ETV Bharat / bharat

ಶಸ್ತ್ರಚಿಕಿತ್ಸೆಗೂ ಮುನ್ನ ಧಾರ್ಮಿಕ ಗ್ರಂಥಗಳನ್ನು ಓದಲು ಹೇಳುವ ವೈದ್ಯರು! - ರೋಗಿಗಳ ರೋಗನಿರೋಧಕ ಶಕ್ತಿ

ವೈದ್ಯರು ಶಸ್ತ್ರಚಿಕಿತ್ಸೆಗೂ ಮುನ್ನ ಧಾರ್ಮಿಕ ಗ್ರಂಥಗಳನ್ನು ನೀಡಿ ರೋಗಿಗಳ ಮನೋಬಲ ಹೆಚ್ಚಿಸುವ ಮೂಲಕ ಗಮನ ಸೆಳೆದಿದ್ದಾರೆ.

This UP doctor has made religious scriptures part of cardiac care

author img

By ETV Bharat Karnataka Team

Published : Dec 8, 2023, 1:50 PM IST

ಕಾನ್ಪುರ (ಉತ್ತರ ಪ್ರದೇಶ): ಕಾನ್ಪುರದ ಹೃದ್ರೋಗ ತಜ್ಞರೊಬ್ಬರು ರೋಗಿಗಳಿಗೆ ಧಾರ್ಮಿಕ ಗ್ರಂಥಗಳನ್ನು ನೀಡುವ ಮೂಲಕ ಚಿಕಿತ್ಸೆಯ ಅವಿಭಾಜ್ಯ ಅಂಗವನ್ನಾಗಿ ರೂಢಿ ಮಾಡಿದ್ದಾರೆ. ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸಕರಾಗಿರುವ ಡಾ.ನೀರಜ್ ಕುಮಾರ್ ಎಂಬುವರು ಇಂತಹದ್ದೊಂದು ಹೊಸ ಹವ್ಯಾಸವನ್ನು ಪರಿಚಯಿಸಿದ್ದಾರೆ. ಅಚ್ಚರಿ ಅನ್ನಿಸಿದರೂ ಇದು ನಿಜ!

ಡಾ.ನೀರಜ್ ಕುಮಾರ್ ಅವರು ತಮ್ಮ ರೋಗಿಗಳಿಗೆ ಭಗವದ್ಗೀತೆ, ಹನುಮಾನ್ ಚಾಲೀಸಾ, ಸುಂದರ್‌ಕಾಂಡ್ ಮತ್ತು ರಾಮಾಯಣದಂತಹ ಧಾರ್ಮಿಕ ಗ್ರಂಥಗಳನ್ನು ಶಸ್ತ್ರಚಿಕಿತ್ಸೆಗೂ ಮುನ್ನ ಓದಲು ಹೇಳುವ ಮೂಲಕ ರೋಗಿಗಳ ಹೃದಯವನ್ನು ಗೆಲ್ಲುತ್ತಿದ್ದಾರೆ. ''ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ವಿಜ್ಞಾನ ಮತ್ತು ಅಧ್ಯಾತ್ಮವನ್ನು ಮೇಳೈಸಿ ನೀಡುವ ಚಿಕಿತ್ಸೆಯು ರೋಗಿಗಳ ಸ್ವಭಾವ ಸುಧಾರಣೆಗೆ ತುಂಬಾ ಅನುಕೂಲ. ಧಾರ್ಮಿಕ ಪುಸ್ತಕಗಳನ್ನು ಓದುವುದರಿಂದ ರೋಗಿಗಳು ಮಾನಸಿಕವಾಗಿ ಸದೃಢರಾಗುತ್ತಾರೆ. ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಅವರ ಮನೋಬಲ ಕೂಡ ಹೆಚ್ಚಾಗುತ್ತದೆ'' ಅನ್ನೋದು ಡಾ.ಕುಮಾರ್ ಅವರ ಮಾತು.

''ಹೀಗೆ ಮಾಡುವುದರಿಂದ ಹೃದಯ ಕಾಯಿಲೆ ಅಥವಾ ಇತರ ಸಾಮಾನ್ಯ ಕಾಯಿಲೆಗಳನ್ನು ಹೊಂದಿರುವ ರೋಗಿಗಳ ರೋಗನಿರೋಧಕ ಶಕ್ತಿ ಚೇತರಿಕೆಯಾಗುತ್ತದೆ. ಸುಮಾರು ಒಂದು ವರ್ಷದದಿಂದ ಈ ಹವ್ಯಾಸ ರೂಢಿಸಿಕೊಂಡು ಬರುತ್ತಿರುವುದಾಗಿ'' ಅವರು ಹೇಳಿಕೊಂಡಿದ್ದಾರೆ.

''ರೋಗ ಪತ್ತೆಯಾದ ನಂತರ ರೋಗಿಯು ತನ್ನ ಚಿಕಿತ್ಸೆ ಮತ್ತು ಕುಟುಂಬದ ಬಗ್ಗೆ ಮಾನಸಿಕವಾಗಿ ಚಿಂತಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಭಗವದ್ಗೀತೆ, ಸುಂದರಕಾಂಡ, ಹನುಮಾನ್ ಚಾಲೀಸಾ ಮತ್ತು ರಾಮಾಯಣ ಓದುವುದರಿಂದ ರೋಗಿಯ ಮನಸ್ಸು ಬೇರೆಡೆಗೆ ತಿರುಗುತ್ತದೆ. ಇದು ಅವನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಕೂಡ ಬೀರುತ್ತದೆ. ಆಸ್ಪತ್ರೆಯಲ್ಲಿ ದಾಖಲಾದಾಗ ಧಾರ್ಮಿಕ ಪುಸ್ತಕಗಳನ್ನು ಓದುವ ರೋಗಿಗಳು, ಅವರು ಡಿಸ್ಚಾರ್ಜ್ ಆಗುವಾಗ ಇತರ ರೋಗಿಗಳಿಗಿಂತ ಹೆಚ್ಚು ಸಂತೋಷದಿಂದ ಕಾಣಿಸಿಕೊಳ್ಳುತ್ತಾರೆ. ಆರಂಭದಲ್ಲಿ, ರೋಗಿಗಳಿಗೆ ಓದಲು ಪತ್ರಿಕೆಗಳನ್ನು ನೀಡಲಾಗುತ್ತಿತ್ತು. ಆದರೆ, ಪ್ರತಿಕ್ರಿಯೆಗಳು ಉತ್ತೇಜನಕಾರಿಯಾಗದ ಕಾರಣ, ನಾನು ನಮ್ಮ ರೋಗಿಗಳಿಗೆ ಈ ಪುಸ್ತಕಗಳನ್ನು ನೀಡಲು ಪ್ರಾರಂಭಿಸಿದೆ. ಉತ್ತಮ ಪ್ರತಿಕ್ರಿಯೆಗಳು ಬರಲಾರಂಭಿಸಿತು'' ಎಂದು ಡಾ.ನೀರಜ್ ಕುಮಾರ್ ತಮ್ಮ ವಿಭಿನ್ನ ಚಿಕಿತ್ಸಾ ವಿಧಾನವನ್ನು ವಿವರಿಸಿದ್ದಾರೆ.

ಪುಸ್ತಕಗಳನ್ನು ವೈದ್ಯರೇ ತಮ್ಮ ಸ್ವಂತ ಹಣದಿಂದ ಖರೀದಿ ಮಾಡುವುದು ಮತ್ತು ಅದರ ಖರ್ಚು - ವೆಚ್ಚವನ್ನು ಅವರೇ ಭರಿಸುತ್ತಿರುವುದು ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಶೇಷ ಸಂಗತಿ. ರೋಗಿಗಳನ್ನು ಮಾನಸಿಕವಾಗಿ ಚೇತರಿಕೆ ಮಾಡುವ ವೈದ್ಯರ ಈ ವಿಭಿನ್ನ ಚಿಕಿತ್ಸಾ ವಿಧಾನಕ್ಕೆ ಹಲವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. (IANS)

ಇದನ್ನೂ ಓದಿ: Doctors Day 2023: ರಸ್ತೆ ಅಪಘಾತದಲ್ಲಿ ತಲೆ ಒಡೆದು ಹೊರ ಬಂದ ಮೆದುಳು.. ಬೆಂಗಳೂರಿನ ವೈದ್ಯರಿಂದ ಮಹಿಳೆಗೆ ಪುನರ್ಜನ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.