ಲಖನೌ (ಉತ್ತರ ಪ್ರದೇಶ): 32 ವರ್ಷ ಹಿಂದಿನ ಅವಧೇಶ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಶಾಸಕ, ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿಗೆ ವಾರಣಾಸಿಯ ಸಂಸದ ಎಂಎಲ್‌ಎ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟ ಮಾಡಿದೆ. ಬಂದಾ ಜೈಲಿನಲ್ಲಿರುವ ಅನ್ಸಾರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ನ್ಯಾಯಾಲಯವು 1 ಲಕ್ಷ ದಂಡವನ್ನೂ ವಿಧಿಸಿ ಆದೇಶ ನೀಡಿದೆ.
32 ವರ್ಷಗಳ ಹಿಂದೆ ಅಂದ್ರೆ 3 ಆಗಸ್ಟ್ 1991 ರಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿಯೂ ಆಗಿರುವ ಮುಕ್ತಾರ್ ಅನ್ಸಾರಿ ಅವರನ್ನು ದೋಷಿ ಎಂದು ಹೇಳಿದ್ದ ನ್ಯಾಯಾಲಯವು ಇಂದು ತೀರ್ಪು ಪ್ರಕಟ ಮಾಡಿದೆ. ಹಳೆಯ ಪ್ರಕರಣವಾಗಿದ್ದರಿಂದ, ಅಲ್ಲದೇ ಗಂಭೀರ ಸ್ವರೂಪದ್ದಾಗಿದ್ದರಿಂದ ಈ ನ್ಯಾಯಾಲಯದ ಸುತ್ತಲು ಬಿಗಿ ಭದ್ರತೆ ಒದಗಿಸಲಾಗಿತ್ತು.
-
Varanasi’s MP MLA court awards life imprisonment to jailed mafia Mukhtar Ansari in 1991 Awadhesh Rai murder case pic.twitter.com/hcM7OTrN79
— ANI (@ANI) June 5, 2023 " class="align-text-top noRightClick twitterSection" data="
">Varanasi’s MP MLA court awards life imprisonment to jailed mafia Mukhtar Ansari in 1991 Awadhesh Rai murder case pic.twitter.com/hcM7OTrN79
— ANI (@ANI) June 5, 2023Varanasi’s MP MLA court awards life imprisonment to jailed mafia Mukhtar Ansari in 1991 Awadhesh Rai murder case pic.twitter.com/hcM7OTrN79
— ANI (@ANI) June 5, 2023
ನ್ಯಾಯಾಲದ ಆದೇಶಕ್ಕೂ ಮುನ್ನ ಅವಧೇಶ್ ರೈ ಅವರ ಸಹೋದರ ಹಾಗೂ ಮಾಜಿ ಶಾಸಕ ಅಜಯ್ ರೈ ಮಾತನಾಡಿ, ಇದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ. ನಮ್ಮ ಇಡೀ ಕುಟುಂಬ ಈ ಆದೇಶಕ್ಕಾಗಿ ಕಾಯುತ್ತಿತ್ತು. ನಮ್ಮ ತಾಳ್ಮೆಗೆ ಇದೀಗ ನ್ಯಾಯ ಸಿಕ್ಕಿದೆ. ಮುಖ್ತಾರ್ ಅನ್ಸಾರಿಯ ಬೆದರಿಕೆಗೆ ನಾವು ಯಾವತ್ತೂ ಜಗ್ಗಲಿಲ್ಲ. ಅಲ್ಲದೇ ಎಷ್ಟೋ ಸರ್ಕಾರಗಳು ಬಂದು ಹೋದವು. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇತ್ತು. ನಮ್ಮ ಇಷ್ಟು ದಿನಗಳ ಹೋರಾಟ ನಮಗೆ ನೆಮ್ಮದಿ ತರಿಸಿದೆ. ನಾವು ಹಾಗೂ ನಮ್ಮ ವಕೀಲರ ಪ್ರಯತ್ನದಿಂದಾಗಿ ಇಂದು ನ್ಯಾಯಾಲಯವು ನನ್ನ ಸಹೋದರನ ಕೊಲೆ ಪ್ರಕರಣದಲ್ಲಿ ಮುಖ್ತಾರ್‌ನನ್ನು ದೋಷಿ ಎಂದು ಆದೇಶ ನೀಡಿದೆ. ಇದೀಗ ನ್ಯಾಯಾಧಿಕರಣ ಕೂಡ ಮುಕ್ತಾರ್ ಅನ್ಸಾರಿಗೆ ಸೂಕ್ತ ಶಿಕ್ಷೆ ನೀಡುವ ನಿರೀಕ್ಷೆ ಇದೆ ಎಂದು ಹೇಳಿದ್ದರು.
ಕೊಲೆ ನಡೆದಿದ್ದು ಯಾವಾಗ.. ಅವಧೇಶ್ ರೈ ಕಾಂಗ್ರೆಸ್ ಮುಖಂಡ ಅಜಯ್ ರೈ ಅವರ ಸಹೋದರ. 3 ಆಗಸ್ಟ್ 1991 ರಂದು ಸಹೋದರರಿಬ್ಬರು ತಮ್ಮ ಮನೆಯ ಮುಂದೆ ನಿಂತಿದ್ದಾಗ ವ್ಯಾನ್‌ನಿಂದ ಬಂದ ದುಷ್ಕರ್ಮಿಗಳು ಇವರ ಮೇಲೆ ಏಕಾಏಕಿ ಗುಂಡು ಹಾರಿಸಲು ಆರಂಭಿಸಿದ್ದರು. ದಾಳಿ ವೇಳೆ ಅವಧೇಶ್ ರೈಗೆ ಹಲವು ಗುಂಡುಗಳು ತಗುಲಿದ್ದವು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು. ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಅವರನ್ನು ಪ್ರಮುಖ ಆರೋಪಿ ಆಗಿದ್ದರು. ಭೀಮ್ ಸಿಂಗ್, ಕಮಲೇಶ್ ಸಿಂಗ್, ಮುನ್ನಾ ಬಜರಂಗಿ, ಮಾಜಿ ಶಾಸಕ ಅಬ್ದುಲ್ ಕಲಾಂ ಮತ್ತು ರಾಕೇಶ್ ಜಸ್ಟೀಸ್ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದರು.
ಕೊಲೆ ಯತ್ನ ಪ್ರಕರಣದಲ್ಲಿ ದೋಷಮುಕ್ತನಾಗಿದ್ದ ಅನ್ಸಾರಿ.. ಮೇ 17 ರಂದು ಮುಕ್ತಾರ್ ಅನ್ಸಾರಿ ಅವರಿಗೆ ಗಾಜಿಪುರದ ಸಂಸದ/ಶಾಸಕ ವಿಶೇಷ ನ್ಯಾಯಾಲಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷ ಮುಕ್ತಗೊಳಿಸಿತ್ತು. 14 ವರ್ಷಗಳ ಹಿಂದೆ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಪುರದ ವಿಶೇಷ ಕೋರ್ಟ್ ಅನ್ಸಾರಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ವಿವಾಹೇತರ ಸಂಬಂಧದ ಅನುಮಾನ.. ಬಾಳು ನೀಡಿದ ಪತಿಯಿಂದಲೇ ಚಾಕುವಿನಿಂದ ಇರಿದು ಪತ್ನಿಯ ಹತ್ಯೆ!