ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರು ಕೆಲ ದಿನಗಳ ಹಿಂದೆ ನಾಗಾರಾಧನೆ ಬಗ್ಗೆ ಮತನಾಡಿದ ಕೆಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ಖುದ್ದು ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದು ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.
ಕೆಲ ದಿನಗಳ ಹಿಂದೇ ವಿನಯ್ ಗುರೂಜಿ ಅವರು ನಾಗಾರಾಧನೆ ಬಗ್ಗೆ ಮಾತನಾಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಬಿಜ್ಞಾಸು ಎಂಬ ಗ್ರೂಪ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ತನ್ನ ತಪ್ಪಿನ ಅರಿವಾಗಿ ಕೊಪ್ಪದಲ್ಲಿರುವ ಆಶ್ರಮಕ್ಕೆ ಬಂದು ತಪ್ಪೊಪ್ಪಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವ್ಯಕ್ತಿ ಈ ಪೋಸ್ಟ್ ಹಾಕಿದ್ದು, ಯಾರದ್ದೋ ಪ್ರಚೋದನೆಯಿಂದ ಈ ತಪ್ಪು ಮಾಡಿದ್ದೇನೆ ಎನ್ನಲಾಗಿದೆ.
ಈ ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ. ಇಲ್ಲಿ ಬಂದ ಮೇಲೆ ಆಶ್ರಮದ ಬಗ್ಗೆ ವಿಶೇಷ ಗೌರವ ಬಂದಿದೆ ಎಂದೂ ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.