ETV Bharat / bharat

ಬರೀ 762 ಕಿ.ಮೀ ತಲುಪಲು ಈ ಗೂಡ್ಸ್​ ತೆಗೆದುಕೊಂಡಿದ್ದು, ಬರೋಬ್ಬರಿ 1ವರ್ಷ.. ಮುಂದೇನಾಯ್ತು?

author img

By

Published : May 27, 2022, 8:36 PM IST

ಛತ್ತೀಸ್‌ಗಢದಿಂದ ಗಿರಿಡಿಗೆ 762 ಕಿಮೀ ದೂರವಿದೆ. ಈ ಪ್ರಯಾಣವನ್ನು ಕ್ರಮಿಸಲು ಗೂಡ್ಸ್​ ರೈಲು ಒಂದು ವರ್ಷ ತೆಗೆದುಕೊಂಡಿದೆ. ಇದರ ಪರಿಣಾಮ ಇದರಲ್ಲಿದ್ದ ಸಾವಿರ ಮೂಟೆ ಅಕ್ಕಿ ಹಾಳಾಗಿದೆ. ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ಬಡವರಿಗೆ ಸಿಗಬೇಕಾಗಿದ್ದ ಆಹಾರ ಕೊಳೆತು ಗಬ್ಬು ನಾರುತ್ತಿದೆ.

ಹಾಳಾಗಿರುವ ಅಕ್ಕಿ
ಹಾಳಾಗಿರುವ ಅಕ್ಕಿ

ಗಿರಿಡಿಹ್ (ಜಾರ್ಖಂಡ್​ ): ಹೊಸ ಗಿರಿಡಿಹ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂದು ಸಾವಿರ ಮೂಟೆ ಅಕ್ಕಿ ಬಿದ್ದಿದೆ. ಹತ್ತು ದಿನಗಳ ಹಿಂದೆಯಷ್ಟೇ ಈ ಧಾನ್ಯ ಛತ್ತೀಸ್‌ಗಢದಿಂದ ಗಿರಿಡಿಗೆ ಬಂದಿತ್ತು. ಅರೇ ಇದರಲ್ಲಿ ಏನು ವಿಶೇಷತೆ ಇದೇ ಎಂದು ಅನಿಸುತ್ತಿದೆಯಾ? ಕಂಡಿತಾ ಇದೆ.

ಈ ಅಕ್ಕಿಯನ್ನು ಛತ್ತೀಸ್‌ಗಢದಿಂದ ಗಿರಿಡಿಹ್ ಅಂದರೆ 762 ಕಿಮೀ ದೂರ ಪ್ರಯಾಣಿಸಲು ಒಂದು ವರ್ಷ ತೆಗೆದುಕೊಳ್ಳಲಾಗಿದೆ. ಇದರಿಂದ ನಮ್ಮ ರೈಲ್ವೆ ವ್ಯವಸ್ಥೆ ಹೇಗಿದೆ ಎಂಬುದನ್ನು ನಾವಿಲ್ಲಿ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ಬಡವರಿಗೆ ಸಿಗಬೇಕಾಗಿದ್ದ ಆಹಾರ ಕೊಳೆತು ಗಬ್ಬು ನಾರುವಂತಾಗಿದೆ.

ಛತ್ತೀಸ್‌ಗಢದಿಂದ ಗಿರಿಡಿ ತಲುಪಲು ಒಂದು ವರ್ಷ

2021ರಲ್ಲಿಯೇ ಅಕ್ಕಿ ಲೋಡ್​ ಮಾಡಲಾಗಿದೆ: 2021ರಲ್ಲಿಯೇ ರೈಲಿಗೆ ಅಕ್ಕಿಯನ್ನು ಲೋಡ್​ ಮಾಡಲಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಈ ರೈಲು ಇಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ರೈಲಿನಲ್ಲಿ ಸುಮಾರು 1000 ಅಕ್ಕಿ ಮೂಟೆಗಳಿದ್ದು, ಅದರಲ್ಲಿ 200 ರಿಂದ 300 ಚೀಲ ಅಕ್ಕಿ ಹಾಳಾಗಿದೆ. ಗೂಡ್ಸ್​ ರೈಲಿನಲ್ಲಿ ಬಂದ ಅಕ್ಕಿ ಒಂದೂವರೆ ವರ್ಷ ಹಳೆಯದಾಗಿದ್ದು, ಅದು ಹಾಳಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಈ ಧಾನ್ಯವನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಬಹುಶಃ ಒಂದೂವರೆ ವರ್ಷದ ಹಿಂದೆಯೇ ಇದು ಇಲ್ಲಿಗೆ ಬಂದಿದ್ದರೇ ಚೆನ್ನಾಗಿರುತ್ತಿತ್ತು. ಕಾರಣಾಂತರಗಳಿಂದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಎಫ್‌ಸಿಐ ಗೋಡೌನ್‌ನ ಸಂಚಾಲಕ ಸಂಜಯ್ ಶರ್ಮಾ ಹೇಳಿದ್ದಾರೆ. ಈ ಕುರಿತು ಠಾಣಾಧಿಕಾರಿ ಪಂಕಜ್‌ಕುಮಾರ್‌ ಅವರನ್ನು ಮಾತನಾಡಿಸಿದಾಗ, ಮೇ.17ರಂದು ಕಬ್ಬಿಣದ ಜತೆಗೆ ಎಫ್‌ಸಿಐನ ಧಾನ್ಯ ತುಂಬಿದ ರೈಲು ಬಂದಿದೆ. FCI ಈ ಹಾಳಾಗಿರುವ ಧಾನ್ಯವನ್ನು ತೆಗೆದುಕೊಳ್ಳಲಿಲ್ಲ. ಅಂದಿನಿಂದ ಧಾನ್ಯವು ರ್ಯಾಕ್ ಪಾಯಿಂಟ್‌ನಲ್ಲಿಯೇ ಬಿದ್ದಿದೆ. ಮೇ.31 ರಂದು ರೈಲ್ವೆ ಅಧಿಕಾರಿಗಳು ಆಗಮಿಸಿ ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಶೇ.1ರಷ್ಟು ಕಮಿಷನ್ ಪ್ರಕರಣ : 14 ದಿನದ ನ್ಯಾಯಾಂಗ ಬಂಧನಕ್ಕೆ ಪಂಜಾಬ್​ನ ಮಾಜಿ ಸಚಿವ ವಿಜಯ್ ಸಿಂಗ್ಲಾ

ಈ ಧಾನ್ಯವು ಎಫ್‌ಸಿಐ (ಭಾರತೀಯ ಆಹಾರ ನಿಗಮ) ಗೆ ಸೇರಿದ್ದು, ಧಾನ್ಯವನ್ನು ತೆರೆದ ರೈಲಿನಲ್ಲಿ ತಂದಿದ್ದು, ಅದರ ಮೇಲೆ ಕೇವಲ ಗೋಣಿಚೀಲ ಮತ್ತು ಟಾರ್ಪಲ್​ ಹಾಕಲಾಗಿತ್ತು. ಹಾಗಾಗಿ ಮಳೆ ನೀರು ಈ ಚೀಲಗಳಿಗೆ ಸೇರಿದೆ. ಅಕ್ಕಿ ಬಹಳ ಹಳೆಯದಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೊಳೆತು ಹೋಗಿದೆ. ಈ ಧಾನ್ಯವು ಗಿರಿಡಿನಲ್ಲಿರುವ ಎಫ್‌ಸಿಐ ಗೋಡೌನ್‌ಗೆ ಹೋಗಬೇಕಾಗಿತ್ತು. ಧಾನ್ಯ ಬಂದ ನಂತರ ಎಫ್‌ಸಿಐ ಸಿಬ್ಬಂದಿ, ಸೆನ್ಸಾರ್‌, ಧಾನ್ಯ ಪರಿಶೀಲಿಸಲು ಆಗಮಿಸಿದ ವ್ಯಾಗನ್‌ ತೆರೆದು ನೋಡಿದಾಗ ಹಲವು ಮೂಟೆ ಧಾನ್ಯ ಕೊಳೆತು ಹೋಗಿರುವುದು ಕಂಡು ಬಂತು. ನಂತರ, ಎಲ್ಲಾ ಧಾನ್ಯಗಳನ್ನು ವ್ಯಾಗನ್‌ನಿಂದ ತೆಗೆದು ರ್ಯಾಕ್ ಪಾಯಿಂಟ್‌ನಲ್ಲಿ ಇರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.