ETV Bharat / bharat

ನಿತ್ಯವೂ 44.63 ಲಕ್ಷ ಮೌಲ್ಯದ ಸ್ವತ್ತು ದೋಚಿದ ಖದೀಮರು, ದರೋಡೆ ಪ್ರಕರಣಗಳಲ್ಲಿ ಹೆಚ್ಚಳ: ಎನ್​ಸಿಆರ್​ಬಿ ವರದಿ

NCRB 2022 report: ಖದೀಮರು ಪ್ರತಿದಿನವೂ 44.63 ಲಕ್ಷ ಮೌಲ್ಯದ ಸ್ವತ್ತುನ್ನು ದೋಚಿದ ಪ್ರಕರಣಗಳು ನಡೆದಿವೆ. ಜೊತೆಗೆ 2022ರಲ್ಲಿ ದರೋಡೆ ಪ್ರಕರಣಗಳು ಸಂಖ್ಯೆ ಹೆಚ್ಚಳವಾಗಿದೆ ಎಂದು ಎನ್​ಸಿಆರ್​ಬಿ ವರದಿ ತಿಳಿಸಿದೆ.

NCRB 2022 report
ಪ್ರತಿದಿನವೂ 44.63 ಲಕ್ಷ ಮೌಲ್ಯದ ಸ್ವತ್ತು ದೋಚಿದ ಖದೀಮರು, ದರೋಡೆ ಪ್ರಕರಣಗಳು ಹೆಚ್ಚಳ: ಎನ್​ಸಿಆರ್​ಬಿ ವರದಿ
author img

By ETV Bharat Karnataka Team

Published : Dec 21, 2023, 2:30 PM IST

ಹೈದರಾಬಾದ್: ರಾಜ್ಯದಲ್ಲಿ ಪ್ರತಿವರ್ಷ ದರೋಡೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ (2022ರಲ್ಲಿ) ದಿನವೂ ಕೂಡ 44.63 ಲಕ್ಷ ರೂ. ಮೌಲ್ಯದ ಸ್ವತ್ತು ಕಳ್ಳತನವಾಗಿರುವ ಪ್ರಕರಣಗಳು ವರದಿಯಾಗಿವೆ. ಸಮಾಜಘಾತುಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ಆದರೆ, ಕಳ್ಳತನ ಪ್ರಕರಣಗಳು ಕಡಿಮೆಯಾಗದೇ ಇರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಎನ್​ಸಿಆರ್​ಬಿ ವರದಿ ಏನು ಹೇಳಿತ್ತೆ?: ರಾಷ್ಟ್ರೀಯ ಅಪರಾಧ ಅಂಕಿ - ಅಂಶ ಸಂಸ್ಥೆ (NCRB) ಪ್ರಕಾರ, ಕಳೆದ ವರ್ಷ (2022), ತೆಲಂಗಾಣದಲ್ಲಿ 23,557 ಕಳ್ಳತನ, 495 ಸುಲಿಗೆ ಮತ್ತು 30 ಡಕಾಯಿತಿ ಪ್ರಕರಣಗಳು ನಡೆದಿವೆ. 162.9 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಮತ್ತು ಉಪಕರಣಗಳನ್ನು ಕಳವು ಮಾಡಲಾಗಿದೆ. ಕಳ್ಳರು 2020ರಲ್ಲಿ 104.3 ಕೋಟಿ ರೂಪಾಯಿ ಮತ್ತು 2021 ರಲ್ಲಿ 121.6 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, 2020 ರಿಂದ 2022ರ ಎರಡು ವರ್ಷಗಳ ಅವಧಿಯಲ್ಲಿ ದರೋಡೆಗೊಳಗಾದ ಜನರ ಆಸ್ತಿ ಮೌಲ್ಯವು ಸುಮಾರು 60 ಪ್ರತಿಶತದಷ್ಟು ಹೆಚ್ಚಳ ಆಗಿದೆ.

10 ಲಕ್ಷಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಹಿಂದಿನ ವರ್ಷಕ್ಕೆ ಹೋಲಿಸಿದರೆ, ಪೊಲೀಸರು ಅಪರಾಧ ತಡೆಯಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಗರ ಮತ್ತು ಪಟ್ಟಣಗಳ ಪ್ರಮುಖ ಪ್ರದೇಶಗಳು, ರಸ್ತೆಗಳು ಮತ್ತು ಬೀದಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪುನರಾವರ್ತಿತ ಅಪರಾಧಿಗಳಿಗೆ ಪಿಡಿ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿದೆ. ಇದರಿಂದ ಅವರು ದೀರ್ಘಕಾಲದವರೆಗೆ ಜೈಲಿನಲ್ಲಿ ಕಳೆಯುತ್ತಾರೆ. ಆದರೂ ಕಳ್ಳತನ ಪ್ರಕರಣಗಳು ಕಡಿಮೆಯಾಗದ ಕಾರಣ ಸಾರ್ವಜನಿಕರು ಬೇಸರಕ್ಕೆ ಒಳಗಾಗಿದ್ದಾರೆ.

ಸಂತ್ರಸ್ತರ ಒತ್ತಾಯ: ತೆಲಂಗಾಣದಲ್ಲಿ ಕಳೆದ ವರ್ಷ 162.9 ಕೋಟಿ ರೂ. ಮೌಲ್ಯದ ಆಸ್ತಿಯ ಪೈಕಿ, 84.9 ಕೋಟಿ ರೂ. (ಸುಮಾರು ಶೇ. 53) ಮಾತ್ರ ರಿಕವರಿಯಾಗಿದೆ. ಇನ್ನೂ ಶೇ.47ರಷ್ಟು ರಿಕವರಿಯಾಗಬೇಕಿದೆ. ಪೊಲೀಸರಿಗೆ ಕಳ್ಳರು ಸಿಕ್ಕಿದ್ದಾರೆ, ಆಸ್ತಿ ರಿಕವರಿಯಾಗಿದ್ದು ಬಿಟ್ಟರೆ, ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಸಂತ್ರಸ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸಂತ್ರಸ್ತರು ಪೊಲೀಸರು ಕಣ್ಗಾವಲು ತೀವ್ರಗೊಳಿಸುವಂತೆ ಮತ್ತು ಕಳ್ಳತನವನ್ನು ತಡೆಗಟ್ಟುವಂತೆ ಕೇಳಿಕೊಳ್ಳುತ್ತಿದ್ದಾರೆ. ಕಳ್ಳತನವಾದ ಆಸ್ತಿಯನ್ನು ಹಿಂದಿರುಗಿಸುವ ಬಗ್ಗೆ ಖಚಿತಪಡಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪತ್ನಿ ಹತ್ಯೆ ಮಾಡಿ ಮೃತದೇಹದೊಂದಿಗೆ ಒಂದು ದಿನ ಮಲಗಿದ್ದ ಪತಿ ಅಂದರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.