ETV Bharat / bharat

ದೇಶದ ಮೊದಲ ಸ್ತ್ರೀವಾದಿ ಗ್ರಂಥಾಲಯ: ಪುರುಷರು ಬರಬಹುದು.. ಆದರೂ ಇದು ಮಹಿಳೆಯರಿಗೆ ಮಾತ್ರ

ಮುಂಬೈನ ಸ್ಲಂ ಏರಿಯಾದಲ್ಲಿ ಸಿಸ್ಟರ್ಸ್​ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಹಿಳಾವಾದದ ನಿಜವಾದ ಪರಿಕಲ್ಪನೆಗೆ ಜೀವ ತುಂಬಿದವರು ಡಾರ್ಜಿಲಿಂಗ್​ ಮೂಲದ ಅಕ್ವಿತಾಮಿ.

The first feminist library in the country
ದೇಶದ ಮೊದಲ ಸ್ತ್ರೀವಾದಿ ಗ್ರಂಥಾಲಯ
author img

By

Published : Mar 4, 2023, 4:53 PM IST

ನಾವು ಹೋಗೋ ತುಂಬಾ ಜಾಗಗಳಲ್ಲಿ ನಾವು ಮಹಿಳೆಯರಿಗೆ ಮಾತ್ರ ಎನ್ನುವ ಬೋರ್ಡ್​ಗಳನ್ನು ನೋಡುತ್ತೇವೆ. ಹಾಗೆಯೇ ಇಲ್ಲೊಂದು ಲೈಬ್ರರಿ ಕೂಡ ಮಹಿಳೆಯರಿಗೆ ಮಾತ್ರ. ಆದರೆ ಈ ಲೈಬ್ರರಿಗೆ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಭೇಟಿ ನೀಡಬಹುದು. ಇಲ್ಲಿರುವ ಪುಸ್ತಕಗಳನ್ನು ಓದಬಹುದು. ಹಾಗಾದರೆ ಇದು ಹೇಗೆ ಮಹಿಳೆಯರಿಗೆ ಮಾತ್ರ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ನಿಜವಾದ ಸ್ತ್ರೀವಾದದ ಪರಿಕಲ್ಪನೆ.

ಹೌದು ಈ ಲೈಬ್ರರಿಗೆ ಪುರುಷರು ಕೂಡ ಬಂದು ಪುಸ್ತಕಗಳನ್ನು ಓದಬಹುದು. ಆದರೂ ಈ ಲೈಬ್ರರಿ ಮಹಿಳೆಯರಿಗೆ ಮಾತ್ರ. ಹೇಗೆಂದರೆ ಈ ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳು ಮಹಿಳೆಯರು ಬರೆದಂತವುಗಳು. ಈ ಲೈಬ್ರರಿಯಲ್ಲಿ ಮಹಿಳೆಯರು ಬರೆದ ಪುಸ್ತಕಗಳಿಗೆ ಮಾತ್ರ ಅವಕಾಶ. ಇಲ್ಲಿನ ಕಬೋರ್ಡ್​, ಶೆಲ್ಫ್​ಗಳಿಗೆ ಮಹಿಳೆಯರು ಬರೆದ ಪುಸ್ತುಕಗಳಿಗೆ ಮಾತ್ರ ಪ್ರವೇಶ ಅವಕಾಶ. ಆದರೆ, ಆ ಪುಸ್ತಕಗಳನ್ನು ಓದಲು ಯಾರು ಬೇಕಾದರೂ ಬರಬಹುದು.

ಮಹಿಳೆಯರ ಅಸ್ತಿತ್ವದ ಚಿಂತನೆಗಳು ಪ್ರೇರಣೆ: ದೇಶದ ಮೊದಲ ಸ್ತ್ರೀವಾದಿ ಗ್ರಂಥಾಲಯ ಇದು. ಈ ಸ್ತ್ರೀವಾದಿ ಗ್ರಂಥಾಲಯ ಎಲ್ಲಿದೆ ಅಂತೀರಾ.. ಮುಂಬೈ ನಗರದ ಧಾರಾವಿ ಸ್ಲಮ್​ನಲ್ಲಿದೆ. ಈ ರೀತಿ ಸ್ತ್ರೀವಾದಿ ಗ್ರಂಥಾಲಯ ನಿರ್ಮಾಣ ಮಾಡುವುದು ಡಾರ್ಜಿಲಿಂಗ್​ನ ಮೂವತ್ತೆರಡರ ಹರೆಯದ ಅಕ್ವಿತಾಮಿ ಅವರ ಕನಸು. ಒಬ್ಬ ಹೆಂಡತಿ, ಮಗಳು ಮತ್ತು ತಾಯಿಯಷ್ಟೇ ಆಗಿರುವ ಮಹಿಳೆಯ ಅಸ್ತಿತ್ವದ ಚಿಂತನೆಗಳನ್ನು ಹೊರತರುವ ಯೋಚನೆ ಅಕ್ವಿತಾಮಿ ಅವರಿಗೆ 'ಸೋದರಿಯರ ಗ್ರಂಥಾಲಯ' ಸ್ಥಾಪಿಸುವಂತೆ ಪ್ರೇರೇಪಿಸಿದವು.

ಈ ಗ್ರಂಥಾಲಯ ಸ್ಥಾಪಿಸಿರುವ ಅಕ್ವಿತಾಮಿ ಅವರು ಮೇಲ್ವರ್ಗದವರಾ ಎಂದು ಕೇಳಿದರೆ.. ಖಂಡಿತಾ ಇಲ್ಲ. ಅಕ್ವಿತಾಮಿ ಅವರ ತಂದೆ ತಾಯಿ ಚಹಾ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಅಲ್ಲಿನ ದುಡಿಮೆಯಲ್ಲಿ ಸಾಕಷ್ಟು ಆದಾಯವಿಲ್ಲದೇ ಮುಂಬೈಗೆ ಆಗಮಿಸಿದಾಗ ಅವರಿಗೆ ಧಾರಾವಿಯ ಕೊಳೆಗೇರಿಗಳು ಆಶ್ರಯ ನೀಡಿದವು. ಆ ಸಮಯದಲ್ಲಿ ಅಕ್ವಿತಾಮಿ ಅವರು ವರ್ಣಭೇದ ನೀತಿ ಮತ್ತು ತಾರತಮ್ಯದಂತಹ ನೋವುಗಳನ್ನು ಅನುಭಿವಿಸಿದ್ದರು.

ಧಾರವಿ ಆರ್ಟ್​ ರೂಂ ಸ್ಥಾಪನೆ: ಅಂತಹ ನೋವುಗಳನ್ನು ನಿಭಾಯಿಸಲು ಕಲೆಗಳು ಸಹಾಯ ಮಾಡುತ್ತವೆ ಎಂಬ ನಂಬಿಕೆ ಅವರಿಗೆ ಹೊಸ ದಾರಿ ತೋರಿಸಿತು. ಅದರಿಂದ ಅವರು ಮೊದಲು 'ಧಾರವಿ ಆರ್ಟ್ ರೂಮ್' ಎಂಬ ಕಲಾಸಂಸ್ಥೆ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಸ್ಲಂನ ಮಕ್ಕಳಿಗೆ ಉಚಿತವಾಗಿ ವಿದ್ಯಾಭ್ಯಾಸ ಹಾಗೂ ಅವರಿಷ್ಟ ಪಡುವ ಕಲೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗಿತ್ತು. ಈ ಸಮಸಯದಲ್ಲಿ ಅವರು ಗ್ರಂಥಾಲಯಕ್ಕೆ ಎಂದು ಖರೀದಿಸಿದ ಪುಸ್ತಕಗಳಲ್ಲಿ ಮಹಿಳಾ ಕೃತಿಗಳಿರುವುದು ಗಮನಕ್ಕೆ ಬಂದಿದೆ.

ಆರು ವರ್ಷಗಳ ಹಿಂದೆ ಲೈಬ್ರರಿ ಪ್ರಾರಂಭ: ಅವರ ವಿಚಾರಧಾರೆಯ ಸೂಕ್ಷ್ಮತೆಗಳು ಮತ್ತು ಅಂಶಗಳನ್ನು ಆಳವಾಗಿ ನೋಡಿದಾಗ ಅನೇಕ ಅದ್ಭುತ ಪುಸ್ತಕಗಳು ಕಂಡು ಬಂದವು. ಮಹಿಳೆಯರೊಂದಿಗಿನ ಈ ನಂಟನ್ನು ಹೀಗೆ ಮುಂದುವರಿಸುವ ಆಲೋಚನೆಯೊಂದಿಗೆ ಅಕ್ವಿತಾಮಿ ಅವರು ಆರು ವರ್ಷಗಳ ಹಿಂದೆ ಸಿಸ್ಟರ್ಸ್​ ಲೈಬ್ರರಿಯನ್ನು ಪ್ರಾರಂಭಿಸಿದರು.

ಮಹಿಳೆಯರಿಗಾಗಿಯೇ ಸಿಸ್ಟರ್ಸ್​ ಟೈಮ್ಸ್​ ಮಾಸಪತ್ರಿಕೆ: ಸ್ಥಳೀಯ ಸಾಹಿತ್ಯದ ಜೊತೆಗೆ ನೇಪಾಳ, ಬಾಂಗ್ಲಾದೇಶ, ನ್ಯೂಜಿಲ್ಯಾಂಡ್​ ಮತ್ತು ಅಮೆರಿಕದ ಕೃತಿಗಳೂ ಈ ಸಿಸ್ಟರ್ಸ್​ ಗ್ರಂಥಾಲಯದಲ್ಲಿ ಲಭ್ಯವಿವೆ. ಕೋವಿಡ್ ಸಂಕ್ರಾಮಿಕ ಹರಡುವ ಮೊದಲು ಅಕ್ವಿತಾಮಿ ಅವರು 'ಸಿಸ್ಟರ್ ರೇಡಿಯೊ' ಎಂಬ ಪಾಡ್‌ಕಾಸ್ಟ್ ಚಾನೆಲ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಸ್ಟರ್ ಪ್ರೆಸ್ ಸ್ಥಾಪಿಸಿ ಸ್ಥಳೀಯ ಮಹಿಳೆಯರ ನೆರವಿನಿಂದ 'ಸಿಸ್ಟರ್ ಟೈಮ್ಸ್' ಮಾಸಪತ್ರಿಕೆಯನ್ನು ಹೊರತರುತ್ತಿದ್ದಾರೆ.

ಇದನ್ನೂ ಓದಿ: ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆ..ಏನೇನೆಲ್ಲಾ ವಿಶೇಷತೆ ಇದೆ ಗೊತ್ತಾ ಇಲ್ಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.