ETV Bharat / bharat

ಶರದ್ ಪವಾರ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ: ಅಲಯನ್ಸ್​ ಸಂಬಂಧ ಹೇಳಿದ್ದೇನು? - ಶರದ್ ಪವಾರ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ

ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ, ತಾವು ಯಾವುದೇ ಅಲಯನ್ಸ್​ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ..

ಶರದ್ ಪವಾರ್ ಭೇಟಿ ಮಾಡಿದ  ಮಮತಾ ಬ್ಯಾನರ್ಜಿ
ಶರದ್ ಪವಾರ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ
author img

By

Published : Dec 1, 2021, 5:15 PM IST

Updated : Dec 1, 2021, 5:40 PM IST

ಮುಂಬೈ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಯಾವುದೇ ಪಾರ್ಟಿಗಳ ಜೊತೆ ಅಲಯನ್ಸ್​ ಇಲ್ಲ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಫ್ಯಾಸಿಸಂ ವಿರುದ್ಧ ಯಾರೂ ಹೋರಾಡದಂತೆ ದೃಢವಾದ ಪರ್ಯಾಯ ಮಾರ್ಗವನ್ನು ರೂಪಿಸಬೇಕಿದೆ. ಶರದ್ ಜಿ ಹಿರಿಯ ನಾಯಕ. ಹೀಗಾಗಿ, ಅವರ ಜೊತೆ ನಾನು ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಶರದ್ ಜೀ ಏನು ಹೇಳಿದರೂ ನಾನು ಒಪ್ಪುತ್ತೇನೆ. ಆದರೆ, ಯಾವುದೇ ಅಲಯನ್ಸ್​ ಇಲ್ಲ ಎಂದು ಪುನರುಚ್ಚರಿಸಿದರು.

ಬ್ಯಾನರ್ಜಿ ಅವರೊಂದಿಗಿನ ಭೇಟಿಯ ನಂತರ ಮಾತನಾಡಿದ ಪವಾರ್, ಸಹೋದ್ಯೋಗಿಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದೆವು. ಅವರ ಉದ್ದೇಶವೆಂದರೆ, ಇಂದಿನ ಪರಿಸ್ಥಿತಿಯಲ್ಲಿ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರಮಟ್ಟದಲ್ಲಿ ಒಗ್ಗೂಡಬೇಕು ಮತ್ತು ಸಾಮೂಹಿಕ ನಾಯಕತ್ವವನ್ನು ಸ್ಥಾಪಿಸಬೇಕು ಎಂಬುದಾಗಿದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಭೇಟಿ ಕುರಿತು ಶರದ್ ಪವಾರ್ ಪ್ರತಿಕ್ರಿಯೆ ನೀಡಿರುವುದು..

ನಾವು ನಾಯಕತ್ವಕ್ಕೆ ಬಲವಾದ ಪರ್ಯಾಯವನ್ನು ಒದಗಿಸಬೇಕಾಗಿದೆ. ನಮ್ಮ ಚಿಂತನೆಯು ಇವತ್ತಿನದಲ್ಲ. ಇದನ್ನು ಸ್ಥಾಪಿಸಬೇಕು ಮತ್ತು ಆ ಉದ್ದೇಶದಿಂದ ಎಲ್ಲರೂ ಒಗ್ಗೂಡಬೇಕು. ಅವರು ನಮ್ಮೆಲ್ಲರನ್ನು ಭೇಟಿ ಮಾಡಿ ನಮ್ಮೆಲ್ಲರೊಂದಿಗೆ ಅತ್ಯಂತ ಸಕಾರಾತ್ಮಕ ಚರ್ಚೆ ನಡೆಸಿದ್ದಾರೆ ಎಂದು ಪವಾರ್ ತಿಳಿಸಿದರು.

ಇದನ್ನೂ ಓದಿ: ಕುಟುಂಬದಿಂದ, ಪತಿಯಿಂದ ದೂರವಿರುವುದು ಬಹಳ ಕಠಿಣ.. ನಟಿ ಪ್ರಿಯಾಂಕಾ ಚೋಪ್ರಾ

ಇದಕ್ಕೂ ಮುನ್ನ ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸಿದ ಬ್ಯಾನರ್ಜಿ, ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದು ತುಂಬಾ ಸುಲಭ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ಚಿಗೆ ನೀವು ವಿದೇಶದಲ್ಲಿಯೇ ಇದ್ದರೇ ಇಲ್ಲಿ ರಾಜಕೀಯವನ್ನು ಹೇಗೆ ಮಾಡಲಾಗುತ್ತದೆ? ಎಂದು ಮೋದಿ ಕಾಲೆಳೆದ ಅವರು, ರಾಜಕೀಯವು ನಿರಂತರ ಪ್ರಯತ್ನವನ್ನು ಬಯಸುತ್ತದೆ.

ನಾನು ಫೆಡರಲ್ ರಚನೆಯನ್ನು ಬಲಪಡಿಸಬೇಕೆಂದು ಬಯಸುತ್ತೇನೆ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ನಡೆದರೆ ಉತ್ತಮವಾಗುತ್ತದೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷವನ್ನು ಕಟ್ಟುತ್ತವೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ ಬಿಜೆಪಿಯನ್ನು ಸೋಲಿಸುವುದು ಸುಲಭದ ಮಾತು ಎಂದರು.

Last Updated : Dec 1, 2021, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.