ETV Bharat / briefs

ಭಿಕ್ಷೆ ಬೇಡುವ ನೆಪದಲ್ಲಿ ಕಳ್ಳರ ಕೈಚಳಕ... ಕಾರು ಚಾಲಕರೇ ಹುಷಾರ್!

ಬೆಂಗಳೂರಿನ ಪ್ರಮುಖ ಸಿಗ್ನಲ್​ಗಳಲ್ಲಿ ಕಾರ್​ ಚಾಲಕರ ಗಮನ ಬೇರೆಡೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಕಳ್ಳರ ತಂಡವೊಂದು ನಗರದಲ್ಲಿ ಬೀಡುಬಿಟ್ಟಿದೆ. ಚಾಲಕರು ಡ್ರೈವಿಂಗ್​ ಜತೆಗೆ ಸಿಗ್ನಲ್​ಗಳಲ್ಲಿಯೂ ಎಚ್ಚರ ವಹಿಸಬೇಕಿದೆ

ಸಿಗ್ನಲ್​ ಕಳ್ಳರ ಹಾವಳಿ
author img

By

Published : May 23, 2019, 1:04 AM IST

ಬೆಂಗಳೂರು: ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ಕಳ್ಳರ ತಂಡವೊಂದು ಕಾರು ಚಾಲಕರಲ್ಲಿ ಭಿಕ್ಷೆ ಕೇಳುವ ನೆಪದಲ್ಲಿ ಕೈಚಳಕ ತೋರಿಸುತ್ತಿದೆ. ಚಾಲಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ವಸ್ತುಗಳನ್ನು ಎಗರಿಸಿ ಬಿಡುವ ಗ್ಯಾಂಗ್​ ನಗರದಲ್ಲಿ ಸಕ್ರಿಯವಾಗಿದೆ.

ಇದಕ್ಕೆ ನಿದರ್ಶನ ಎಂಬಂತೆ ನಗರದ ಸ್ಯಾಂಕಿ ರಸ್ತೆಯಲ್ಲಿ ಘಟನೆಯೊಂದು ಜರುಗಿದೆ. ಅಮರನಾಥ ಎಂಬುವರ ಕಾರ್​ನ್ನು ನಾಲ್ಕು ಜನ ಸುತ್ತುವರಿದು ಬಿಕ್ಷೆ ಬಡುವ ರೀತಿ ಹಣ ಕೇಳಿದ್ದಾರೆ. ಅವರ ಗಮನ ಬೇರೆಕಡೆ ಹೋಗುತ್ತಿದ್ದಂತೆ ಉಳಿದವರು ಕಾರ್​ನಲ್ಲಿದ್ದ ಐಫೋನ್ ಕದ್ದು ಪರಾರಿಯಾಗಿದ್ದಾರೆ.

ಅಲ್ಲದೇ ಹೊಸೂರು ರಸ್ತೆಯಲ್ಲಿಯೂ ಕಳ್ಳರು ಕೈಚಳಕ ತೋರಿಸಿದ್ದಾರೆ. ಕೈ-ಕಾಲು ಇಲ್ಲವೆಂದು ಅಥವಾ ಅಮಾಯಕರಂತೆ ಸಹಾಯ ಕೇಳುತ್ತಾರೆ. ಕಾರು ಚಾಲಕರು ಡ್ರೈವಿಂಗ್​ ಎಚ್ಚರಿಕೆ ಜತೆಗೆ ಸಿಗ್ನಲ್‌ಗಳಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವುದು ಗ್ಯಾರಂಟಿ. ಮೋಸ ಹೋದವರು ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪೊಲೀಸ್​ರಿಗೆ ದೂರು ನೀಡುತ್ತಿದ್ದಾರೆ.

Intro:Body:ಬೆಂಗಳೂರು: ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ಕಳ್ಳರ ತಂಡವೊಂದು ಕಾರಿನ ಗ್ಲಾಸ್ ಬಡಿದು ಕೈ-ಕಾಲುಗಳನ್ನು ತೋರಿಸಿ ಸಹಾಯ ಮಾಡುವಂತೆ ಕೇಳುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಕಾರ್‌ನಲ್ಲಿದ್ದ ವಸ್ತುಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ಸ್ಯಾಂಕಿ ರಸ್ತೆಯಲ್ಲಿ ಅಮರನಾಥ ಎಂಬುವವರಿಗೆ ನಾಲ್ಕು ಜನ ಸುತ್ತುವರಿದು ಕಾರ್‌ನ ಗ್ಲಾಸ್ ಬಾರಿಸಿ ಹಣ ಕೇಳುವ ನೆಪದಲ್ಲಿ ಐಫೋನ್ ಕದ್ದು ಪರಾರಿಯಾಗಿದ್ದಾರೆ. ಅಲ್ಲದೇ ಹೊಸೂರು ರಸ್ತೆಯಲ್ಲಿಯೂ ತಮ್ಮ ಕೈಚಳಕ ತೋರಿಸಿದ್ದಾರೆ. ಇದೀಗ ಕಳ್ಳರ ತಂಡ ಹೊಸ ರೀತಿಯ ಕಳ್ಳತನಕ್ಕಿಳಿದಿರುವುದು ಬೆಳಕಿಗೆ ಬಂದಿದೆ.
ನಗರದಲ್ಲಿರುವ ಪ್ರಮುಖ ಸಿಗ್ನಲ್‌ಗಳಲ್ಲಿ ಕಾರು ಬಂದ ಕೂಡಲೇ ಸುತ್ತುವರಿದು ಕಾರ್‌ನ ಗ್ಲಾಸ್ ಬಾರಿಸಿ ಕೈ-ಕಾಲು ಇಲ್ಲವೆಂದು ಸಹಾಯ ಮಾಡುವಂತೆ ಕೇಳುತ್ತಾರೆ. ಆಗ ಚಾಲಕ  ಗಮನ ಒಬ್ಬನ ಕಡೆಗೆ ಹೋಗುತ್ತಿದ್ದಂತೆ ಮತ್ತೊಬ್ಬ ತನ್ನ ಕೈಚಳಕ ತೋರಿಸುತ್ತಾನೆ. ಕಾರು ಚಾಲಕ ಹಣ ಕೊಡುವುದನ್ನು ನೋಡಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಎಗರಿಸಿ, ಅಲ್ಲಿಂದ ತಕ್ಷಣ ಪರಾರಿಯಾಗುತ್ತಾರೆ. ಇದರಿಂದ ಕಾರು ಚಾಲಕರು ಸಿಗ್ನಲ್‌ಗಳಲ್ಲಿ ನಿಂತಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವುದು ಗ್ಯಾರಂಟಿ. ಆ ಹಿನ್ನೆಲೆಯಲ್ಲಿ ಮೋಸ ಹೋದವರು ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪೊಲೀಸರಿಗೆ ದೂರು ನೀಡುತ್ತಿದ್ದಾರೆ.Conclusion:Use file photo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.