ETV Bharat / bharat

'ಮಲಬಾರ್ 2020' 2ನೇ ಆವೃತ್ತಿ: ಐಎನ್​ಎಸ್​​ ವಿಕ್ರಮಾದಿತ್ಯ ಮೂಲಕ ಮಿಗ್ -29 ಕಾರ್ಯಾಚರಣೆ - ಬಹುಪಕ್ಷೀಯ ಮಲಬಾರ್ ನೌಕಾಭ್ಯಾಸ

ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿರುವ ಬಹುಪಕ್ಷೀಯ ಮಲಬಾರ್ ನೌಕಾಭ್ಯಾಸ, 'ಮಲಬಾರ್ 2020' ವೇಳೆ ಭಾರತೀಯ ನೌಕಾಪಡೆಯ ಮಿಗ್ -29 ಐಎನ್​ಎಸ್​​ ವಿಕ್ರಮಾದಿತ್ಯ ಮೂಲಕ ಕಾರ್ಯಾಚರಣೆ ನಡೆಸಿದೆ.

Watch: MiG-29s operated from INS Vikramaditya as part of Malabar excercise phase 2
ಐಎನ್​ಎಸ್​​ ವಿಕ್ರಮಾದಿತ್ಯ ಮೂಲಕ ಮಿಗ್ -29 ಕಾರ್ಯಾಚರಣೆ
author img

By

Published : Nov 20, 2020, 1:27 PM IST

ನವದೆಹಲಿ: ಇಂದು ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ನಡೆಯುತ್ತಿರುವ ಬಹುಪಕ್ಷೀಯ ಮಲಬಾರ್ ನೌಕಾಭ್ಯಾಸ, 'ಮಲಬಾರ್ 2020' ವೇಳೆ ಭಾರತೀಯ ನೌಕಾಪಡೆಯ ಮಿಗ್ -29 ಕೆ ಮತ್ತು ಯುಎಸ್ ನೌಕಾಪಡೆಯ ಎಫ್ -18 ಗಳು ಮೇಲ್ಮೈ ಬಲದ ಮೇಲೆ ಅನುಕರಿಸುವ ದಾಳಿ ನಡೆಸಿದರು.

ಐಎನ್​ಎಸ್​​ ವಿಕ್ರಮಾದಿತ್ಯ ಮೂಲಕ ಮಿಗ್ -29 ಕಾರ್ಯಾಚರಣೆ

ಭಾರತೀಯ ನೌಕಾಪಡೆಯ ಮಿಗ್ -29 ಗಳು, ಯುಎಸ್ ನೌಕಾಪಡೆಯ ಎಫ್ -18 ಗಳ ರೀತಿ ದಾಳಿಗಳನ್ನು ನಡೆಸಿದವು. ಮಿಗ್ -29 ಗಳು ಐಎನ್‌ಎಸ್ ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಯಿಂದ ಕಾರ್ಯನಿರ್ವಹಿಸುತ್ತಿದ್ದವು. ಬಹುಪಕ್ಷೀಯ ಮಲಬಾರ್ ನೌಕಾ ವ್ಯಾಯಾಮದ 24 ನೇ ಆವೃತ್ತಿಯ 2ನೇ ಹಂತವು ಇಂದು ಮುಕ್ತಾಯಗೊಳ್ಳಲಿದೆ.

ನಿನ್ನೆ ಭಾರತೀಯ ನೌಕಾಪಡೆಯ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ, ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್‌ಎಸ್ ನಿಮಿಟ್ಜ್ ಮತ್ತು ಇತರ ಭಾರತೀಯ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನಿನ ಯುದ್ಧನೌಕೆಗಳು ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ 'ಮಲಬಾರ್ -2020' ಸಮರಾಭ್ಯಾಸ ನಡೆಸಿದವು. ಮಲಬಾರ್ 2020 ಎರಡನೇ ಹಂತವು ನವೆಂಬರ್ 17 ರಿಂದ ನವೆಂಬರ್ 20 ರವರೆಗೆ ನಡೆಯುತ್ತಿದೆ. ಮಲಬಾರ್ 2020 ಸಮರಾಭ್ಯಾಸವನ್ನು ಮೊದಲ ಹಂತವು ನವೆಂಬರ್ 3 ರಿಂದ 6 ರವರೆಗೆ ಬಂಗಾಳಕೊಲ್ಲಿಯಲ್ಲಿ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.