ETV Bharat / bharat

ಕೋವಿಡ್ ಸುನಾಮಿ ಕಟ್ಟಿ ಹಾಕುವ ತಂತ್ರ

author img

By

Published : May 24, 2021, 9:12 PM IST

ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ 5,417 ಕೋವಿಡ್ ಸಾವುಗಳು ಸಂಭವಿಸಿವೆ. ಆದರೆ, ಕೇವಲ ಏಪ್ರಿಲ್ ತಿಂಗಳೊಂದರಲ್ಲಿಯೇ ಕೋವಿಡ್ ಸಾಂಕ್ರಾಮಿಕವು 45.000 ಜನರನ್ನು ಬಲಿ ತೆಗೆದುಕೊಂಡಿದೆ.

covid
ಕೋವಿಡ್

ನಾವು ಇದನ್ನು(ಕೊರೊನಾ) ಅಲೆ ಅಂತ ಕರೆಯುತ್ತಿದ್ದೇವೆ. ಆದರೆ, ಇತ್ತೀಚೆಗೆ ದೆಹಲಿಯಲ್ಲಿ ಹೆಚ್ಚುತ್ತಿರುವ ಆಮ್ಲಜನಕ ಬಿಕ್ಕಟ್ಟಿನ ಕುರಿತು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾಗ ’ಇದು ನಿಜಕ್ಕೂ ಸುನಾಮಿ’ ಎಂದು ಹೇಳಿದೆ.

ಕಳೆದ ವರ್ಷ, ಮೊದಲ ಕೋವಿಡ್ ಪ್ರಕರಣವು ಜನವರಿಯಲ್ಲಿ ವರದಿಯಾಗಿತ್ತು. ಆ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗವು ಮೊದಲ 25 ಲಕ್ಷ ಪ್ರಕರಣಗಳನ್ನು ದಾಟಲು ಆರು ತಿಂಗಳುಗಳನ್ನು ತೆಗೆದುಕೊಂಡಿತ್ತು. ಎರಡನೆಯ ಅಲೆ ಎಂದು ಕರೆಯಲ್ಪಡುವ ಈ ವರ್ಷದ ಬೆಳವಣಿಗೆಯಲ್ಲಿ, ಕೇವಲ ಒಂದು ವಾರದ ಅವಧಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 26 ಲಕ್ಷ ದಾಟಿದೆ. ಈ ಅವಧಿಯಲ್ಲಿ 23,800 ಸಾವುಗಳು ವರದಿಯಾಗಿವೆ. ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ 5,417 ಕೋವಿಡ್ ಸಾವುಗಳು ಸಂಭವಿಸಿವೆ. ಆದರೆ, ಕೇವಲ ಏಪ್ರಿಲ್ ತಿಂಗಳೊಂದರಲ್ಲಿಯೇ ಕೋವಿಡ್ ಸಾಂಕ್ರಾಮಿಕವು 45,000 ಜನರನ್ನು ಬಲಿ ತೆಗೆದುಕೊಂಡಿದೆ ಎನ್ನುತ್ತವೆ ಅಧಿಕೃತ ಅಂಕಿ ಅಂಶಗಳು.

ಸದ್ಯ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2 ಕೋಟಿಯ ಗಡಿ ದಾಟಿದ್ದು, ಪ್ರಸಕ್ತ ಸಮಯದಲ್ಲಿ 34 ಲಕ್ಷ ಸಕ್ರೀಯ ಪ್ರಕರಣಗಳಿವೆ. ಈ ಎಲ್ಲಾ ದತ್ತಾಂಶ ನೋಡುತ್ತಿದ್ದರೆ ಒಂದು ದೊಡ್ಡ ಸಾಮಾಜಿಕ ಬಿಕ್ಕಟ್ಟು ಸಂಭವಿಸಿರುವುದನ್ನು ಅದು ಸೂಚಿಸುತ್ತದೆ.

ಭಾರತದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಲಿದೆ ಹಾಗೂ ನಿತ್ಯ ಸಂಭವಿಸುವ ಸಾವುಗಳು ಈ ತಿಂಗಳಲ್ಲಿ 5,000 ಆಗಬಹುದು ಎಂದು ಹಲವಾರು ವಿದೇಶಿ ಸಂಸ್ಥೆಗಳು ಎಚ್ಚರಿಸಿವೆ. ಈ ಆಘಾತಕಾರಿ ಅಂಶ ವ್ಯಕ್ತವಾದ ನಂತರ, ಮತ್ತೊಮ್ಮೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಪ್ರಕಾರ, ಶೇಕಡಾ 73ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ದೆಹಲಿ ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದ 150 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಅದು ರಾಜ್ಯಗಳನ್ನು ಒತ್ತಾಯಿಸುತ್ತಿದೆ.

ಇತ್ತೀಚೆಗೆ ಲಾಕ್‌ಡೌನ್ ಘೋಷಿಸಿದ ರಾಜ್ಯಗಳ ಪೈಕಿ ಹರಿಯಾಣ ಮತ್ತು ಒಡಿಶಾ ಸೇರಿವೆ. ಇನ್ನೂ ಹಲವಾರು ರಾಜ್ಯಗಳು ಕರ್ಫ್ಯೂ ಹೇರಿದ್ದು, ಜೊತೆಗೆ ಕೆಲವು ಕಠಿಣ ಕ್ರಮಗಳನ್ನೂ ಘೋಷಿಸಿವೆ. ಇಂತಹ ಕ್ರಮಗಳ ಹೊರತಾಗಿಯೂ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಹಲವಾರು ದೇಶಗಳು ಭಾರತದಿಂದ ಯಾವುದೇ ರೀತಿಯ ಒಳಪ್ರವೇಶವನ್ನು ನಿಷೇಧಿಸಿವೆ. ಒಂದರ್ಥದಲ್ಲಿ ದೇಶವನ್ನು ಹೊರಗಿನಿಂದ ಲಾಕ್ ಮಾಡಿದಂತಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ರೋಗ ಹರಡುವ ಸರಪಳಿ ಕಡಿತಗೊಳಿಸಲು, ರಾಜ್ಯಗಳೊಂದಿಗೆ ಸಮಾಲೋಚಿಸಿ ಲಾಕ್‌ಡೌನ್ ಹೇರುವ ಆಯ್ಕೆಯನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಿದೆ.

ಜನರ ಜೀವನವನ್ನು ರಕ್ಷಿಸಲು ಸರ್ಕಾರವು ಲಾಕ್‌ಡೌನ್ ವಿಧಿಸುವುದನ್ನು ಪರಿಗಣಿಸಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಸಹ ಹೇಳಿದೆ. ಲಾಕ್‌ಡೌನ್‌ನ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ತನಗೆ ತಿಳಿದಿದೆ ಎಂದು ಕೇಂದ್ರ ಸರ್ಕಾರ ಹೇಳುವಾಗ, ಬಡವರನ್ನು ಹಸಿವಿನಿಂದ ರಕ್ಷಿಸಲು ಮುಂಗಡ ಕ್ರಮಗಳನ್ನು ಕೈಗೊಳ್ಳುವಂತೆ ಸಹ ಈ ನ್ಯಾಯಾಲಯ ಕೋರಿದೆ.

ದೇಶದ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆ ಕುಸಿದಿರುವುದರಿಂದ, ಕೆಲವು ವಾರಗಳವರೆಗಿನ ಲಾಕ್‌ಡೌನ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಅಮೆರಿಕದ ಸಾರ್ವಜನಿಕ ಆರೋಗ್ಯ ತಜ್ಞ ಆಂಟನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಮಾಡಿದಂತೆ ಸಮರೋಪಾದಿಯಲ್ಲಿ ಕೋವಿಡ್ ಆಸ್ಪತ್ರೆಗಳ ನಿರ್ಮಾಣಕ್ಕೆ ಭಾರತ ಮುಂದಾಗಬೇಕು ಎಂದು ಅವರು ಸೂಚಿಸಿದ್ದಾರೆ. ಆಮ್ಲಜನಕ, ಔಷಧಗಳು ಮತ್ತು ಆಸ್ಪತ್ರೆ ಹಾಸಿಗೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವತ್ತ ದೇಶ ಗಮನ ಹರಿಸಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ.

ಪ್ರಧಾನಮಂತ್ರಿಗಳಿಂದ ನೇಮಕಗೊಂಡ ಕೋವಿಡ್ ಕಾರ್ಯಪಡೆ ಕೂಡ ಇದೇ ರೀತಿಯ ಶಿಫಾರಸುಗಳನ್ನು ಮಾಡಿರುವುದರಿಂದ, ಜನರ ಜೀವ ಉಳಿಸಲು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಈಗ ಬಂದಂತಾಗಿದೆ. ಸಾಂಕ್ರಾಮಿಕ ರೋಗದ ಉಗ್ರತೆಯು ಕನಿಷ್ಠ ನಾಲ್ಕೈದು ತಿಂಗಳುಗಳವರೆಗೆ ಉಳಿಯುತ್ತದೆ ಎಂದು ಭಾರತೀಯ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮಗಳ ಒಕ್ಕೂಟ ಅಭಿಪ್ರಾಯಪಟ್ಟಿದೆ. ಸಂಸ್ಥೆಯ ಅಂದಾಜಿನ ಪ್ರಕಾರ ದೇಶಕ್ಕೆ ಕನಿಷ್ಠ 2 ಲಕ್ಷ ಐಸಿಯು ಹಾಸಿಗೆಗಳು, 3 ಲಕ್ಷ ದಾದಿಯರು ಮತ್ತು ಇನ್ನೂ 2 ಲಕ್ಷ ಕಿರಿಯ ವೈದ್ಯರು ಬೇಕಾಗುತ್ತಾರೆ.

ರಾಜ್ಯಗಳ ಸಮನ್ವಯದೊಂದಿಗೆ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಲಸಿಕಾಕರಣವನ್ನು ತೀವ್ರಗೊಳಿಸಲು ಕರೆ ನೀಡುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಕೂಡಾ ಲಾಕ್‌ಡೌನ್ ಪ್ರಸ್ತಾಪವನ್ನು ಬೆಂಬಲಿಸಿದೆ. ದೇಶ ಎದುರಿಸುತ್ತಿರುವ ಅಭೂತಪೂರ್ವ ವಿಪತ್ತನ್ನು ಪರಿಣಾಮಕಾರಿಯಾಗಿ ಎದುರಿಸಲು, ಕೇಂದ್ರವು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಪರಿಗಣಿಸಬೇಕು ಮತ್ತು ಯಾವುದೇ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುವಾಗ ಮಾನವೀಯ ದೃಷ್ಟಿಕೋನದಿಂದ ವರ್ತಿಸಬೇಕಿದೆ. ಆಗ ಮಾತ್ರ ಕೊರೊನಾ ವೈರಸ್‌ನಿಂದ ಉಂಟಾಗುವ ಸಾಮೂಹಿಕ ಮರಣವನ್ನು ನಿಲ್ಲಿಸಲು ಸಾಧ್ಯವಾದೀತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.