ವಾರಣಾಸಿ: ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಅಲ್ಲಿನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಗೆಲುವಿಗೆ ಶ್ರಮಿಸಿರುವ ಎಲ್ಲರಿಗೂ ಅಭಿನಂದನೆಗಳು. ಪಕ್ಷದ ಗೆಲುವಿನಲ್ಲಿ ಬಹಳಷ್ಟು ಶ್ರಮವಹಿಸಿದ್ದೀರಿ. ಚುನಾವಣೆ ವೇಳೆ ನೀವು ತೋರಿರುವ ಕಠಿಣ ಕೆಲಸದ ಪರಿಶ್ರಮವೇ ಇದೀಗ ಉತ್ತರದ ರೀತಿಯಲ್ಲಿ ಸಿಕ್ಕಿದೆ. ಕಾರ್ಯಕರ್ತರ ಸಂತೋಷವೇ ನನ್ನ ಜೀವನದ ಗುರಿ ಎಂದರು.
ನಾನು ಮೊದಲು ಪಕ್ಷದ ಕಾರ್ಯಕರ್ತ ತದನಂತರ ಪ್ರಧಾನಿ. ಕಾಶಿ ಭೇಟಿ ನನಗೆ ಶಕ್ತಿ, ಸಾಮರ್ಥ್ಯ ನೀಡಿದ್ದು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವೆ ಎಂದು ಭರವಸೆ ನೀಡಿದರು. ಚುನಾವಣೆಯಲ್ಲಿ ಕಾಶಿ ವಿಶ್ವರೂಪ ತೋರಿದೆ. ದೇಶ ನನ್ನನ್ನ ಪ್ರಧಾನಿಯಾಗಿ ಆಯ್ಕೆ ಮಾಡಿರಬಹುದು ಆದರೆ ನಿಮ್ಮಲ್ಲರಂತೆ ನಾನು ಓರ್ವ ಕಾರ್ಯಕರ್ತ ಎಂದು ಹೇಳಿದರು.
ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ನಮೋ... ಪೂಜೆ, ಪಂಚಾಭಿಷೇಕ... ಪಟ್ಟಾಭಿಷೇಕಕ್ಕೆ ಅಣಿ
ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಾಮಪತ್ರ ಸಲ್ಲಿಕೆ ಮಾಡಿದ ಮೇಲೆ ಆ ವ್ಯಕ್ತಿ ತಮ್ಮ ಸ್ವಕ್ಷೇತ್ರದಲ್ಲಿ ಪ್ರಚಾರ ನಡೆಸುವುದು ಕಾಮನ್. ಆದರೆ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿಲ್ಲ. ಅವರಿಗೆ ಮತದಾರರ ಮೇಲೆ ನಂಬಿಕೆ ಇತ್ತು. ಅವರ ಅಭಿವೃದ್ಧಿ ಕಾರ್ಯಗಳು ಇಂದು ಕೈ ಹಿಡಿದಿವೆ ಎಂದು ತಿಳಿಸಿದರು.