ನವದೆಹಲಿ: ಜ್ಞಾನ ವೃದ್ಧಿಸಲು ತನ್ನ ವಿದ್ಯಾರ್ಥಿಗಳಿಗೆ ನಾರ್ಮಲ್ ಸಲೈನ್ (ಎನ್ಎಸ್) ತೆಗೆದುಕೊಳ್ಳುವಂತೆ ಸೂಚಿಸಿದ್ದಕ್ಕಾಗಿ ದೆಹಲಿ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
ಪೂರ್ವ ದೆಹಲಿಯ ಮಂಡವಾಲಿಯಲ್ಲಿ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ತರಗತಿಗಳನ್ನು ನಡೆಸುತ್ತಿದ್ದ ಬಿಎ 2 ನೇ ವರ್ಷದ ವಿದ್ಯಾರ್ಥಿ ಆರೋಪಿ ಸಂದೀಪ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಯೋರ್ವ ಮನೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ನೋಡಿದ ಪೋಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಿಗೆ ನಾರ್ಮಲ್ ಸಲೈನ್ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಎನ್ಎಸ್ ತೆಗೆದುಕೊಂಡರೆ ಮಕ್ಕಳ ನೆನಪು ಸುಧಾರಿಸುತ್ತದೆ ಎಂದು ಶಿಕ್ಷಕ ಯೂಟ್ಯೂಬ್ನಲ್ಲಿ ನೋಡಿದ್ದನಂತೆ.
ಐಪಿಸಿಯ ಸೆಕ್ಷನ್ 336 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಪ್ರಕರಣದಲ್ಲಿ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.