ETV Bharat / bharat

ಅರ್ಥಪೂರ್ಣ ಚರ್ಚೆ ಮಾಡಿ ಎಂದ ನಮೋ.. ಆರಂಭದಲ್ಲೇ ವಿಪಕ್ಷಗಳ ಕೋಲಾಹಲ: ಕಲಾಪ ಮುಂದೂಡಿಕೆ - Parliament

ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು, ವಿಪಕ್ಷಗಳು ಕೋಲಾಹಲ ಎಬ್ಬಿಸಿದವು. ಈ ಹಿನ್ನೆಲೆ ಸ್ಪೀಕರ್​​ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ನಮೋ
ನಮೋ
author img

By

Published : Jul 19, 2021, 11:56 AM IST

Updated : Jul 19, 2021, 12:55 PM IST

ನವದೆಹಲಿ: ಇಂದಿನಿಂದ ಸಂಸತ್​ ಮಳೆಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಆರಂಭದ ದಿನ ನೂತನ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ನೂತನ ಸಚಿವರನ್ನು ಸಂಸತ್​ಗೆ ಪರಿಚಯಿಸಿಕೊಟ್ಟ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಭೆಯನ್ನುದ್ದೇಶಿ ಮಾತನಾಡಿದರು. ಈ ವೇಳೆ ವಿಪಕ್ಷಗಳು ಘೋಷಣೆ ಕೂಗಿ ಕೆಲಕಾಲ ಗದ್ದಲ ಎಬ್ಬಿಸಿದವು. ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಕೋಲಾಹಲವಾದ್ದರಿಂದ ಕಲಾಪಗಳೆರಡನ್ನೂ ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಅರ್ಥಪೂರ್ಣ ಚರ್ಚೆ ಮಾಡಿ ಎಂದ ನಮೋ.. ಆರಂಭದಲ್ಲೇ ವಿಪಕ್ಷಗಳ ಕೋಲಾಹಲ

ಅಧಿವೇಶನದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಪಕ್ಷಗಳು ಸರ್ಕಾರಕ್ಕೆ ತೀಕ್ಷ್ಣವಾದ, ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕು. ಇಡೀ ಜಗತ್ತು ಕೋವಿಡ್​ನಿಂದ ತತ್ತರಿಸಿರುವ ಸಂದರ್ಭದಲ್ಲಿ ಅಧಿವೇಶನದ ಸಮಯವನ್ನು ಹಾಳು ಮಾಡುಬಾರದು. ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಹೇಳಿದರು.

ಸಂಸದರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅವರು ಕೇಳುವ ಪ್ರಶ್ನೆಗಳಿಗೆ ಸತ್ಯವನ್ನು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುತ್ತೇವೆ. ಇದರಿಂದಾಗಿ ಜನರಿಗೆ ನಮ್ಮ ಸರ್ಕಾರದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ:ಇಂದಿನಿಂದ ಅಧಿವೇಶನ ಆರಂಭ.. ಈ ವಿಚಾರಗಳ ಬಗ್ಗೆ ದನಿ ಎತ್ತಲಿರುವ ವಿಪಕ್ಷಗಳು!

Last Updated : Jul 19, 2021, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.