ETV Bharat / bharat

ವೇಶ್ಯಾವಾಟಿಕೆ ದಂಧೆ: ಠಾಣೆ ಎದುರೇ ಬೆಂಕಿ ಹಂಚಿಕೊಳ್ಳುವ ಬೆದರಿಕೆಯೊಡ್ಡಿದ ತೃತೀಯ ಲಿಂಗಿಗಳು - ದಾಳಿಯಲ್ಲಿ 25 ಅಪ್ರಾಪ್ತರ ರಕ್ಷಣೆ

ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಜಾಗಕ್ಕೆ ದಾಳಿ ನಡೆಸಿರುವ ದೆಹಲಿ ಮಕ್ಕಳ ರಕ್ಷಣಾ ಆಯೋಗ ಹಾಗೂ ಸಿವಾನ್​ ಪೊಲೀಸರು ಸುಮಾರು 15 ಅಪ್ರಾಪ್ತರನ್ನು ರಕ್ಷಿಸಿದ್ದಾರೆ.

Third Genders infront of Police station
ಪೊಲೀಸ್​ ಠಾಣೆ ಎದುರು ತೃತೀಯ ಲಿಂಗಿಗಳು
author img

By

Published : Feb 17, 2023, 7:27 AM IST

Updated : Feb 17, 2023, 1:44 PM IST

ಪೊಲೀಸ್​ ಠಾಣೆ ಎದುರು ತೃತೀಯ ಲಿಂಗಿಗಳು

ಸಿವಾನ್(ಬಿಹಾರ): ಪೊಲೀಸರು ತಮ್ಮಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೃತೀಯಲಿಂಗಿಗಳು ಪೊಲೀಸ್​ ಠಾಣೆ ಎದುರು ಪೆಟ್ರೋಲ್​ ತುಂಬಿದ ಬಾಟಲಿ ಹಿಡಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಬಿಹಾರದ ಸಿವಾನ್​ ಜಿಲ್ಲೆಯ ಮುಫಾಸಿಲ್​ ಪೊಲೀಸ್​ ಠಾಣೆಯ ಹೊರಗೆ ನಡೆದಿದೆ. ಪೊಲೀಸ್​ ಠಾಣೆಯ ಹೊರಗಡೆ ಕೆಲ ತೃತೀಯಲಿಂಗಿಗಳು ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಎಂದು ಗಲಾಟೆ ಸೃಷ್ಟಿಸಿದ್ದು, ಅದರಲ್ಲಿ ಒಬ್ಬರು ಪೆಟ್ರೋಲ್​ ತುಂಬಿದ ಬಾಟಲಿ ಹಿಡಿದು, ನ್ಯಾಯ ಸಿಗದಿದ್ದಲ್ಲಿ ಪೆಟ್ರೋಲ್​ ಸುರಿದು ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇತರ ತೃತೀಯಲಿಂಗಿಗಳೂ ಸಹ ಪೊಲೀಸರ ಮೇಲೆ ಸುಲಿಗೆ ಆರೋಪ ಹೊರಿಸಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಹಾಡು, ಕುಣಿತ ಬಿಟ್ಟರೆ ನಮಗೆ ಹಣ ಸಂಪಾದನೆಗೆ ಬೇರೆ ದಾರಿ ಇಲ್ಲ. ಇದಕ್ಕೂ ಕೂಡ ಪೊಲೀಸರಿಗೆ ವಾರಕ್ಕೆ ಹಣ ಕೊಡಬೇಕು. ಕೊಡದೇ ಹೋದಲ್ಲಿ ಅದೂ ಕೂಡ ನಡೆಯಲ್ಲ. ಇದೀಗ ಪೊಲೀಸರು ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚದುರಿಸಿ, ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಾವು ನೃತ್ಯ ಕಾರ್ಯಕ್ರಮಗಳನ್ನು ಮಾಡಲು ಹೋದಾಗ ಪೊಲೀಸರು ಹಣ ಸಂಗ್ರಹಿಸಲು ಬರುತ್ತಾರೆ. ಇದು ನಮ್ಮ ಜೀವನೋಪಾಯದ ಪ್ರಶ್ನೆ. ನಮಗೆ ಇದಲ್ಲದೆ ಬೇರೆ ಉದ್ಯೋಗ ಇಲ್ಲ. ಇದರಿಂದ ಬಂದ ಹಣದಲ್ಲೆ ನಾವು ಹೊಟ್ಟೆ ತುಂಬಿಸಬೇಕು. ರಕ್ಷಣೆ ಕೊಡಬೇಕಾದ ಪೊಲೀಸರು ಕೂಡ ಈ ರೀತಿ ನಾವು ದುಡಿದ ಹಣವನ್ನು ಸುಲಿಗೆ ಮಾಡಿದರೆ ಹೇಗೆ? ಎಂದು ತೃತೀಯಲಿಂಗಿಗಳಾದ ಮಾಹಿ ಹಾಗೂ ಶೀಮಲೆ ಪ್ರಶ್ನಿಸಿದ್ದಾರೆ.

ಠಾಣೆ ಮುಂದೆ ಜಮಾಯಿಸಿದ್ದ 55 ತೃತೀಯಲಿಂಗಿಗಳು: ಮುಫಾಸಿಲ್​ ಪೊಲೀಸ್​ ಠಾಣೆ ಎದುರು ಸುಮಾರು 55 ತೃತೀಯಲಿಂಗಿಗಳು ಜಮಾಯಿಸಿ, ಗದ್ದಲ ಸೃಷ್ಟಿಸಿದ್ದರು. ಪೊಲೀಸರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ತೃತೀಯ ಲಿಂಗಿಗಳು, ಪೊಲೀಸರು ನಮ್ಮನ್ನು ಕೆಲಸ ಮಾಡಲು ಬಿಡುತ್ತಿಲ್ಲ. ನಾವು ದುಡಿದ ಹಣವನ್ನು ವಸೂಲಿ ಮಾಡುತ್ತಾರೆ. ನಾವು ಹಣ ನೀಡದೇ ಇದ್ದಾಗ, ಕೆಲವು ಪ್ರಕರಣಗಳಲ್ಲಿ ನಮ್ಮನ್ನು ಸಿಲುಕಿಸುತ್ತಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.

ಏನಿದು ಘಟನೆ?: ದೆಹಲಿ ಮಕ್ಕಳ ರಕ್ಷಣಾ ಆಯೋಗದವರು ತೃತೀಯಲಿಂಗಿಗಳ ಜಾಗಕ್ಕೆ ದಾಳಿ ಮಾಡಿದ್ದು, ಅಲ್ಲಿದ್ದ 25 ಅಪ್ರಾಪ್ತರನ್ನು ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆ ಕೆಲವು ತೃತೀಯಲಿಂಗಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ತೃತೀಯಲಿಂಗಿಗಳು ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ನಮ್ಮಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಪುಫಾಸಿಲ್​ ಪೊಲೀಸ್​ ಠಾಣೆ ಎದುರೇ ಗಲಾಟೆ ಸೃಷ್ಟಿಸಿದ್ದಾರೆ. ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಗದ್ದಲ ಮಾಡಿದ್ದಾರೆ.

ಸಿವಾನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ವೇಶ್ಯಾ ದಂಧೆ ನಡೆಸಲಾಗುತ್ತಿದೆ ಎಂದು ಕಳೆದ ವರ್ಷ ನವೆಂಬರ್​ನಲ್ಲಿ ಸಿವಾನ್‌ನ ಕೂಷ್ಮಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಅದರಲ್ಲಿ ಸಿವಾನ್‌ನಲ್ಲಿ ಕೆಲವು ಅಪ್ರಾಪ್ತ ಬಾಲಕಿಯರನ್ನು ಹಾಡುಗಾರಿಕೆ ಮತ್ತು ನೃತ್ಯದ ಜೊತೆಗೆ ವೇಶ್ಯಾವಾಟಿಕೆಗೆ ಕೂಡ ಒತ್ತಾಯಿಸಲಾಗುತ್ತಿದೆ ಎಂದು ದೂರಲಾಗಿತ್ತು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದಾಗ ಪ್ರಕರಣದ ಸತ್ಯಾಸತ್ಯತೆ ಸಾಬೀತಾಗಿದೆ.

ಪೊಲೀಸರು ಹೇಳುವುದೇನು?: ದೆಹಲಿಯ ಮಕ್ಕಳ ರಕ್ಷಣಾ ಆಯೋಗದ ತಂಡ ಮತ್ತು ನಾವು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಪ್ರಾಪ್ತರನ್ನು ರಕ್ಷಿಸಿದ್ದು, ಕೆಲವರನ್ನು ಬಂಧಿಸಿದ್ದೇವೆ. ಅ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಫಾಸಿಲ್ ಪೊಲೀಸ್ ಠಾಣೆಯ ಪ್ರಭಾರಿ ತಿಳಿಸಿದ್ದಾರೆ.

ದಾಳಿಯಲ್ಲಿ 25 ಅಪ್ರಾಪ್ತರ ರಕ್ಷಣೆ: ದೂರಿನ ಆಧಾರದಲ್ಲಿ ಸಿವಾನ್‌ನ ಆರ್ಕೆಸ್ಟ್ರಾ ಆಯೋಜಕರ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ಇಬ್ಬರು ಆರ್ಕೆಸ್ಟ್ರಾ ಆಯೋಜಕರನ್ನು ಬಂಧಿಸಲಾಯಿತು. ಅಲ್ಲಿಂದ ಒಟ್ಟು 25 ಅಪ್ರಾಪ್ತರನ್ನು ದಂಧೆಕೋರರಿಂದ ಮುಕ್ತಗೊಳಿಸಲಾಯಿತು. ಈ ಅಪ್ರಾಪ್ತ ಬಾಲಕಿಯರನ್ನು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಮಿಷವೊಡ್ಡಿ ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ರಕ್ಷಣಾ ಕಲ್ಯಾಣ ಆಯೋಗದ ಮಧ್ಯಸ್ಥಿಕೆಯಿಂದ ಬಹಿರಂಗ: ಈ ವಿಷಯ ಮಕ್ಕಳ ರಕ್ಷಣಾ ಆಯೋಗದ ಗಮನಕ್ಕೆ ಬಂದಾಗ ಆಯೋಗದ ಜಿಲ್ಲಾಧ್ಯಕ್ಷ ಬ್ರಜೇಶ್ ಗುಪ್ತಾ ಅವರು ಸಿವಾನ್ ಎಸ್ಪಿ ಅವರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಹೆಚ್ಎಎಲ್​ನ 833 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಲೀಸ್‌ಗೆ ಕೊಟ್ಟಿದ್ರು!

Last Updated : Feb 17, 2023, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.