ಹಾಂಕಾಂಗ್: ಟಿಯಾನ್ಮೆನ್ ಸ್ಕ್ವೇರ್ ದುರಂತಕ್ಕೆ 32 ವರ್ಷ ತುಂಬಿದ್ದು ಈ ಘಟನೆಯನ್ನು ನೆನಪಿಸಿ ಜನರು ಮೊಂಬತ್ತಿ ಬೆಳಗಿ ಜಾಗರಣೆ ಕುಳಿತಿದ್ದರು. ಈ ವೇಳೆ ಪೊಲೀಸರು ಕಾರ್ಯಕರ್ತೆ ಚೌ ಹ್ಯಾಂಗ್ ತುಂಗ್ ಅವರನ್ನು ಬಂಧಿಸಿದ್ದಾರೆ.
ಪ್ರಜಾಪ್ರಭುತ್ವದ ಬಗ್ಗೆ ಧ್ವನಿ ಎತ್ತದಂತೆ ಅಲ್ಲಿನ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಚೌ ಹ್ಯಾಂಗ್ ತುಂಗ್, ಸಭೆಯನ್ನು ನಡೆಸಿದಕ್ಕೆ ಆಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೌ ಹ್ಯಾಂಗ್ ತುಂಗ್, ಹಾಂಗ್ ಕಾಂಗ್ ಒಕ್ಕೂಟದ ಉಪಾಧ್ಯಕ್ಷೆಯಾಗಿದ್ದಾರೆ. ಪ್ರತಿ ವರ್ಷ ವಾರ್ಷಿಕೋತ್ಸವವನ್ನು ಇಲ್ಲಿನ ವಿಕ್ಟೋರಿಯಾ ಪಾರ್ಕ್‌ನಲ್ಲಿ ನಡೆಸಲಾಗುತ್ತಿತ್ತು. ಸದ್ಯ ಪೊಲೀಸರು ಪಾರ್ಕ್ನ್ನು ಮುಚ್ಚಿದ್ದರು.
1989 ರ ಜೂನ್ 4 ರಂದು ಚೀನಾದ ಮಿಲಿಟರಿ ವಿದ್ಯಾರ್ಥಿಗಳ ನೇತೃತ್ವದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ಮರಣ ಹೊಂದಿದವರಿಗೆ ಗೌರವ ಸೂಚಿಸಲು ಹಾಂಕಾಂಗ್‌ನ ವಿಕ್ಟೋರಿಯಾ ಪಾರ್ಕ್‌ನಲ್ಲಿ ಜನರು ಜಮಾಯಿಸಿ ಮೊಂಬತ್ತಿ ಬೆಳಗಿದ್ದರು.