ಗುವಾಹಟಿ(ಅಸ್ಸೋಂ) : ಈಶಾನ್ಯ ಭಾರತದ ಇತಿಹಾಸವನ್ನ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಆಗ್ರಹಿಸಿ ಟ್ವಿಟರ್ ಅಭಿಯಾನ ನಡೆಸಲಾಗಿದೆ.
ಈಶಾನ್ಯ ವಿದ್ಯಾರ್ಥಿ ಸಂಘಟನೆ ಮತ್ತು ವಿದ್ಯಾರ್ಥಿ ಸಮುದಾಯ ಇಂತಹ ವಿಭಿನ್ನ ಅಭಿಯಾನ ನಡೆಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಪ್ರದೇಶದ ಬಗ್ಗೆ ಅಧ್ಯಾಯಗಳನ್ನು ಸೇರಿಸಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಈಶಾನ್ಯದ ವಿದ್ಯಾರ್ಥಿಗಳು ಟ್ವಿಟರ್ನಲ್ಲಿ ಸಂಜೆಯಿಂದ ಅಭಿಯಾನ ಆರಂಭಿಸಿದ್ದು, ಇದರಿಂದ ಈಶಾನ್ಯ ಭಾರತದ ಜನತೆಯ ವಿರುದ್ಧ ನಡೆಯುತ್ತಿರುವ ಜನಾಂಗೀಯ ಪಕ್ಷಪಾತದಂತಹ ಮನಸ್ಥಿತಿ ಸುಧಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರ ಕುರಿತಂತೆ #AchapterforNE ಮತ್ತು #NortheastMatters ಎಂಬ ಎರಡು ಹ್ಯಾಶ್ಟ್ಯಾಗ್ಗಳು ಟ್ವಿಟರ್ನಲ್ಲಿ ಧ್ವನಿ ಎತ್ತಿವೆ. ಇತ್ತೀಚೆಗೆ ಈಶಾನ್ಯ ಭಾರತದ ಜನರ ವಿರುದ್ಧ ಜನಾಂಗೀಯ ಪಕ್ಷಪಾತದ ಘಟನೆಯ ನಂತರ ಟ್ವಿಟರ್ನಲ್ಲಿ ವಿರೋಧ ಕೇಳಿ ಬಂದಿತ್ತು. ಲುಧಿಯಾನದ ಯೂಟ್ಯೂಬರ್ ಒಬ್ಬ ಅರುಣಾಚಲ ಪ್ರದೇಶದ ಶಾಸಕ ನಿನಾಂಗ್ ಎರಿಂಗ್ ಅವರನ್ನು ‘ಭಾರತೀಯನಂತೆ ಕಾಣದವನು’ ಎಂದು ಸಂಬೋಧಿಸಿ ವಿವಾದಕ್ಕೆ ಗುರಿಯಾಗಿದ್ದರು. ಬಳಿಕ ಆತನನ್ನು ಬಂಧಿಸಲಾಗಿತ್ತು.
-
Today, I am joining Twitter Storm not only as a representative but as a common citizen of North East India.
— Ninong Ering (@ninong_erring) June 4, 2021 " class="align-text-top noRightClick twitterSection" data="
The world needs to know about us and learn about our history, geography, culture and other aspects. 1/3) #NortheastMatters #AchapterforNE @PMOIndia @DrRPNishank @ncert pic.twitter.com/LomO75YuUg
">Today, I am joining Twitter Storm not only as a representative but as a common citizen of North East India.
— Ninong Ering (@ninong_erring) June 4, 2021
The world needs to know about us and learn about our history, geography, culture and other aspects. 1/3) #NortheastMatters #AchapterforNE @PMOIndia @DrRPNishank @ncert pic.twitter.com/LomO75YuUgToday, I am joining Twitter Storm not only as a representative but as a common citizen of North East India.
— Ninong Ering (@ninong_erring) June 4, 2021
The world needs to know about us and learn about our history, geography, culture and other aspects. 1/3) #NortheastMatters #AchapterforNE @PMOIndia @DrRPNishank @ncert pic.twitter.com/LomO75YuUg
ಹೀಗಾಗಿ, ಆ ಪ್ರದೇಶದ ವಿದ್ಯಾರ್ಥಿ ಸಂಘಟನೆಗಳೀಗ ಈಶಾನ್ಯ ಭಾರತದ ಇತಿಹಾಸ ಸಾರುವ, ದೇಶಭಕ್ತಿಯ ಪಠ್ಯ ಅಳವಡಿಸಬೇಕು ಎಂದು ಪಟ್ಟು ಹಿಡಿದಿವೆ. ಈ ಕುರಿತು ಟ್ವಿಟರ್ ಅಭಿಯಾನದಲ್ಲಿ ಭಾಗಿಯಾಗುವಂತೆ ಶಾಸಕ ನಿನೊಂಗ್ ಎರಿಂಗ್ ಸಹ ಮನವಿ ಮಾಡಿದ್ದಾರೆ.