ETV Bharat / bharat

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಗುರುವಾರದೊಳಗೆ ರಕ್ಷಣೆ ಮಾಡ್ತೇವೆ: ಅಧಿಕಾರಿಗಳ ಅಭಯ - rescue operation still underway

ಉತ್ತರಾಖಂಡದಲ್ಲಿ ಸುರಂಗ ಕುಸಿತ ಘಟನೆಯಲ್ಲಿ ಸಿಲುಕಿದ ಕಾರ್ಮಿಕರ ಸಂವಹನ ಸಾಧಿಸಲಾಗಿದೆ. ಎಲ್ಲರನ್ನೂ ನಾಳೆಯೊಳಗೆ ಹೊರತೆಗೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರಾಖಂಡ ಸುರಂಗ
ಉತ್ತರಾಖಂಡ ಸುರಂಗ
author img

By ETV Bharat Karnataka Team

Published : Nov 14, 2023, 4:11 PM IST

ಡೆಹ್ರಾಡೂನ್ (ಉತ್ತರಾಖಂಡ) : ಉತ್ತರಕಾಶಿಯಲ್ಲಿ ಸುರಂಗದ ಒಂದು ಭಾಗ ಕುಸಿದು 40 ಕಾರ್ಮಿಕರು ಸಿಲುಕಿಕೊಂಡ ಘಟನೆಯನ್ನು ತನಿಖೆ ಮಾಡಲು ಉತ್ತರಾಖಂಡ ಸರ್ಕಾರ 6 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಅಲ್ಲದೇ, ಸುರಂಗದಲ್ಲಿ ಸಿಲುಕಿರುವ ಅಷ್ಟೂ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಕ್ಷಣಾ ಪಡೆಗಳು ದೊಡ್ಡ ಪೈಪ್‌ಗಳ ಸಹಾಯದಿಂದ ಸುರಂಗದೊಳಗಿನ ಕಾರ್ಮಿಕರಿಗೆ ಆಹಾರ, ನೀರು ಮತ್ತು ಆಮ್ಲಜನಕವನ್ನು ಒದಗಿಸುತ್ತಿದ್ದಾರೆ. ಸಿಲ್ಕ್ಯಾರಾ ಸುರಂಗ ಕುಸಿತದ ಕಾರಣಗಳನ್ನು ತನಿಖೆ ಮಾಡಲು ಭೂಕುಸಿತ ತಗ್ಗಿಸುವಿಕೆ ಮತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿದ ತಂಡ ಸುರಂಗ ಮಾರ್ಗ ಹಾಗೂ ಅದರ ಮೇಲಿನ ಬೆಟ್ಟವನ್ನು ಪರಿಶೀಲನೆ ನಡೆಸಿದೆ.

ತಜ್ಞರ ತಂಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡೆಹ್ರಾಡೂನ್‌ನ ನಿರ್ದೇಶಕ ಶಾಂತನು ಸರ್ಕಾರ್, ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿ ಖೈಂಗ್ ಶಿಂಗ್ ಲುರೈ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ವಿಜ್ಞಾನಿ ಸುನಿಲ್ ಕುಮಾರ್ ಯಾದವ್, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ಹಿರಿಯ ವಿಜ್ಞಾನಿ ರೂರ್ಕಿ ಕೌಶಿಲ್ , ಭೂವಿಜ್ಞಾನ ಮತ್ತು ಖನಿಜಶಾಸ್ತ್ರ ಇಲಾಖೆಯ ಉಪ ನಿರ್ದೇಶಕ ಜಿಡಿ ಪ್ರಸಾದ್ ಮತ್ತು ಯುಎಸ್​ಡಿಎಂಎ ಭೂವಿಜ್ಞಾನಿ ತಂದ್ರಿಲಾ ಸರ್ಕಾರ್ ಇದ್ದಾರೆ. ಇವರ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ: ಸುರಂಗವು 21 ಮೀಟರ್​ನಷ್ಟು ಕುಸಿದು ಬಿದ್ದಿದೆ. ಮೊದಲು ಒಂದು ಭಾಗದಲ್ಲಿ ಕುಸಿತವಾಗಿತ್ತು. ಇದರ ದುರಸ್ತಿಗೆ 40 ಕಾರ್ಮಿಕರು ತೆರಳಿದ್ದರು. ಈ ವೇಳೆ, ಮತ್ತೊಂದು ಕಡೆ ಕುಸಿದಿದೆ. ಇದರಿಂದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಸುರಂಗ ಕೊರೆಯುವ ಉಪಕರಣಗಳನ್ನು ಬಳಸಿಕೊಂಡು ದೊಡ್ಡ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಇವುಗಳ ಮೂಲಕ ಕಾರ್ಮಿಕರ ಹೊರತೆಗೆಯಲು ಮಾರ್ಗವನ್ನು ರೂಪಿಸಲಾಗುತ್ತಿದೆ. ಆಮ್ಲಜನಕ, ನೀರು ಮತ್ತು ಹಣ್ಣುಗಳಂತಹ ಲಘು ಆಹಾರ ಪದಾರ್ಥಗಳನ್ನು ಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಮಂಗಳವಾರ ರಾತ್ರಿ ಅಥವಾ ಬುಧವಾರದೊಳಗೆ ಕಾರ್ಮಿಕರನ್ನು ಸುರಂಗದಿಂದ ಹೊರತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಸುರಂಗದ ಬಳಿ 6 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 10 ಆಂಬ್ಯುಲೆನ್ಸ್‌ಗಳು, ವೈದ್ಯಕೀಯ ತಂಡಗಳಿವೆ. ಸಿಕ್ಕಿಬಿದ್ದ ಕಾರ್ಮಿಕರು ಹೊರಬಂದ ಬಳಿಕ ತಕ್ಷಣದ ವೈದ್ಯಕೀಯ ಆರೈಕೆಗೆ ಸಿದ್ಧತೆ ಮಾಡಲಾಗಿದೆ ಎಂದು ಎನ್‌ಎಚ್‌ಐಡಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್ ಸುದೇಹ್ರಾ ಹೇಳಿದರು.

ಇದನ್ನೂ ಓದಿ: ಸುರಂಗ ಮಾರ್ಗದೊಳಗೆ ಸಿಲುಕಿರುವ 40 ಕಾರ್ಮಿಕರು; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸಿಎಂ ಧಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.