ETV Bharat / bharat

ಕೊರೊನಾ ತಪ್ಪು ಮಾಹಿತಿ ಅಳಿಸಲು ಮುಂದಾದ ಟ್ವಿಟರ್... - ಟ್ವಿಟರ್​ ಸಂಬಂಧಿತ ಸುದ್ದಿ

ಕೊರೊನಾ ಹಾಗೂ ವ್ಯಾಕ್ಸಿನ್ ಬಗ್ಗೆ ಇರುವ ಆಧಾರ ರಹಿತ ಮಾಹಿತಿಗಳನ್ನು ತೆಗೆದುಹಾಕಲು ಟ್ವಿಟರ್​ ಸಂಸ್ಥೆ ತೀರ್ಮಾನಿಸಿದೆ.

ಟ್ವಿಟರ್
ಟ್ವಿಟರ್
author img

By

Published : Dec 17, 2020, 7:37 AM IST

ವಾಷಿಂಗ್ಟನ್: ಕೊರೊನಾ ವ್ಯಾಕ್ಸಿನ್​ ಸಂಬಂಧಿತ ಸುಳ್ಳು ಮಾಹಿತಿಗಳನ್ನು ತೆಗೆದುಹಾಕಲು ಟ್ವಿಟರ್​ ನಿರ್ಧರಿಸಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ.

ಕೊರೊನಾ ಹಾಗೂ ವ್ಯಾಕ್ಸಿನ್ ಬಗ್ಗೆ ಇರುವ ಆಧಾರ ರಹಿತ ಮಾಹಿತಿಗಳು ಯಾವೆಲ್ಲಾ ಎಂದು ಪಟ್ಟಿ ಮಾಡಿ, ಬಳಿಕ ಅವುಗಳನ್ನು ತೆಗೆದುಹಾಕಲಾಗುತ್ತದೆ. ಮುಂದಿನ ವಾರದಿಂದ ಹೊಸ ನೀತಿಯನ್ನು ಜಾರಿಗೊಳಿಸುವುದಾಗಿ ಟ್ವಿಟರ್​ ತನ್ನ ಅಧಿಕೃತ ಬ್ಲಾಗ್​ನಲ್ಲಿ ಸ್ಪಷ್ಟಪಡಿಸಿದೆ.

ಜನರು ನಿಯಮಗಳನ್ನು ಉಲ್ಲಂಘಿಸಿ ಮತ್ತೆ ಅಂತಹದ್ದೇ ಟ್ವೀಟ್‌ಗಳನ್ನು ಕಳುಹಿಸಿದರೆ ಅದು ವೀಕ್ಷಣೆಗೆ ಬರುವ ಮುನ್ನವೇ ಅಳಿಸಿಹಾಕಲಾಗುತ್ತದೆ ಎಂದು ತಿಳಿಸಿದೆ.

ಆಧಾರರಹಿತ ವದಂತಿಗಳು, ವಿವಾದಿತ ಮಾಹಿತಿಗಳು ಮತ್ತು ಲಸಿಕೆಗಳ ಬಗ್ಗೆ ಅಪೂರ್ಣ ಅಥವಾ ತಪ್ಪು ಮಾಹಿತಿ ರವಾನೆ ಆಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಯನ್ನು ತೆಗೆದುಹಾಕುವುದಾಗಿ ಫೇಸ್‌ಬುಕ್ ಮತ್ತು ಯೂಟ್ಯೂಬ್ ಘೋಷಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.