ETV Bharat / bharat

Viral Video - ಕೈ ಕಟ್ಟಿ ಹಾಕಿ ಯುವಕನಿಗೆ ದೊಣ್ಣೆಯಿಂದ ಹಲ್ಲೆ!

ಯುವಕನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಆತನಿಗೆ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ರಾಜಸ್ಥಾನದ ಭದಸೋದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗ್ತಿದೆ.

chittorgarh
ಕೈ ಕಟ್ಟಿ ಹಾಕಿ ಯುವಕನಿಗೆ ದೊಣ್ಣೆಯಿಂದ ಹಲ್ಲೆ
author img

By

Published : Jun 16, 2021, 6:32 PM IST

ಚಿತ್ತೋರ್​ಗಢ(ರಾಜಸ್ಥಾನ): ಯುವಕನೊಬ್ಬನ ಕೈಯನ್ನು ಕಟ್ಟಿಹಾಕಿ ವ್ಯಕ್ತಿಯೋರ್ವ ಆತನಿಗೆ ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಘಟನೆ ರಾಜಸ್ಥಾನದ ಭದಸೋದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗ್ತಿದೆ. ಘಟನೆ ಸಂಬಂಧ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.

ಕೈ ಕಟ್ಟಿ ಹಾಕಿ ಯುವಕನಿಗೆ ದೊಣ್ಣೆಯಿಂದ ಹಲ್ಲೆ

ಈ ವಿಡಿಯೋದಲ್ಲಿ ಯುವಕನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಲಾಗಿದೆ. ಇನ್ನು ಇಬ್ಬರು ವ್ಯಕ್ತಿಗಳು ಅವನಿಗೆ ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿ ವಿಡಿಯೋ ಮಾಡುತ್ತಿದ್ದು, ಯುವಕ ಹೊಡೆಯದಂತೆ ಪದೇ ಪದೇ ಮನವಿ ಮಾಡುತ್ತಿರುವುದು ಕಂಡುಬರುತ್ತದೆ. ಹಲ್ಲೆ ಮಾಡಿದ ಪರಿಣಾಮ ಯುವಕನಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಆತನನ್ನು ಉದಯಪುರ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಯುವಕ ಉದಯಪುರ ಜಿಲ್ಲೆಯ ಭಿಂದರ್ ನಿವಾಸಿ. ಘಟನೆ ಬಗ್ಗೆ ಆತನ ಕುಟುಂಬ ಸದಸ್ಯರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ರಾಜು, ಬಸಂತಿಲಾಲ್ ಮತ್ತು ರಾಮೇಶ್ವರ ಎಂಬವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕುಟುಂಬ ಕಲಹ ಕಾರಣ ಎಂದು ಶಂಕಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.