ETV Bharat / bharat

12-15 ವಯಸ್ಸಿನ ಮಕ್ಕಳಿಗೆ 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆ - ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ

ತಮಿಳುನಾಡಿನ 12-15 ವಯಸ್ಸಿನ ಮಕ್ಕಳಿಗೆ ನೀಡಲು 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ರಾಜ್ಯ ಸ್ವೀಕರಿಸಿದ್ದು, ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು.

ಕಾರ್ಬೆವಾಕ್ಸ್
ಕಾರ್ಬೆವಾಕ್ಸ್
author img

By

Published : Feb 25, 2022, 6:49 PM IST

ಚೆನ್ನೈ (ತಮಿಳುನಾಡು): 12 ರಿಂದ 18 ವಯಸ್ಸಿನ ಮಕ್ಕಳಿಗೆ ನೀಡಲು ಕಾರ್ಬೆವಾಕ್ಸ್‌ ಕೋವಿಡ್​ ಲಸಿಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಅನುಮೋದನೆ ನೀಡಿದೆ. ತಮಿಳುನಾಡಿನ 12-15 ವಯಸ್ಸಿನ ಮಕ್ಕಳಿಗೆ ನೀಡಲು 3.89 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ರಾಜ್ಯ ಸ್ವೀಕರಿಸಿದೆ.

ಕೇಂದ್ರ ಸರ್ಕಾರವು ರಾಜ್ಯದಲ್ಲಿ 12-18 ವರ್ಷದ ಮಕ್ಕಳಿಗೆ 21.66 ಲಕ್ಷ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ನಿಗದಿಪಡಿಸಿದ್ದು, 3.89 ಲಕ್ಷ ಡೋಸ್ ಸಿಕ್ಕಿದೆ. ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.

ಇದನ್ನೂ ಓದಿ: 12 ರಿಂದ 18 ವಯಸ್ಸಿನವರಿಗೆ ನೀಡುವ ಕಾರ್ಬೆವಾಕ್ಸ್‌ ಲಸಿಕೆಗೆ DCGIಯಿಂದ ಅಂತಿಮ ಅನುಮೋದನೆ

ರಾಜ್ಯದಲ್ಲಿ 15-18 ವರ್ಷದೊಳಗಿನ 33.46 ಲಕ್ಷ ಮಕ್ಕಳು ಲಸಿಕೆಗೆ ಅರ್ಹರಾಗಿದ್ದಾರೆ. ಈ ಪೈಕಿ ಶೇ.82.27 ರಷ್ಟು ಮಕ್ಕಳು ಮೊದಲ ಡೋಸ್ ಹಾಗೂ ಶೇ.37.64ರಷ್ಟು ಮಕ್ಕಳಿಗೆ ಎರಡೂ ಡೋಸ್​ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.