ಭೋಪಾಲ್: ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ಹಾಡಹಗಲೇ ಯುವಕರ ಗುಂಪೊಂದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ. ಅಲಿರಾಜ್‌ಪುರದ ಭಗೋರಿಯಾ ಬುಡಕಟ್ಟು ಜಾತ್ರೆಯಿಂದ ಜನರು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಚ್ 11 ರಂದು ಜಾತ್ರೆ ಪ್ರಾರಂಭವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಲಿರಾಜ್‌ಪುರ ಎಸ್ಪಿ ಮನೋಜ್ ಸಿಂಗ್ ಹೇಳಿದ್ದಾರೆ.
ಏನಿದು ಘಟನೆ?.. ಯುವಕರ ಗುಂಪೊಂದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಆಘಾತಕಾರಿ ಸಂಗತಿಯೆಂದರೆ, ಈ ಘಟನೆ ಸಂಭವಿಸಿದಾಗ ಅಲ್ಲೇ ನೂರಾರು ಜನರು ಹಾದು ಹೋಗುತ್ತಿದ್ದರೂ, ಯಾರೂ ಈ ದುಷ್ಕೃತ್ಯವನ್ನು ತಡೆಯಲು ಮುಂದಾಗಿಲ್ಲ.
ಇದನ್ನೂ ಓದಿ: ನವಜಾತ ಶಿಶುವಿನ ತಲೆ ಕಚ್ಚಿಕೊಂಡು ಬಂದ ಬೀದಿ ನಾಯಿ: ಬೆಚ್ಚಿಬಿದ್ದ ವನಸ್ಥಲಿಪುರಂ ಜನ
ಯುವಕರ ಗುಂಪೊಂದು ಯುವತಿಯನ್ನು ಪದೇ ಪದೇ ಹಿಗ್ಗಾಮುಗ್ಗಾ ಎಳೆದಾಡಿದೆ. ಈ ಘಟನೆ ಖಂಡಿಸಿರುವ ರಾಜ್ಯ ಕಾಂಗ್ರೆಸ್ ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದೆ.