ನವದೆಹಲಿ : ಆಟೋ ರಿಕ್ಷಾದಲ್ಲಿ ತೆರಳುವಾಗ ಪ್ರಿಯಕರನ ಜೊತೆ ಜಗಳವಾಡಿಕೊಂಡ ಯುವತಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ರಾಷ್ಟ್ರೀಯ ಹೆದ್ದಾರಿ- 24ರ ಮೇಲ್ಸೇತುವೆ ಬಳಿ ನಡೆದಿದೆ.
ಪರಮ್ಜೀತ್ ಕೌರ್ (20) ಎಂದು ಮಹಿಳೆಯನ್ನು ಗುರುತಿಸಲಾಗಿದ್ದು, ಹೃತಿಕ್ ಎಂಬ ಆಕೆಯ ಪ್ರಿಯಕರನನ್ನು ಆಶ್ರಮ್ ಚೌಕ್ ಬಳಿಯಿರುವ ಪಾರ್ಕ್ನಲ್ಲಿ ಭೇಟಿಯಾಗಿದ್ದಳು. ಆಟೋ ಹತ್ತುವ ವೇಳೆಯೂ ವಾಗ್ವಾದ ನಡೆಯುತ್ತಿದ್ದು, ಪರಂಜೀತ್ ಕೌರ್ನ ಮಾಜಿ ಪ್ರಿಯಕರ ಸಿದ್ಧಾರ್ಥ್ ಕೂಡಾ ಸ್ಥಳಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು.. ಕಾರಣ ಇಲ್ಲದಿಲ್ಲ..
ಈ ವೇಳೆ ಹೃತಿಕ್ ಹಲವು ಬಾರಿ ಪರಮ್ಜೀತ್ ಕೌರ್ಳನ್ನು ಥಳಿಸಿದ್ದಾನೆ. ನಂತರ ಇಬ್ಬರೂ ಆಟೋದಲ್ಲಿಯೋ ಗಲಾಟೆ ನಡೆಸಿದ್ದು, ಆಟೋದಿಂದ ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಪಾಂಡವ್ ನಗರದ ಆಸ್ಪತ್ರೆಗೆ ದಾಖಲಿಸಿ, ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್.ಪಿ. ಮೀನಾ ತಿಳಿಸಿದ್ದಾರೆ.