಕಾರ ಯಾವುದೇ ಪಕ್ಷದ ಶಾಸಕರು ಇನ್ನೊಂದು ಪಕ್ಷದಲ್ಲಿ ವಿಲೀನಗೊಳ್ಳಲು ಮೂರನೇ ಎರಡರಷ್ಟು ಶಾಸಕರ ಬೆಂಬಲ ಅಗತ್ಯವಿದೆ. ಇದೀಗ 18 ಶಾಸಕರಲ್ಲಿ 12 ಮಂದಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ ನಿಷ್ಠೆ ತೋರಿಸಿದ್ದಾರೆ.