ETV Bharat / bharat

ಭೀಮನ ಅಮಾವಾಸ್ಯೆ.. ಗಂಡಂದಿರ ಆಯುರ್​ ಆರೋಗ್ಯಕ್ಕೆ ಗೃಹಿಣಿಯರಿಂದ ಪಾದ ಪೂಜೆ - ಭೀಮನ ಅಮಾವಾಸ್ಯೆಯ ವಿವಿಧ ಹೆಸರುಗಳು

ಭೀಮನ ಅಮಾವಾಸ್ಯೆ ಹಬ್ಬದ ಕುರಿತಾದ ಒಂದಿಷ್ಟು ಪ್ರಯೋಜನಕಾರಿ ಮಾಹಿತಿಯನ್ನು ತಿಳಿದುಕೊಳ್ಳಿ.

Bhiman Amavasya
ಭೀಮನ ಅಮಾವಾಸ್ಯೆ
author img

By

Published : Aug 8, 2021, 9:22 AM IST

ಭೀಮನ ಅಮಾವಾಸ್ಯೆಯನ್ನು ಹಿಂದೂ ಪಂಚಾಂಗದಲ್ಲಿ ಆಷಾಢ ಮಾಸದ ಅಮಾವಾಸ್ಯೆಯ ದಿನದಂದು ದಕ್ಷಿಣ ಭಾರತದಲ್ಲಿ ಅದರಲ್ಲೂ ಹೆಚ್ಚಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ?, ಇದರ ಹಿನ್ನೆಲೆಯ ಏನು? ಎಂಬುದರ ಮಾಹಿತಿ ಇಲ್ಲಿದೆ..

ಇಂದು ರಾಜ್ಯಾದ್ಯಂತ (ಆಗಸ್ಟ್‌ 8) ಭೀಮನ ಅಮಾವಾಸ್ಯೆ ಆಚರಿಸಲಾಗುತ್ತಿದೆ. ಈ ಹಬ್ಬ ಶುಭ ಅವಧಿಯ ಆರಂಭವನ್ನು ಸೂಚಿಸುವುದರಿಂದ ಅನೇಕರು ದೇವಾಲಯಗಳಿಗೆ ಭೇಟಿ ನೀಡಿ, ವೀಶೆಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುವುದು ವಾಡಿಕೆ.

ಭೀಮನ ಅಮಾವಾಸ್ಯೆಯ ವಿವಿಧ ಹೆಸರುಗಳು:

ಭೀಮನ ಅಮಾವಾಸ್ಯೆ ವ್ರತ ಆಚರಣೆಯನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುವುದುಂಟು. ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯಲಾಗುತ್ತಿದೆ. ಆದರೆ ಭೀಮನ ಅಮಾವಾಸ್ಯೆ ಎಂದೇ ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾಗಿದೆ. ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆದರೆ, ಉತ್ತರ ಕನ್ನಡದ ಕಡೆ ಇದನ್ನು ಕೊಡೆ ಅಮಾವಾಸ್ಯೆ ಎಂದು ಹೇಳಲಾಗ್ತಿದೆ.

ಹಬ್ಬ ಹರಿದಿನಗಳು ನಮ್ಮ ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿಯವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಂತಹ ವಿಶೇಷ ಹಬ್ಬಗಳಲ್ಲಿ ಭೀಮನ ಅಮಾವಾಸ್ಯೆ ಕೂಡ ಒಂದು. ಕೌಟುಂಬಿಕ ಜೀವನದ ಸುಖ ಸಂತೋಷಕ್ಕಾಗಿ ಮಹಿಳೆಯರು ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಸತಿ-ಪತಿಗಳು ಒಟ್ಟಿಗೆ ಇರಬೇಕು, ನಮ್ಮ ಬಾಂಧವ್ಯ ಉತ್ತಮವಾಗಬೇಕು. ಗಂಡನಿಗೆ ಒಳ್ಳೆಯದಾಗಲಿ ಎಂದು ಹೆಣ್ಣುಮಕ್ಕಳು ಪ್ರಾರ್ಥಿಸುತ್ತಾರೆ.

ಭೀಮನ ಅಮಾವಾಸ್ಯೆ ವಿಶೇಷತೆ:

ಪುರಾಣಗಳ ಪ್ರಕಾರ, ಶಿವನು ಭೀಮನ ಅಮಾವಾಸ್ಯೆಯಂದೇ ಪಾರ್ವತಿ ದೇವಿಯನ್ನು ವಿವಾಹವಾಗುತ್ತಾನೆ. ಆದ್ದರಿಂದ ಈ ದಿನವನ್ನು ಭೀಮನ ಅಮಾವಾಸ್ಯೆಯೆಂದು ಆಚರಿಸಲಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು, ವಿವಾಹಿತ ಹೆಣ್ಣುಮಕ್ಕಳು ಈ ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಶಿವ-ಪಾರ್ವತಿಯರು ಸಂತಾನ, ಆಯಸ್ಸು, ಯಶಸ್ಸು, ಸಂತೋಷ, ಐಶ್ವರ್ಯ ಸೇರಿದಂತೆ ಎಲ್ಲವನ್ನು ಕರುಣಿಸುತ್ತಾರೆಂಬ ನಂಬಿಕೆಯಿದೆ. ಜೊತೆಗೆ ಆಷಾಢ ಮಾಸದಲ್ಲಿ ತವರಿಗೆ ಹೋಗಿದ್ದ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಮತ್ತೆ ಪತಿ ಮನೆಗೆ ಆಗಮಿಸಿ, ಗಂಡನ ಪಾದ ತೊಳೆದು, ಪೂಜಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.