ಮೈಸೂರು: ರಾಜ್ಯ ಸಂಪೂರ್ಣ ಲಾಕ್ಡೌನ್ ಮಾಡಿ ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಒತ್ತಾಯಿಸಿದರು.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಧ ಲಾಕ್ಡೌನ್ ಮಾಡಿರೋದ್ರಿಂದ ಕೊರೊನಾ ಕಂಟ್ರೋಲ್ ಮಾಡಲು ಆಗೋದಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ತಡೆಗಟ್ಟುವ ಬದಲು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳು, ಮದ್ಯ ಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಜನರು ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಇದು ಕೊರೊನಾ ಹರಡಲು ಕಾರಣವಾಗುತ್ತಿದೆ. ಕೊರೊನಾ ಕಡಿವಾಣ ಹಾಕಲು ರಾಜ್ಯ ಸಂಪೂರ್ಣ ಲಾಕ್ ಡೌನ್ ಆಗಲೇ ಬೇಕು ಎಂದು ಒತ್ತಾಯಿಸಿದರು.
ಲಾಕ್ಡೌನ್ ಆದ್ರೆ ರೋಗಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಮಾಡಿಕೊಂಡು ಕಂಟ್ರೋಲ್ ಮಾಡಬಹುದು. ಭಾರತ ಕೊರೊನಾ ಪರಿಸ್ಥಿತಿಯನ್ನ ವಿದೇಶಿ ಮಾಧ್ಯಮಗಳು ಅಣಕ ಮಾಡುತ್ತಿದೆ. ಡಬ್ಲ್ಯೂಎಚ್ಒ ಸೇರಿ ವಿವಿಧ ಸಂಸ್ಥೆಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿರೋದು ಸ್ವಾಗತಾರ್ಹವಾಗಿದೆ. ಆದ್ರೆ ಪರಿಸ್ಥಿತಿ ಹೀಗೆ ಬಿಟ್ಟರೆ ಮುಂದೆ ತೊಂದರೆ ಆಗಲಿದೆ. ಮುಖ್ಯಮಂತ್ರಿಗಳೇ ಕೂಡಲೇ ಕರ್ನಾಟಕವನ್ನು ಲಾಕ್ಡೌನ್ ಮಾಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಗೇ ಆವಾಜ್ ಹಾಕಿದ ಮಹಿಳೆ!