ETV Bharat / bharat

ತಿರುಮಲ ದೇಶದಲ್ಲೇ ಅತೀ ಹೆಚ್ಚು ಭಕ್ತರು ಭೇಟಿ ನೀಡಿದ ಎರಡನೇ ದೇವಸ್ಥಾನ - ಮೊದಲ ಸ್ಥಾನದಲ್ಲಿ ವಾರಾಣಸಿ

ಓಯೋ ಕಲ್ಚರಲ್ ಟ್ರಾವೆಲ್ ರಿಪೋರ್ಟ್​ ಬಹಿರಂಗ - ಈ ವರ್ಷ ಅತೀ ಹೆಚ್ಚು ಭಕ್ತರು ಭೇಟಿ ನೀಡಿದ ಮೊದಲ ದೇವಸ್ಥಾನ ವಾರಾಣಸಿ - ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಿರುಮಲ, ಶಿರಡಿ ದೇವಾಲಯಗಳಿವೆ.

Tirumala
ತಿರುಮಲ
author img

By

Published : Dec 27, 2022, 11:23 AM IST

Updated : Dec 27, 2022, 12:38 PM IST

ತಿರುಮಲ: ದೇಶದಲ್ಲೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ತಿರುಮಲ ಶ್ರೀವಾರಿ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ ಎಂದು ಓಯೋ ಕಲ್ಚರಲ್ ಟ್ರಾವೆಲ್ ರಿಪೋರ್ಟ್ ಬಹಿರಂಗಪಡಿಸಿದೆ. ದೇಶಾದ್ಯಂತ ಭಕ್ತರು ಭೇಟಿ ನೀಡುವ ರಮಣೀಯ ಮತ್ತು ಪ್ರವಾಸಿ ಸ್ಥಳಗಳ ಕುರಿತು ಈ ಸಂಸ್ಥೆ ಸಮೀಕ್ಷೆ ನಡೆಸಿದೆ.

ಸಂಸ್ಥೆಯ ಪ್ರಕಾರ ವಾರಾಣಸಿ ಮೊದಲ ಸ್ಥಾನದಲ್ಲಿದ್ದು, ತಿರುಮಲ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸರ್ಕಾರ ಕೊರೊನಾ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ತಿರುಮಲ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಿರುಪತಿ ನಗರದಲ್ಲಿ ಟೂರಿಸ್ಟ್ ರೂಂ ಬುಕ್ಕಿಂಗ್ ಶೇ.233ರಷ್ಟು ಹೆಚ್ಚಾಗಿದೆ. ಮೂರನೇ ಸ್ಥಾನದಲ್ಲಿ ಶಿರಡಿ ದೇವಾಲಯವಿದೆ.

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ (ಟಿಟಿಡಿ) ಆಂಧ್ರಪ್ರದೇಶದ ವೆಂಕಟೇಶ್ವರನಿಗೆ ಸಮರ್ಪಿತವಾಗಿರುವ ಭಾರತದ ಅತ್ಯಂತ ಜನಪ್ರಿಯ, ಶ್ರೀಮಂತ, ಎರಡನೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದ್ದು, ಪ್ರತಿವರ್ಷ ಈ ದೇವಾಲಯಕ್ಕೆ ಕೋಟಿಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ.

ಭಾರತದ ಉದ್ದಕ್ಕೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಹೀಗೆ ಹಲವು ಧರ್ಮಗಳಿಗೆ ಸಂಬಂಧಪಟ್ಟ ಅದೆಷ್ಟೋ ದೇವಾಲಯಗಳಿವೆ. ಅದರಲ್ಲಿ ಮಿಲಿಯನ್​ಗಟ್ಟಲೆ ಹಿಂದೂ ದೇವಾಲಯಗಳೇ ಇವೆ.

ಆ ಮಿಲಿಯನ್​ಗಟ್ಟಲೆ ದೇವಾಲಯಗಳಲ್ಲಿ ತಿರುಮಲ ದೇವಸ್ಥಾನ ಎರಡನೇ ಸ್ಥಾನವನ್ನು ಗಳಿಸಿದೆ. ತಿರುಮಲ ತಿರುಪತಿ ದೇವಸ್ಥಾನವನ್ನು ಟಿಟಿಡಿ ಮಂಡಳಿ ನಡೆಸುತ್ತಿದ್ದು, ಇದರ ನಿವ್ವಳ ಮೌಲ್ಯ 2.53 ಲಕ್ಷ ಕೋಟಿ. ತಿರುಮಲ ಅತಿ ಹೆಚ್ಚು ಭೇಟಿ ನೀಡುವ ದೇವಾಲಯ ಮಾತ್ರವಲ್ಲದೇ ಭಾರತದ ಅತ್ಯಂತ ಶ್ರೀಮಂತ ದೇವಾಲಯವೂ ಆಗಿದೆ.

ವೈಕುಂಠ ಏಕಾದಶಿ: ವೈಕುಂಠ ಏಕಾದಶಿ ಹಿನ್ನೆಲೆ ತಿರುಮಲ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜ. 2ರಿಂದ 11ರವರೆಗೆ ಹತ್ತು ದಿನಗಳ ಕಾಲ ವೈಕುಂಟ ದ್ವಾರ ದರ್ಶನ ನಡೆಯಲಿದೆ. ಈ ವೇಳೆ ತಿಮ್ಮಪ್ಪನ ದರ್ಶನ ಪಡೆಯಲು ಬರುವ ಭಕ್ತರು ಟೈಮ್​ ಸ್ಲಾಟ್​ ಟೋಕನ್​ ಪಡೆದು ಬರಬೇಕು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್​ ಕುಮಾರ್​ ಸಿಂಘಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ವೈಕುಂಠ ದ್ವಾರ ದರ್ಶನ ಹಿನ್ನೆಲೆ ಆನ್​ಲೈನ್​ನಲ್ಲಿ 300 ರೂಪಾಯಿಗಳು ಎರಡು ಲಕ್ಷ ಎಸ್​ಇಡಿ ಟೋಕನ್​ಗಳನ್ನು ನಿಗದಿ ಪಡಿಸಿದ್ದು, ಜ. 1ರಂದು ಸರ್ವದರ್ಶನ ಟೋಕನ್​ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ. 10 ದಿನಗಳ ಕೋಟಾ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಟೋಕನ್​ ನೀಡುವ ವ್ಯವಸ್ಥೆ ಇರಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾವಿರಾರು ಕೋಟಿ ಒಡೆಯ, ಹತ್ತಾರು ಟನ್​ ಚಿನ್ನದ ಮಾಲೀಕ.. ತಿರುಪತಿ ತಿಮ್ಮಪ್ಪನ ಆಸ್ತಿ ಬಹಿರಂಗ

Last Updated : Dec 27, 2022, 12:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.