ನವದೆಹಲಿ: ತನ್ನ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿರುವ ಝೈಡಸ್ ಕ್ಯಾಡಿಲಾ ಇದೀಗ 12 ಮತ್ತು ಅದಕ್ಕಿಂತ ಹೆಚ್ಚಿನ ವರ್ಷ ಮೇಲ್ಪಟ್ಟವರಿಗಾಗಿ ತುರ್ತು ಬಳಕೆಗೆ ಅನುಮೋದನೆ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ಗೆ ಅರ್ಜಿ ಸಲ್ಲಿಸಿದೆ.
ಜೈಕೋವ್-ಡಿ (ZyCoV-D)ಎಂಬುದು ಭಾರತದ ಝೈಡಸ್ ಕ್ಯಾಡಿಲಾ ಔಷಧ ಸಂಸ್ಥೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಡಿಎನ್‌ಎ ಕೋವಿಡ್ ಲಸಿಕೆಯಾಗಿದೆ. ವರ್ಷಕ್ಕೆ ಲಸಿಕೆಯ 120 ಮಿಲಿಯನ್ ಡೋಸ್ ತಯಾರಿಸಲು ಝೈಡಸ್ ಕ್ಯಾಡಿಲಾ ಯೋಜಿಸಿದೆ.
ಇದನ್ನೂ ಓದಿ: ಇಂದು ರಾಷ್ಟ್ರೀಯ ವೈದ್ಯರ ದಿನ.. ಏನಿದರ ವಿಶೇಷತೆ, ಯಾರ ಸ್ಮರಣಾರ್ಥವಾಗಿ ಈ ದಿನ?
ಒಂದು ವೇಳೆ ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅವಕಾಶ ಸಿಕ್ಕರೆ, ದೇಶದಲ್ಲಿ ಡಿಸಿಜಿಐ ಅನುಮೋದನೆ ನೀಡಿದ ಆರನೇ ಕೊರೊನಾ ಲಸಿಕೆ ಇದಾಗಲಿದೆ. ಈಗಾಗಲೇ ದೇಶೀಯ ಲಸಿಕೆಗಳಾದ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಹಾಗೂ ವಿದೇಶಿ ಲಸಿಕೆಗಳಾದ ಸ್ಪುಟ್ನಿಕ್ V, ಮಾಡರ್ನಾ ಮತ್ತು ಅಸ್ಟ್ರಾಜೆನೆಕಾಗೆ ಡಿಸಿಜಿಐ ಅನುಮೋದನೆ ನೀಡಿದೆ.