ETV Bharat / bharat

UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ: ಶುಭಂ ಕುಮಾರ್​ಗೆ 1st ರ‍್ಯಾಂಕ್​​ - Jagrati Awasthi

2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಯುಪಿಎಸ್​ಸಿ ಪ್ರಕಟಿಸಿದ್ದು, ಒಟ್ಟು 761 ಅಭ್ಯರ್ಥಿಗಳು ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

UPSC
UPSC
author img

By

Published : Sep 24, 2021, 7:08 PM IST

Updated : Sep 25, 2021, 9:06 AM IST

ನವದೆಹಲಿ: ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್​ಸಿ) ತನ್ನ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಶುಭಂ ಕುಮಾರ್ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಶುಭಂ ಕುಮಾರ್, ಐಐಟಿ ಬಾಂಬೆಯಿಂದ ಬಿ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ.

ಜಾಗೃತಿ ಅವಸ್ಥಿ ಎರಡನೇ ರ‍್ಯಾಂಕ್ ಪಡೆದಿದ್ದು, ಇವರು ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಮನಿತ್ ಭೋಪಾಲ್ ಸಂಸ್ಥೆಯಿಂದ ಬಿ.ಟೆಕ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಅಂಕಿತಾ ಜೈನ್‌ ಮೂರನೇ ರ‍್ಯಾಂಕ್ ಪಡೆದಿದ್ದಾರೆ.

ಟಾಪ್​-25 ಅಭ್ಯರ್ಥಿಗಳ ಪಟ್ಟಿ
ಟಾಪ್​-25 ಅಭ್ಯರ್ಥಿಗಳ ಪಟ್ಟಿ

ಒಟ್ಟು 761 ಅಭ್ಯರ್ಥಿಗಳನ್ನು ಯುಪಿಎಸ್​ಸಿ ಆಯ್ಕೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್​ನಲ್ಲಿ ನೋಡಬಹುದು. ಫಲಿತಾಂಶವನ್ನು upsc.gov.in - ಈ ಲಿಂಕ್​ನಲ್ಲಿ ಪರಿಶೀಲಿಸಿ.

2020ರ ಅಕ್ಟೋಬರ್ 4 ರಂದು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ ನಡೆಸಲಾಗಿತ್ತು. 10,40,060 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆದರೆ 4,82,770 ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 202ರ ಜನವರಿಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಲು ಒಟ್ಟು 10,564 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು. ದೈಹಿಕ ಪರೀಕ್ಷೆಯಲ್ಲಿ 2,053 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು.

ಇದೀಗ ಒಟ್ಟು 761 ಅಭ್ಯರ್ಥಿಗಳನ್ನು (545 ಪುರುಷರು ಮತ್ತು 216 ಮಹಿಳೆಯರು) ಮಾತ್ರ ವಿವಿಧ ಸೇವೆಗಳ ನೇಮಕಾತಿಗಾಗಿ ಆಯೋಗವು ಶಿಫಾರಸು ಮಾಡಿದೆ. ಇವರಲ್ಲಿ 25 ಮಂದಿ ವಿಶೇಷ ಚೇತನರಾಗಿದ್ದಾರೆ. (7 ಮಂದಿ ಮೂಳೆ ಅಂಗವೈಕಲ್ಯ, ನಾಲ್ವರಿಗೆ ದೃಷ್ಟಿಹೀನತೆ, 10 ಮಂದಿಗೆ ಶ್ರವಣ ದೋಷ ಮತ್ತು ನಾಲ್ವರು ಇತರ ತೊಂದರೆಗಳಿಂದ ಬಳಲುತ್ತಿದ್ದಾರೆ).

ಪ್ರಥಮ ರ‍್ಯಾಂಕ್ ಪಡೆದ ಶುಭಂ ಕುಮಾರ್​ ಪ್ರತಿಕ್ರಿಯೆ

ಟಾಪ್​-25ರ ಪಟ್ಟಿಯಲ್ಲಿ 13 ಪುರುಷರು ಮತ್ತು 12 ಮಹಿಳೆಯರು ಇದ್ದಾರೆ. ಇವರೆಲ್ಲಾ ಮಾನವಶಾಸ್ತ್ರ, ಸಿವಿಲ್ ಎಂಜಿನಿಯರಿಂಗ್, ವಾಣಿಜ್ಯ ಮತ್ತು ಅಕೌಂಟೆನ್ಸಿ, ಅರ್ಥಶಾಸ್ತ್ರ, ಭೂಗೋಳ, ಗಣಿತ, ಮೆಕ್ಯಾನಿಕಲ್ ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ, ತತ್ವಶಾಸ್ತ್ರ, ಭೌತಶಾಸ್ತ್ರ, ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ, ಮತ್ತು ಸಮಾಜಶಾಸ್ತ್ರದಂತಹ ವಿಷಯಗಳನ್ನು ತಮ್ಮ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಲಿಖಿತ ಪರೀಕ್ಷೆ ಬರೆದಿದ್ದರು.

Last Updated : Sep 25, 2021, 9:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.