ETV Bharat / bharat

ಪ್ರತ್ಯೇಕ ಸ್ಥಳಗಳಲ್ಲಿ ಮೂರು ಹುಲಿ ಮರಿ, ಒಂದು ಕರಡಿಯ ಶವ ಪತ್ತೆ - ಮರಿಗಳ ಶವಪರೀಕ್ಷೆ

ಗರದಾ ಗ್ರಾಮದ ಸರೋವರದ ಬಳಿಯ ಟೆಕೆಪಾರ್​ ಎಂಬಲ್ಲಿಯ ಏತ ನೀರಾವರಿ ಯೋಜನೆಯ ಕಾಲುವೆಯ ತೊಟ್ಟಿಯಲ್ಲಿ ಎರಡು ಹುಲಿ ಮರಿಗಳು ಶವವಾಗಿ ಪತ್ತೆಯಾಗಿವೆ. ಹುಲಿ ಮರಿಗಳು ತೊಟ್ಟಿಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಎರಡನೇ ಘಟನೆ ಪಹುನಿ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿಯೂ ಹುಲಿ ಮರಿಯ ಶವವೊಂದು ಪತ್ತೆಯಾಗಿದೆ. ಇನ್ನೊಂದು ಘಟನೆಯಲ್ಲಿ ಭಂಡಾರಾ ಜಿಲ್ಲೆಯ ದಾವ್ಡಿಪಾರ್ ಬಳಿ ಕರಡಿಯ ಶವ ಪತ್ತೆಯಾಗಿದೆ.

ಪ್ರತ್ಯೇಕ ಸ್ಥಳಗಳಲ್ಲಿ ಮೂರು ಹುಲಿ ಮರಿ, ಒಂದು ಕರಡಿಯ ಶವ ಪತ್ತೆ
author img

By

Published : May 12, 2021, 10:41 PM IST

ಭಂಡಾರಾ (ಮಹಾರಾಷ್ಟ್ರ): ಭಂಡಾರಾ ಜಿಲ್ಲೆಯಲ್ಲಿ ಗರದಾ ಗ್ರಾಮದ ಬಳಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಮೂರು ಹುಲಿ ಮರಿಗಳು ಮತ್ತು ಕರಡಿಯೊಂದು ಮೃತಪಟ್ಟ ಘಟನೆಗಳು ನಡೆದಿವೆ.

ಗ್ರಾಮದ ಸರೋವರದ ಬಳಿಯ ಟೆಕೆಪಾರ್​ ಎಂಬಲ್ಲಿಯ ಏತ ನೀರಾವರಿ ಯೋಜನೆಯ ಕಾಲುವೆಯ ತೊಟ್ಟಿಯಲ್ಲಿ ಎರಡು ಹುಲಿ ಮರಿಗಳು ಶವವಾಗಿ ಪತ್ತೆಯಾಗಿವೆ. ಹುಲಿ ಮರಿಗಳು ತೊಟ್ಟಿಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ.

ಎರಡನೇ ಘಟನೆ ಪಹುನಿ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿಯೂ ಹುಲಿ ಮರಿಯ ಶವವೊಂದು ಪತ್ತೆಯಾಗಿದೆ. ಇನ್ನೊಂದು ಘಟನೆಯಲ್ಲಿ ಭಂಡಾರಾ ಜಿಲ್ಲೆಯ ದಾವ್ಡಿಪಾರ್ ಬಳಿ ಕರಡಿಯ ಶವ ಪತ್ತೆಯಾಗಿದೆ.

ಮರಿಗಳು ಸತ್ತ ಸ್ಥಳದಲ್ಲಿ ಹೆಣ್ಣು ಹುಲಿಯ ಹೆಜ್ಜೆ ಗುರುತು ಪತ್ತೆ: ಭಂಡಾರಾ ಜಿಲ್ಲೆಯ ಟೆಕೆಪಾರ್ ಏತ ನೀರಾವರಿ ಯೋಜನೆ ಹತ್ತಿರದ ಹಳ್ಳಿಯೊಂದರ ಕೆಲ ಯುವಕರು ಪೊಲೀಸ್ ಮತ್ತು ಸೇನಾ ನೇಮಕಾತಿಗಾಗಿ ತಯಾರಿ ನಡೆಸಲು ತಮ್ಮ ದೈನಂದಿನ ದಿನಚರಿಯಂತೆ ಬೆಳಗ್ಗೆ ವ್ಯಾಯಾಮ ಮತ್ತು ದೈಹಿಕ ಅಭ್ಯಾಸಕ್ಕಾಗಿ ಹೋದಾಗ ತೊಟ್ಟಿಯಲ್ಲಿ ಎರಡು ಹುಲಿ ಮರಿಗಳು ಸತ್ತಿರುವುದು ಅವರಿಗೆ ಕಂಡು ಬಂದಿದೆ. ಯುವಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿ ವಜುರ್ಕರ್, ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಬಿ. ಭಾಲವಿ, ಜಿಲ್ಲಾ ವನ್ಯಜೀವಿ ರೇಂಜರ್ಸ್​ನ ನದೀಮ್ ಖಾನ್ ಮತ್ತು ಶಾಹಿದ್ ಖಾನ್ ಸ್ಥಳಕ್ಕೆ ತಲುಪಿ ಸತ್ತ ಮರಿಗಳ ಶವಪರೀಕ್ಷೆ ನಡೆಸಿದರು. ಈ ಸ್ಥಳದಲ್ಲಿ ಹೆಣ್ಣು ಹುಲಿಯ ಹೆಜ್ಜೆಗುರುತುಗಳು ಕಂಡು ಬಂದಿದ್ದು, ಈ ಎರಡು ಮರಿಗಳ ತಾಯಿ ಹತ್ತಿರದಲ್ಲಿಯೇ ಇರುವ ಸಾಧ್ಯತೆ ಇದೆ.

ಪವಾನಿ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಹುಲಿ ಮರಿಯ ಶವ ಪತ್ತೆ: ಎರಡು ದಿನಗಳ ಹಿಂದೆ ಹೆಣ್ಣು ಹುಲಿಯೊಂದು ತನ್ನ ಮರಿಯನ್ನು ಪವಾನಿ ಕಾಡಿನಲ್ಲಿ ಬಿಟ್ಟು ಹೋಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರಿಗೆ ಆಹಾರ ನೀಡಿ ಅದನ್ನು ಅಲ್ಲಿಯೇ ಬಿಟ್ಟಿದ್ದರು. ತಾಯಿ ಹುಲಿ ಹಿಂತಿರುಗಿ ಬಂದು ಮರಿಯನ್ನು ಕರೆದುಕೊಂಡು ಹೋಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಮರಿ ಅದೇ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ.

ದಾವ್ಡಿಪಾರ್​ ಅರಣ್ಯದಲ್ಲಿ ಕರಡಿ ಶವ ಪತ್ತೆ: ಭಂಡಾರ ಅರಣ್ಯ ಇಲಾಖೆಯ ವ್ಯಾಪ್ತಿಯ ದಾವ್ಡಿಪಾರ್ ಪ್ರದೇಶದಲ್ಲಿ ಗಂಡು ಕರಡಿಯ ಶವ ಪತ್ತೆಯಾಗಿದೆ. ಅರಣ್ಯ ಕಾವಲುಗಾರನೊಬ್ಬ ಗಸ್ತು ತಿರುಗುತ್ತಿದ್ದಾಗ ಗಂಡು ಕರಡಿಯ ಮೃತ ದೇಹ ಆತನ ಕಣ್ಣಿಗೆ ಬಿದ್ದಿದೆ. ಅರಣ್ಯ ಅಧಿಕಾರಿ ವಿಜಯ್ ರಾಜೂರಕರ್ ಎಂಬುವರಿಗೆ ಕಾವಲುಗಾರ ಈ ಮಾಹಿತಿ ತಲುಪಿಸಿದ್ದು, ಇಲಾಖೆಯ ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕರಡಿಯ ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.