ಭುವನೇಶ್ವರ: ಒಡಿಶಾದ ಅಂಗನವಾಡಿ ಕಾರ್ಯಕರ್ತೆ ಮನೆಗಳಲ್ಲಿ ನಡೆಸಲಾದ ಶೋಧ ಕಾರ್ಯದ ವೇಳೆ (Vigilance Directorate) ಜಾಗರೂಕ ನಿರ್ದೇಶನಾಲಯ 4 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ ಮಾಡಿದೆ.
ಭುವನೇಶ್ವರದ ಕೊರಡಕಾಂತ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಬಿತಾ ಮಥನ್ ತನ್ನ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ನಿರ್ದೇಶನಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
4 ಕೋಟಿಗೂ ಹೆಚ್ಚು ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಮನೆ ಶೋಧದ ವೇಳೆ ಪತ್ತೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಭುವನೇಶ್ವರದಲ್ಲಿ 10 ಪ್ಲಾಟ್ಗಳು ಸೇರಿದಂತೆ ಒಟ್ಟು 14 ಪ್ಲಾಟ್‌ಗಳಳು 7 ಕಟ್ಟಡಗಳು, ಒಂದು ವಾಹನ ಮತ್ತು 6.36 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಅಂಗನವಾಡಿ ಕಾರ್ಯಕರ್ತೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಖೋರ್ಧಾ, ಕೇಂದ್ರಪಾರ, ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳ ಆರು ಸ್ಥಳಗಳಲ್ಲಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿದ್ದು, ಇದರಲ್ಲಿ 10 ಪೊಲೀಸ್ ಉಪಾಧೀಕ್ಷಕರು, ಐವರು ಇನ್ಸ್ಪೆಕ್ಟರ್ಗಳು ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.