ETV Bharat / bharat

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ - ವಿಡಿಯೋ - ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ

ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಆನೆ ಮರಿಯೊಂದು ರಕ್ಷಿಸಿದೆ. ಆನೆಗಳು ಕೂಡ ಮನುಷ್ಯರಂತೆ ಅಪಾಯದಲ್ಲಿರುವವರಿಗೆ ಹೇಗೆ ಸ್ಪಂದಿಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

Elephant Rescuing a 'Drowning' Man
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ ಆನೆ
author img

By

Published : Jul 17, 2022, 2:48 PM IST

ಯಾರಾದರೂ ಕಷ್ಟದಲ್ಲಿದ್ದಾಗ ದೇವರು ಯಾವುದಾದರೂ ಒಂದು ರೂಪದಲ್ಲಿ ಬಂದು ಕಾಪಾಡುತ್ತಾನೆ ಎಂಬುದು ನಂಬಿಕೆ ಇರುತ್ತದೆ. ಸಂಕಷ್ಟದಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಸಹ ಸಹಾಯಕ್ಕೆ ಬರುತ್ತವೆ. ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಪುಟ್ಟ ಆನೆ ಮರಿಯೊಂದು ರಕ್ಷಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಕಾಪಾಡಲು ಪುಟ್ಟ ಆನೆಯೊಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಆನೆಗಳ ಹಿಂಡು ನದಿ ದಡದಲ್ಲಿ ಇರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇದನ್ನು ಮೂಲತಃ 2016 ರಲ್ಲಿ Elephant News ಎಂಬ ಯೂಟ್ಯೂಬ್​ ಚಾನಲ್ ಹಂಚಿಕೊಂಡಿತ್ತು.

ಅಲ್ಲಿ ಆಗಿದ್ದೇನು.. ಒಬ್ಬ ವ್ಯಕ್ತಿ ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿರುತ್ತಾನೆ. ಇದನ್ನು ಗಮನಿಸಿದ ಆನೆ ಮರಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಆ ವ್ಯಕ್ತಿಯನ್ನು ರಕ್ಷಿಸಲು ನದಿಗೆ ಇಳಿದಿರುವ ದೃಶ್ಯ ಎಂತಹವರಿಗೂ ಮನ ಮುಟ್ಟುತ್ತದೆ. ಈ ಪುಟ್ಟ ಆನೆಯು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ತನ್ನ ಸೊಂಡಿಲಿನಿಂದ ಹಿಡಿದು ದಡಕ್ಕೆ ಎಳೆಯುತ್ತದೆ.

ಬಿಎಸ್‌ಇ ಸಿಇಒ ಆಶಿಶ್ ಚೌಹಾಣ್ ಅವರು ಹಂಚಿಕೊಂಡಿರುವ ಈ ವಿಡಿಯೋ ಟ್ವಿಟ್ಟರ್‌ನಲ್ಲಿ 5,86,000 ವೀಕ್ಷಣೆ ಪಡೆದಿದೆ. ಅವರು ಶೀರ್ಷಿಕೆಯಲ್ಲಿ "ನಾವು ಈ ರೀತಿಯ ಹೃದಯವಂತ ಪ್ರಾಣಿ ಸ್ನೇಹಿತರಿಗೆ ಅರ್ಹರೇ?" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ.. ಮಲಗಿದ ತನ್ನ ಮರಿ ಎದ್ದೇಳದೇ ಇದ್ದಾಗ ತಾಯಿ ಆನೆ ಮಾಡಿದ್ದೇನು? ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.