ETV Bharat / briefs

ಬಿರುಗಾಳಿಗೆ ಮನೆಯ ಮೇಲೆ ಉರುಳಿಬಿದ್ದ ಮರ! - ಮುದ್ದೇಬಿಹಾಳ ಬಿರುಗಾಳಿ

ಮನೆ ಮುಂದಿದ್ದ ಕಟ್ಟೆ ಮೇಲೆ ಇದ್ದ ಮರ ಬಿರುಗಾಳಿಗೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯೊಳಗೆ ಇರುವವರಿಗೆ ಯಾವುದೇ ಅಪಾಯ ಆಗಿಲ್ಲ.

tree
tree
author img

By

Published : Apr 29, 2021, 9:50 PM IST

ಮುದ್ದೇಬಿಹಾಳ(ವಿಜಯಪುರ): ಭಾರಿ ಬಿರುಗಾಳಿ ಹಾಗೂ ಮಳೆಗೆ 30 ವರ್ಷಗಳಷ್ಟು ಪುರಾತನ ಮರವೊಂದು ಮನೆಯೊಂದರ ಮೇಲೆ ಉರುಳಿಬಿದ್ದ ಘಟನೆ ತಾಲೂಕಿನ ಹಡಗಲಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ಗ್ರಾಮದಲ್ಲಿರುವ ಸಂಗಪ್ಪ ಚಲವಾದಿ ಎಂಬುವವರ ಮನೆ ಮುಂದಿದ್ದ ಕಟ್ಟೆ ಮೇಲೆ ಇದ್ದ ಮರ ಬಿರುಗಾಳಿಗೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಮನೆಯೊಳಗೆ ಇರುವವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ ಮನೆಯ ಛಾವಣಿ ಗೋಡೆಗೆ ಹಾನಿಯಾಗಿದ್ದು ಪತ್ರಾಸಗೆ ಧಕ್ಕೆಯಾಗಿದೆ.

ಅದೇ ಗ್ರಾಮದ ಪತ್ರಿ ಬಸವಣ್ಣನ ಕಟ್ಟೆಯ ಮೇಲಿದ್ದ ಮರವೂ ಬಿರುಗಾಳಿಗೆ ಮುರಿದು ಬಿದ್ದಿದೆ.

ಪರಿಹಾರ ನೀಡಲು ಆಗ್ರಹ:

ಭಾರಿ ಬಿರುಗಾಳಿ ಮಳೆಗೆ ಮುರಿದು ಮನೆಗೆ ಹಾನಿ ಸಂಭವಿಸಿದ್ದು ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕು ಎಂದು ಹಾನಿಗೀಡಾಗಿರುವ ಮನೆಯ ಸಂಗಪ್ಪ ಚಲವಾದಿ ಗ್ರಾಮಸ್ಥ ಅಬ್ದುಲಗನಿ ಕಂಚಗಾರ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.